ಗಝಲ್
ರತ್ನರಾಯಮಲ್ಲ
ಬಾಳಲ್ಲಿ ಎಡರು ತೊಡರುಗಳು ಬಂದಾಗ ನಿನ್ನ ಸಹಾಯ ಬೇಕು
ಸಾಮಾಜಿಕ ವ್ಯವಸ್ಥೆಯು ಎದುರಾದಾಗ ನಿನ್ನ ಸಹಾಯ ಬೇಕು
ಈ ಜೀವನದಲ್ಲಿ ನಿನ್ನನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ
ಅನುದಿನವು ನಾನು ಹೊಸ್ತಿಲು ದಾಟುವಾಗ ನಿನ್ನ ಸಹಾಯ ಬೇಕು
ರಜನಿಗೆ ರಜನೀಚರ ಬೆಂಗಾವಲಾಗಿರುವನು ರವಿ ಮೂಡೊವರೆಗೆ
ಕರಾಳ ಅಂಧಕಾರವು ನನಗೆ ಅಪ್ಪಿದಾಗ ನಿನ್ನ ಸಹಾಯ ಬೇಕು
ಅನುರಾಗದ ನಿಷ್ಠೆಯಿಂದ ನಾನು ನಿನ್ನನ್ನು ಹಿಂಬಾಲಿಸುತಿದ್ದೇನೆ
ಜೀವನದಲ್ಲಿ ಉಸಿರಿನೊಂದಿಗೆ ಆಡುವಾಗ ನಿನ್ನ ಸಹಾಯ ಬೇಕು
ನಾವು ಮೊದಲೇ ಭೇಟಿಯಾಗಿದ್ದೆವೆಂದು ಹೃದಯಕ್ಕೆ ತಿಳಿದಿದೆ
‘ಮಲ್ಲಿ’ಯ ಜಿಂದಗಿಯಲ್ಲಿ ತಪ್ಪಾದಾಗ ನಿನ್ನ ಸಹಾಯ ಬೇಕು
******
ತುಂಬಾ ಅರ್ಥಪೂರ್ಣವಾಗಿದೆ.