ಇಂದಿನ ಕವಿತೆ
ಡಾ.ವೈ.ಎಂ.ಯಾಕೊಳ್ಳಿ
ಬೇಡ ಗೆಳೆಯ ನನ್ನ ಕವಿತೆಗಳಲ್ಲಿ ನನ್ನ ಹುಡುಕಬೇಡ
ಬರೀ ನನ್ನ ಬಗ್ಗೆ ನಾನು ಬರೆದರೆ
ಕವಿಯಾಗಲಾರೆ ಕೂಡ
ಪಕ್ಕದಮನೆಯಲಿ ಹಸಿದವರ ಅರೆಹೊಟ್ಟೆಯ ಬಗ್ಗೆ ಬರೆಯದಿರೆ ನನ್ನ ಕವಿತೆ
ಆಗಬಹುದು ಬರೀ ಪದಗಳ ಸಂತೆ
ಸುತ್ತಲಿನ ಜಗದಲಿ ನೋವಿಂದ ನಲುಗಿರಲು ನನ್ನ ಮಂದಿ
ಚಂದ್ರ ತಾರೆಗಳ ಬಗ್ಗೆ ಹಾಡು ಕಟ್ಟಿದರೆ ನಾ ಎಂಥ ಕವಿಯು ಅಂದಿ
ನನ್ನ ಹಾಡು ಜೊತೆಯಾಗಬೇಕು ಗೆಳೆಯ ನನ್ನೂರ ರೈತ ಗೆಳೆಯನ ನೇಗಿಲ ಕುಳಕೆ
ರಾಟಿಯ ಎತ್ತುಗಳ ನೊಗದಿ ಬಾವಿಯಾಳವ ಇಳಿದು ನೀರನು ಹೊತ್ತು ತರಲಿ ಮೇಲಕೆ
ಬೇಡವೆಂದಲ್ಲ ನನಗು ಚಲುವು ಸೌಂದರ್ಯದ ಮಾತು
ಹಸಿವೆ ನೋವುಗಳು ಸುತ್ತ ತುಂಬಿರುವಾಗ ಹೇಗೆ ಬರೆಯಲಿ ಹೇಳು ಅವನು ಕುರಿತು
***********
ಡಾ.ವೈ.ಎಂ.ಯಾಕೊಳ್ಳಿ
ಕವಿ ಸಹೃದಯ ತಾನೇ