ಸಾಕ್ಷಿ
ವೀಣಾ ನಿರಂಜನ್
ರೆಕ್ಕೆಯಿಲ್ಲದ ಹಕ್ಕಿಯೊಂದು
ಹಾರುವುದ ಕಂಡಿರಾ
ಹಾಯಿಯಿಲ್ಲದ ದೋಣಿಯೊಂದು
ಚಲಿಸುವುದ ಕಂಡಿರಾ
ನೆರಳಿಲ್ಲದ ಜೀವವೊಂದು
ನಡೆಯುವುದ ಕಂಡಿರಾ
ಬಿಸಿಲು, ಗಂಧ, ಗಾಳಿ ಸೋಂಕದ
ನೆಲೆಯೊಂದ ಕಂಡು
ನಿಟ್ಟುಸಿರು ಬಿಟ್ಟಿತು ಕವಿತೆ
ಚಿತ್ರ ಕಟ್ಟಿ ಕೊಟ್ಟ
ಶಬ್ದಗಳೆಲ್ಲ ಒಣಗಿ ಬಿಟ್ಟವು
ಎಲ್ಲಿತ್ತೊ? ಹೇಗಿತ್ತೊ?
ಮಾಯದ ಚಿಟ್ಟೆಯೊಂದು
ಹಾರಿ ಬಂದು
ಅವಳ ನೆತ್ತಿ ಮೂಸಿ ಮುತ್ತನಿಟ್ಟಿತು
ಕನಸುಗಳು ಅರಳಿದವು
ನೆನಪುಗಳು ಮರುಕಳಿಸಿದವು
ನೆಲ ನಗ ತೊಡಗಿತ್ತು!
********
Beautiful & meaningful
Thank you
It’s Beautiful veena
ಹಗುರಾಗಿಯೇ ಹಾರುವ ಈ ಪದ್ಯ ಅರ್ಥ ವಿಸ್ತಾರಕ್ಕೆ ಸದ್ದಿಲ್ಲದೆ ಚಾಚಿಕೊಳ್ಳುತ್ತದೆ