ಗಾಳೇರ್ ಬಾತ್-05
ಬಿ.ಸಿ.ಎಮ್ hostelನಲ್ಲಿ ಅಡ್ಡ ಹೆಸರುಗಳು…….
ಇವತ್ತು ನಾನೇನಾದರೂ ಒಂದೆರಡು ಅಕ್ಷರ ಬರೆದು ನಿಮಗೆ ಓದ್ಲಿಕ್ ಹಚ್ಚಿನಂದ್ರ ಆಯಪ್ಪನ ಋಣನ ನಾನ್ಯಾವತ್ತೂ ಮರೆಯೋ ಆಗಿಲ್ಲ. ನಾನಷ್ಟೇ ಅಲ್ಲ! ಎಷ್ಟೋ ಬಡ ವಿದ್ಯಾರ್ಥಿಗಳಿಗೆ ದೇವರಾಜ ಅರಸರು ನನ್ನಂತ ಆರಕ್ಕೇರದ ಮೂರಕ್ಕಿಳಿಯದ ಕುಟುಂಬದ ಮಕ್ಕಳಿಗೆ ತಂದೆತಾಯಿ ಎಲ್ಲವನ್ನೂ ಆಗಿಬಿಟ್ಟಿದ್ದ. ಇಂತಹ ದೇವರಾಜ ಅರಸುರವರ ಸ್ಥಾಪಿಸಿದ ಬಿಸಿಎಂ ಹಾಸ್ಟೆಲ್ನಲ್ಲಿ ನನ್ನ ಪ್ರೌಢಶಿಕ್ಷಣ ಮುಗಿಸಿದೆ.
ಆ ವಯಸ್ಸಿನಲ್ಲಿ ಅಲವಾರು ಸ್ವಾರಸ್ಯಕರ ಘಟನೆಗಳು, ವಿಚಿತ್ರವಾದ ಸಂಗತಿಗಳು ನಡೆದಿದ್ದವು. ಅವು ನನಗಷ್ಟೇ ಅಲ್ಲ ಬಿಡ್ರಿ; ನೀವು ಅಂತ ಹಾಸ್ಟೆಲ್ ಅನುಭವ ಪಡೆದಿದ್ದರೆ ನಿಮಗೂ ಕೂಡ ನಡೆದಿರಬಹುದೆನೋ! ಇರ್ಲಿ ನನ್ನ ಅನುಭವ ಒಂಚೂರು ಕೇಳಿಬಿಡಿ. ನಾನೊಂತರ ಓದಿನಲ್ಲಿ weak or strong ಅಂತ ಇವತ್ತಿಗೂ ನಂಗೆ ಕಂಡುಹಿಡಿಲಿಕ್ಕೆ ಆಗಿಲ್ಲ. ನಾನು weak ಅಂದ್ರೆ ನೀವು ನಂಬಂಗಿಲ್ಲ, strong ಅಂದ್ರೆ ನನ್ ಮನಸ್ಸು ಒಪ್ಪಂಗಿಲ್ಲ! ಅದೇನೇ ಇರ್ಲಿ ಬಿಡಿ. ಇವಾಗ ನಿಮಗೆ ಏನು ಹೇಳಬೇಕು ಅನ್ನಕೊಂಡಿದ್ನೋ ಅದನ್ನ ಹೇಳ್ತೀನಿ ಕೇಳಿಬಿಡಿ.
ನಾನು ಆಗ ಸುಮಾರು ಎಂಟನೇ ತರಗತಿ ಓದುತ್ತಿದ್ದೆ. ಆಗ ನಾವು ಹಾಸ್ಟೆಲ್ನಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳು ಎಂಟು ಜನ ಇದ್ದೀವಿ. ಇನ್ನೋಬ್ಬ ಇದ್ದ ಅವನ್ ಸೇರಿಸಿದ್ರೆ ಒಂಬತ್ತು ಆಗ್ತೀವಿ. ಆ ಇನ್ನೋಬ್ಬನ ಹೆಸರು ಜ್ಯೋತಿ ಅಂತ. ಅವನು ಹಾಸ್ಟೆಲ್ ಗೆ ಯಾವಾಗ ಬರ್ತಿದ್ನೋ ಯಾವಾಗ ಹೋಗುತಿದ್ನೋ ನಮ್ಮಪ್ಪನಾಣೆಗೂ ನನಗೆ ಸರಿಯಾಗಿ ಗೊತ್ತಿರಲಿಲ್ಲ. ಉಳಿದವರಲ್ಲಿ ಧರ್ಮ ಅಂತ ಇವನಿಗೆ ನಮ್ಮ ಹೊಟ್ಟಿ ಡುಮ್ಮ ಅಂತ ಹೆಸರಿಟ್ಟದ್ದ. ಆ ಹೊಟ್ಟಿ ಯಾರಪ್ಪ ಅಂತ ಅಂತೀರಾ ಇವತ್ತು ಅವನು C.A study ಮಾಡಕ್ಕೆ ಚೆನ್ನೈನಲ್ಲಿ ಇದಾನ ಇವನ ನಿಜ ಹೆಸರು ಗವಿ ಅಂತ ಕರಿಯದೆ ಇದ್ದರೆ ಈ ಲೇಖನ ಓದಿದ್ರೆ ಅವನ ಮನಸ್ಸೂ ಮತ್ತೆ ನನ್ನ ಮೇಲೆ ಮುನಿಸಿಕೊಳ್ಳದೆ ಇರಲಾರದು. ಧರ್ಮ ಇವನಿಗೆ ಹೊಟ್ಟಿ ಅಂತ ಹೆಸರಿಟ್ಟಕ ಇವನು ಧರ್ಮಗ ಡುಮ್ಮ ಅಂತ ಕರಿತಿದ್ದ. ಇನ್ನೂ ಪೀಪಿ ಇದೇನಪ್ಪಾ ಯಂತ ಹೆಸರು ಅಂತೀರಾ! ಅವತ್ತೇನೋ ಹಾಸ್ಟೆಲ್ ನಲ್ಲಿ ಪಾಯಿಸ ಮಾಡಿದ್ರು ಗಣೇಶ ಹೊಟ್ಟೆತುಂಬಾ ಕುಡಿದಿದ್ದ ಅನಿಸುತ್ತೇ toilet ಗೆ ಹೋಗಿರಲಿಲ್ಲ ಅನಿಸುತ್ತೆ. ಎಲ್ಲರೂಗೂ ಕೇಳಿಸುವಂತೆ ಹೂಸು ಬಿಟ್ಟಾಗ; ಲೇ ಗಣೇಶ ಏನ್ಲೇ ಇದು ಅಂತ ಕೇಳಿದ್ರೆ, ದೇವರು ಕೊಟ್ಟ ಪಿಪಿ ಅಂದಬಿಟ್ಟ. ಅಷ್ಟೇ ಸಾಕಿತ್ತು ನಮಗೆ ಅಂದಿನಿಂದ ಗಣೇಶನ ಹೆಸರು ಪಿಪಿ ಆಗ್ಬಿಡ್ತು. ಇನ್ನು ಡಾಬಾ ಮತ್ತೆ ಬಡಗಿ. ಇವರ ಅಡ್ಡ ಹೆಸರೇ ಸೂಚಿಸುವಂತೆ ಡಾಬಾ ರ ಅಪ್ಪ ಹಗರಿಬೊಮ್ಮನಹಳ್ಳಿಯಲ್ಲಿ ಸಣ್ಣದೊಂದು ಹೋಟಲ್ ಇಟ್ಕೊಂಡಿದ್ದ. ಇದಕ್ಕೆ ಬಡಗಿ ಚಿರಂಜೀವಿಗೆ ಡಾಬಾ ಅಂತ ಗಂಗ ಕರಿತಿದ್ದ. ಇದಕ್ಕೆ ಸಿಟ್ಟಿಗೆದ್ದ ಡಾಬಾ ಗಂಗನಿಗೆ ಬಡಿಗಿ ಎನ್ನಲಿಕ್ಕತಿದ. ಇನ್ನೂ ಪಿಲ್ಲ ! ಇದೆಂತಹ ಹೆಸರು ಅಂತೀರಾ ಈ ಹೆಸರಿನ ಒಡೆಯ ಪ್ರಕಾಶ್ ಅವನದು ಮೂಲತಹ ಪಿಲಮನಹಳ್ಳಿ ಅನ್ನೋ ಊರಿನವನು ಶಾಟ್ ಕಟ್ ಲಿ ಪಿಲ್ ಅಂತ ಕರಿತಿದ್ವಿ. ಇನ್ನೂ ಉಳಿದಿದ್ದು ನಾನು ಮತ್ತು ಪ್ರಭು. ನಂಗೆ ಇವಾಗಲೂ ದೇವರು ಕೊಟ್ಟ ಬಳುವಳಿ ಎನ್ನಬಹುದು. ಅದೇನಪ್ಪಾ ಅಂತೀರಾ ನನ್ ತಲೆ ಸ್ವಲ್ಪ ಶೇಕ್ ಆಗ್ತಿತ್ತು ಇದನ್ನೇ investment ಮಾಡಿಕೊಂಡ ನನ್ನ ಸ್ನೇಹಿತರು ತೂಗ ಅಂತ ಹೆಸರಿಟ್ಟರು ಇಷ್ಟೇಲ್ಲಾ ಹೇಳಿದಮೇಲೆ ಪ್ರಭುಂದು ಒಂದು ಹೇಳಬೇಕು ಅದ್ರೆ ಏನು ಮಾಡೋದು ಅವನ್ ಹೆಸರು ಅವನ ಲವರ್ ಇಂದನೇ ಕರಿತಿದ್ವಿ ಈಗ ಆ ಹೆಸರು ಹೇಳೋದು ಸೂಕ್ತ ಅಲ್ಲ ಅನಿಸುತ್ತದೆ ಯಾಕಂದ್ರೆ ಈಗ ಅವಗಿಂತರ ಲವ್ ಇಲ್ಲ. ಅವಳೆಲ್ಲೋ ಅವನೆಲ್ಲೋ! ನಮಗ್ಯಾಕೆ ಬಿಡ್ರಿ. ನಮ್ಮ ಹೆಸರುಗಳು ನಿಮಗೆ Happy ತಂದಕೊಟ್ರೆ ನನ್ನ ಬರಹಕ್ಕೂ ಶಕ್ತಿ ಬಂದಂತೆ ಅಲ್ವಾ!
******
ಮೂಗಪ್ಪ ಗಾಳೇರ
,,