ಅನುವಾದ ಸಂಗಾತಿ

“ನಾನು ದಣಿದಿದ್ದೇನೆ”

Close Up Photo of Person Standing on Seashore

ಮೂಲ: ಟಿನ್ಜಿನ್ ತ್ಸುನದು(ಟಿಬೇಟಿಯನ್ ಕವಿ)

Image may contain: 1 person, glasses and hat

ಕನ್ನಡಕ್ಕೆ: ಕಮಲಾಕರ ಕಡವೆ

“ನಾನು ದಣಿದಿದ್ದೇನೆ”

ನಾನು ದಣಿದಿದ್ದೇನೆ,
ನಾನು ದಣಿದಿದ್ದೇನೆ ಮಾರ್ಚ ಹತ್ತರ ಆಚರಣೆ ಮಾಡುತ್ತ
ಧರ್ಮಶಾಲಾದ ಗುಡ್ಡಗಳಿಂದ ಚೀರುತ್ತ.

ನಾನು ದಣಿದಿದ್ದೇನೆ,
ನಾನು ದಣಿದಿದ್ದೇನೆ ಹಾದಿಬದಿ ಸ್ವೇಟರುಗಳನ್ನ ಮಾರಾಟ ಮಾಡುತ್ತ
ನಲ್ವತ್ತು ವರ್ಷಗಳ ಕಾಲ
ಧೂಳು, ಎಂಜಲುಗಳ ನಡುವೆ ಕುಳಿತುಕೊಳ್ಳುತ್ತ.

ನಾನು ದಣಿದಿದ್ದೇನೆ
ಅನ್ನ, ದಾಲ್ ತಿನ್ನುತ್ತಾ
ಕರ್ನಾಟಕದ ಜಂಗಲ್ಲುಗಳಲ್ಲಿ ದನ ಕಾಯುತ್ತ.

ನಾನು ದಣಿದಿದ್ದೇನೆ
ಮಂಜು-ತಿಲಾದ ಕೊಳಚೆಯಲ್ಲಿ
ನನ್ನ ಧೋತಿಯ ಎಳೆದಾಡುತ್ತ.

ನಾನು ದಣಿದಿದ್ದೇನೆ, ನಾನು ನೋಡೇ ಇಲ್ಲದ
ನನ್ನ ನಾಡಿಗಾಗಿ ಹೋರಾಡುತ್ತ.
************
*ಮಾರ್ಚ್ ಹತ್ತು: ಟಿಬೆಟಿಯನ್ ಕ್ರಾಂತಿ ದಿನ
*ಧರ್ಮಶಾಲಾ: ವಲಸೆಯಲ್ಲಿರುವ ಟಿಬೆಟಿಯನ್ ಸರಕಾರದ ಕೇಂದ್ರ
*ಮಂಜು-ತಿಲಾ : ದೆಹಲಿಯ ಟಿಬೆಟಿಯನ್ ಕಾಲನಿ.

=======

“I am Tired”

I am tired,
I am tired doing that 10th March ritual,
screaming from the hills of Dharamsala.

I am tired,
I am tired selling sweaters on the roadside,
40 years of sitting
in dust and spit.

I am tired,
eating rice ‘n dal
and grazing cows in the jungles of Karnataka.

I am tired dragging my dhoti
in the dirt of Manju Tila.

I am tired fighting for the country
I have never seen.

Dhoti – sarong-like garment worn by men in India
Manju Tila – Tibetan colony in Delhi called Majnu-ka-Tilla

**********

One thought on “ಅನುವಾದ ಸಂಗಾತಿ

Leave a Reply

Back To Top