ಕಾವ್ಯಯಾನ

ಕಾವ್ಯಯಾನ

ಲಂಗರು ಹಾಕಿದ ಹಡಗು ವಿಜಯಶ್ರೀ ಹಾಲಾಡಿ ಕಾಡಿಗೆ ಕಪ್ಪಿನ ಕತ್ತಲಲ್ಲಿ ಅವಳು ಬಿರಬಿರನೆ ಸಂಚರಿಸುತ್ತಿದ್ದಳು ಮಸಿ ಇರುಳಿನ ಹಾಗೆ ಚೆಲ್ಲಿಕೊಂಡ ಕೂದಲ ಕಡಲು ತೂರಾಡುತ್ತಿದ್ದವು ಕಂಪಿಸಿದ ಎಲೆಎಲೆ ಮಣ್ಣ ಕಣ ಕಣ ಉದುರುತ್ತಿದ್ದ ಧೂಳುಮಳೆ ಅಲ್ಲೇ ಯಥಾಸ್ಥಿತಿಯಲ್ಲೇ ಗಾಬರಿಬಿದ್ದು ಸ್ತಬ್ಧವಾದವು ಕಾಲ್ಗೆಜ್ಜೆಯ ರಿಂಗಣಕ್ಕೆ ಕಪ್ಪೆ ಕೀಟ ರಾತ್ರಿ ಸಡಗರಿಸಿ ಪುಳಕವಾದವು .. ನದೀ ತೀರದಲ್ಲಿ ಮರ ಗಿಡ. ತಂಗಾಳಿಯೊಂದಿಗೆ ಘಲ್ ಘಲ್ ಸಪ್ಪಳ -ವಾಲಿಸಿದ ಗೂಬೆಯೊಂದು ಬಂಡೆಯಾಚೆ ಸರಿದು ಕ್ಷಣದಲ್ಲಿ ಮರೆಯಾಯಿತು ಅದರ ಮಿದು ಕಂದಮ್ಮ -ಗಳು […]

ಕವಿತೆ ಕಾರ್ನರ್

ಯುದ್ದವೆಂದರೆ ಕು.ಸ.ಮಧುಸೂದನ ಯುದ್ದವೆಂದರೆ ಕೋವಿ ಫಿರಂಗಿಗಳು ಮದ್ದು ಗುಂಡುಗಳು ಸೋಲು ಗೆಲುವುಗಳು ಮಾತ್ರವಲ್ಲ ಯುದ್ದವೆಂದರೆ ಅಂಗೈನ ಮದರಂಗಿ ಆರುವ ಮೊದಲೇ ಹಣೆಕುಂಕುಮ ಅಳಿಸಿಕೊಳ್ಳುವ ಹೆಣ್ಣಗಳು ಅಪ್ಪನ ತಬ್ಬುವ ಮೊದಲೇ ತಬ್ಬಲಿಯಾಗುವ ಹಸುಗೂಸುಗಳು ಮಗನ ಮನಿಯಾರ್ಡರಿಗಾಗಿ ಕಾತು ಕೂತ ಮುದಿಜೀವಗಳು. ಮತ್ತೂ ಯುದ್ದವೆಂದರೆ ಇರುವುದೆಲ್ಲವ ನಾಶ ಮಾಡಹೊರಟು ತಾವೂ ನಾಶವಾಗುವ ಹಳೆಯ ಆಟ ಮನುಕುಲದ ಖಳರ ಚಟ! *********

ಕಾವ್ಯಯಾನ

ಸತ್ತ ದೇಹದ ಉಸಿರು ಶ್ರೀದೇವಿ ಕೆರೆಮನೆ “ನೀನು ತುಂಬ ಗಟ್ಟಿ” ಒಂದಿಷ್ಟು ಜಗಳ, ವಾದವಿವಾದ ಮುಗಿಸಿದ ನಂತರ ಎರಡು ದಿನ ಅಖಂಡ ಮೌನವೃತವನ್ನಾಚರಿಸಿ ಇನ್ನೇನು ದಿನ ಮುಗಿದು ಎಲ್ಲರೂ ನಿದ್ದೆಗೆ ಜಾರಿ ನಾನು ಮಾತ್ರ ನಿದ್ರಾಹೀನಳಾಗಿ ಹೊರಳಾಡುವ ರಾತ್ರಿಯ ಮೊದಲ ಪ್ರಹರದ ಕೊನೆಯಲ್ಲಿ ಹೇಳಿದ ನಾನು ಮಾತನಾಡಲಿಲ್ಲ “ನನ್ನ ಬಿಟ್ಟು ನೀನು ಬದುಕಬಲ್ಲೆ ಬಿಡು” ಒಂದುವರೆ ನಿಮಿಷದ ಚಿಕ್ಕ ಮೌನದ ನಂತರ ಮತ್ತೊಮ್ಮೆ ತಣ್ಣನೆಯ ದನಿಯಲ್ಲಿ ಕೂರಲಗಿನಂತೆ ಉಸುರಿದ ನಾನು ಮಾತಾಡಲಿಲ್ಲ ಆಗಲೂ ಯಾವ ಮಾತಿಂದಲೂ ಏನೂ […]

ಕಾವ್ಯಯಾನ

ಆಕಳಿಸುವ ನಟ್ಟಿರುಳು ಬಿದಲೋಟಿ ರಂಗನಾಥ್ ನಟ್ಟಿರುಳ ಕತ್ತಲೆಯಲಿ ಎಚ್ಚರವಾಗಿ ಕೂತೆ ಕರುಳು ಕಲೆತ ಭಾವ ಉಸಿರಾಡುತ್ತಿತ್ತು ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು ನಟ್ಟಿರುಳ ಕತ್ತಲೆಯಲಿ ಎಚ್ಚರವಾಗಿ ಕೂತೆ ಕರುಳು ಕಲೆತ ಭಾವ ಉಸಿರಾಡುತ್ತಿತ್ತು ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು ಬುಡ್ಡಿ ಹಿಡಿದ ಕೈಯಲ್ಲಿ ಆತ್ಮ ಚರಿತ್ರೆಯ ಮೊದಲ ಪುಟ ಮಬ್ಬು ಬೆಳಕಿನಲ್ಲಿ ನವಿಲೊಂದರ ನಾಟ್ಯ ಅತ್ತರೆ ಕಣ್ಣೀರಲ್ಲಿ ತೊಳೆದು ಹೋಗಬಹುದೆಂದು ಬಿಡುಗಣ್ಣನು ಮುಚ್ಚಿದೆ ಚಲ್ಲಿಸುತ್ತಲೇ ಇರುವ ಚಿತ್ರದ ಹೆಜ್ಜೆ ಸಪ್ಪಳ ಕಿವಿಗಳನ್ನು ತುಂಬುತ್ತಲೇ ಇತ್ತು. […]

ಅನುವಾದ ಸಂಗಾತಿ

“ನಾನು ದಣಿದಿದ್ದೇನೆ” ಮೂಲ: ಟಿನ್ಜಿನ್ ತ್ಸುನದು(ಟಿಬೇಟಿಯನ್ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ “ನಾನು ದಣಿದಿದ್ದೇನೆ” ನಾನು ದಣಿದಿದ್ದೇನೆ,ನಾನು ದಣಿದಿದ್ದೇನೆ ಮಾರ್ಚ ಹತ್ತರ ಆಚರಣೆ ಮಾಡುತ್ತಧರ್ಮಶಾಲಾದ ಗುಡ್ಡಗಳಿಂದ ಚೀರುತ್ತ. ನಾನು ದಣಿದಿದ್ದೇನೆ,ನಾನು ದಣಿದಿದ್ದೇನೆ ಹಾದಿಬದಿ ಸ್ವೇಟರುಗಳನ್ನ ಮಾರಾಟ ಮಾಡುತ್ತನಲ್ವತ್ತು ವರ್ಷಗಳ ಕಾಲಧೂಳು, ಎಂಜಲುಗಳ ನಡುವೆ ಕುಳಿತುಕೊಳ್ಳುತ್ತ. ನಾನು ದಣಿದಿದ್ದೇನೆಅನ್ನ, ದಾಲ್ ತಿನ್ನುತ್ತಾಕರ್ನಾಟಕದ ಜಂಗಲ್ಲುಗಳಲ್ಲಿ ದನ ಕಾಯುತ್ತ. ನಾನು ದಣಿದಿದ್ದೇನೆಮಂಜು-ತಿಲಾದ ಕೊಳಚೆಯಲ್ಲಿನನ್ನ ಧೋತಿಯ ಎಳೆದಾಡುತ್ತ. ನಾನು ದಣಿದಿದ್ದೇನೆ, ನಾನು ನೋಡೇ ಇಲ್ಲದನನ್ನ ನಾಡಿಗಾಗಿ ಹೋರಾಡುತ್ತ.*************ಮಾರ್ಚ್ ಹತ್ತು: ಟಿಬೆಟಿಯನ್ ಕ್ರಾಂತಿ ದಿನ*ಧರ್ಮಶಾಲಾ: […]

ಸ್ವಾತ್ಮಗತ

ಗಜಾನನ ಹೆಗಡೆ ಅಸ್ತಂಗತ.. ಕೆ.ಶಿವು ಲಕ್ಕಣ್ಣವರ ಖ್ಯಾತ ಸುದ್ದಿ ನಿರೂಪಕ, ಹಿರಿಯ ಪತ್ರಕರ್ತ ಗಜಾನನ ಹೆಗಡೆ ಅಸ್ತಂಗತ..! ಖ್ಯಾತ ಸುದ್ದಿ ನಿರೂಪಕ, ಹಿರಿಯ ಪತ್ರಕರ್ತ ಗಜಾನನ ಹೆಗಡೆ ಇಂದು ವಿಧಿವಶರಾಗಿದ್ದಾರೆ. ಇತ್ತೀಚಿಗೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ ಜೆ.ಪಿ.ನಗರದ ಪಿ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೨೬-೨-೨೦೨೦ರಂದು ಮಧ್ಯಾಹ್ನ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ಒಬ್ಬ ಪುತ್ರ (ಮಯೂರ) ಹಾಗೂ ಒಬ್ಬ ಪುತ್ರಿ ಇದ್ದಾರೆ. ಉತ್ತರ […]

ಕಾವ್ಯಯಾನ

ವಿರಹಿಣಿ ವಿಜಯಶ್ರೀ ಹಾಲಾಡಿ (ಸುಮ್ನೇ ಹೀಗೊಂದು ಝಲಕ್) ಯಾರೋ ಕವಿ ಬರೆದವಿರಹಿಣಿಯ ಚಿತ್ರಣಕಾದು ಕಾದು ಕಾಲುಬೆರಳುಸಪೂರ ಆಗಿ ಕಾಲುಂಗುರಕಳೆದುಹೋದ ಕತೆ .. ಅಬ್ಬಎಷ್ಟೂಂತ ಕಾಯುವುದುಮೊನ್ನೆಯಿಂದ ಇದ್ದೇನೆಇಲ್ಲೇ ಆನ್ ಲೈನಲ್ಲೇ….ಮಧ್ಯರಾತ್ರಿಯ ಕೊನೆಗೆಐದು ನಿಮಿಷತೂಕಡಿಸಿದಾಗಲೂ ಸುಪ್ತಮನಸ್ಸಿನ ಎಚ್ಚರಹೃದಯ ಹಿಂಡಿದಂತೆನರನರಗಳೆಲ್ಲ ಹೊಸೆದಂತೆರಿಂಗ್ ಟೋನೇ ಕರೆದಂತೆ … ಎಲ್ಲಿ ಹೋದ ಇವನುಮರೆತನೇ ಮೊಬೈಲ್-ಕಳಕೊಂಡನೇ -ನೆಟ್ವರ್ಕ್ಇಲ್ಲದ ಕಾಡುಗಳಲ್ಲಿಅಲೆಯುತ್ತಿರುವನೇಈ ನನ್ನವನು …ಅಥವ ಇನ್ನವಳ್ಯಾರೋಶ್! ಹುಚ್ಚಿ ಹಾಗೇನಿರಲ್ಲ. ! ‘ಇವಳೇನು ಇಲ್ಲೇಬೀಡುಬಿಟ್ಟಿದ್ದಾಳೆಂದು’ಗೆಳೆಯ ಗೆಳತಿಯರೆಲ್ಲHii. ಎಂದರುಅಣಕಿಸಿ ನಕ್ಕರುಕಣ್ಣುಹೊಡೆದರುಛೆನನ್ನ ವಿರಹವನದಿಯಂತೆ ಬೆಳೆಸುತ್ತಲೇಆಫ್ ಲೈನಾದರು …. ಸಿಟ್ಟಿಗೆ ಮೊಬೈಲ್ ಕುಕ್ಕಿಜೋಡಿಸಿಟ್ಟ ಪುಸ್ತಕಬಟ್ಟೆಗಳನೆಲ್ಲ ನೆಲಕ್ಕೆಅಪ್ಪಳಿಸಿದ್ದಾಯಿತುಸಂದೇಶಗಳ […]

ಕಾವ್ಯಯಾನ

ಮನದಿಂ ನಗು ರೇಖಾ ವಿ.ಕಂಪ್ಲಿ ನಗುವ ನಗು ಮನದಿಂ ಮಗುವ ನಗುವ ನಗು ನಗುವ, ನಗಲೆಂದು ನಗದಿರು ನಗುವ ನಕ್ಕರೆ ಸಕ್ಕರೆ ಗಿಂತ ಸಿಹಿಯಾದ ನಗುವ ನಗು ಮೊಗದ ಕಳೆಗಾಗಿ ನಗುವ ನಗದಿರು ಮನದ ಕೊಳೆಯನು ತೊರೆದು ನಗು ಬುದ್ಧಿ ಶುದ್ಧಿಯೊಳು ನಗುವ ನಗು ಕಿರು ನಗೆಯು ನೊರೆ ಹಾಲಿನ ನಗುವ ನಗು ಝರಿ ದಾರೆಯ ಜಳಪಿಸುವ ನಗುವ ನಗು ನಗುವ ನಗು ಮನದಿಂ ನಿನ್ನ ಮನದ ನಗೆಯ ನಗು ಎದಿರಿರುವವನ ಎದೆ ನಗುವಂತೆ ನಗು ಅಪಹಾಸ್ಯ […]

ಕಾವ್ಯಯಾನ

ಸ್ಪಟಿಕವಾಗಬೇಕಿದೆ ಮೂಗಪ್ಪ ಗಾಳೇರ ಹಕ್ಕಿಗಳಿಗೆ ಗೂಡ ಕಟ್ಟಲು ಯಾವ ಮರದ ಅನುಮತಿ ಬೇಕಿಲ್ಲ ಇರುವೆಗಳು ಸಾಲಾಗಿ ನಡೆಯಲು ಯಾವ ಅಭಿಯಂತರರ ನೀಲಿನಕ್ಷೆ ಬೇಕಿಲ್ಲ ಹಾಗಂತ ಈ ಹೃದಯವೇನು ಬಿಟ್ಟಿ ಬಿದ್ದಿಲ್ಲ ನಿನ್ನಿಷ್ಟ ಬಂದಾಗೆ ಬಂದು ಹೋದಾಗೆ ಹೋಗಲು………. ಶಾಂತ ಸಾಗರದಲ್ಲಿ ತೇಲುವ ನಾವೆಯಂತೆ ಈ ಹೃದಯ ಮೊದಲು ದಡ ಸೇರಬೇಕೋ ಇಲ್ಲೇ ಇದ್ದು ಸಾಗರದ ಸವಿ ಸವಿಯಬೇಕೋ……. ಎದೆಯೊಳಗೆ ನೂರೆಂಟು ತಳಮಳ ಏಕಾಂತದಲ್ಲಿ ಇದ್ದರು ನಿನ್ನದೇ ಪ್ರೀತಿಯ ಪರಿಮಳ ಮತ್ತೆ ಮತ್ತೆ ಹೃದಯದ ಕೋಣೆಯಲ್ಲಿ ನಿನ್ನದೇ ಸಡಗರ…….. […]

Back To Top