ಮತ್ಲಾ ಗಜಲ್
ಮತ್ಲಾ ಗಜಲ್ ತೇಜಾವತಿ ಹೆಚ್.ಡಿ. ನೀನಿರದ ವಿರಾಮವು ಬೇಡವಾಗಿವೆ ಈಗಮಾಯಾ ಮನಸ್ಸು ಖಿನ್ನತೆಗೆ ಜಾರುತಿವೆ ಈಗ ನೀ ನೋಡದ ಅಲಂಕಾರವು ಮಂಕಾಗಿವೆ ಈಗತೊಟ್ಟ ಆಭರಣಗಳೇ ಭಾರವಾಗಿವೆ ಈಗ ನಿನ್ನಗಲಿದ ಇರುಳೆಲ್ಲವೂ ಘೋರವಾಗಿವೆ ಈಗದೇವಾ ಕಂಡ ಕನಸೆಲ್ಲವೂ ದುಃಸ್ವಪ್ನವಾಗಿವೆ ಈಗ ನೀನಾಡದ ಮಾತುಗಳು ಕರಗಿ ಹೋಗಿವೆ ಈಗಅಳಿದುಳಿದ ಭಾವನೆಗಳು ಹೆಪ್ಪುಗಟ್ಟಿವೆ ಈಗ ನೀನಿಲ್ಲದ ನಂದನವನ ಬರಡಾಗಿವೆ ಈಗಬೀಸುವ ತಂಗಾಳಿಯೂ ಬತ್ತಿಹೋಗಿವೆ ಈಗ ‘ತೇಜ’ ನೀ ಬಾರದ ದಿನಗಳು ಸ್ತಬ್ಧವಾಗಿವೆ ಈಗಹಗಲು ರಾತ್ರಿಯ ವ್ಯತ್ಯಾಸವೇ ತಿಳಿಯದಾಗಿವೆ ಈಗ *
ಭೂತಾಯಿಗೆ ನಮನ
ಲೇಖನ ಭೂತಾಯಿಗೆ ನಮನ ರಾಘವೇಂದ್ರ ಈ ಹೊರಬೈಲು ಇವತ್ತು ರಾತ್ರಿಯೆಲ್ಲಾ ಎಚ್ರಾಗಿರ್ಬೇಕು, ಮಲಗ್ಬಿಟ್ಟಿಯೋ. ರಾತ್ರಿಯೆಲ್ಲ ಹಬ್ಬ ಮಾಡ್ಬೇಕು, ಹಬ್ಬದಾಗೆ ಎಚ್ರಾಗಿರ್ದೆ ಹಂಗೆ ಮಲ್ಗಿದ್ರೆ ದೇವ್ರು ಶಾಪ ಕೊಡ್ತಾನೆ ಕಣೋ” ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮಮ್ಮನಾಡಿದ ಮಾತುಗಳು ಎಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿವೆ. “ಇದ್ಯಾವ ಹಬ್ಬನಪ್ಪ, ರಾತ್ರಿಯೆಲ್ಲ ಎಚ್ರಾಗಿರ್ಬೇಕಂತೆ” ಎಂದು ಗೊಣಗುಟ್ಟುತ್ತಾ ತೂಕಡಿಸುತ್ತಾ, ಅಮ್ಮನೋ ಅಪ್ಪನೋ ಹೇಳ್ತಾಯಿದ್ದ ಸಣ್ಣಪುಟ್ಟ ಕೆಲಸಗಳನ್ನು ಒಲ್ಲದ ಮನಸ್ಸಿನಿಂದ ನಿದ್ರೆಗಣ್ಣಿನಲ್ಲೇ ಮಾಡುತ್ತಾ, ಕೆಲವೊಮ್ಮೆ ಹೆಚ್ಚು ಕಡಿಮೆಯಾಗಿ, ಬೈಸಿಕೊಳ್ಳುತ್ತಾ ರಾತ್ರಿ ಕಳೆಯುತ್ತಿದ್ದ ಆ ದಿನಗಳನ್ನು […]
ಗಝಲ್
ಗಝಲ್ ಸುಜಾತಾ ರವೀಶ್ ಅಕ್ಷರದ ಪಯಣಕ್ಕೆ ಒಂದಾಗಿ ಹೊರಡೋಣ ಬರುವೆಯಾ ಸಂಗಾತಿ ಅಕ್ಷಯದ ಒಲವಿನ ಸುಗಮ ಸಂಪ್ರೀತಿಯನು ತರುವೆಯಾ ಸಂಗಾತಿ ಶಬ್ದಗಳ ಮಾಲೆಯನ್ನು ಕಟ್ಟುತಾ ಹಾಕೋಣವೇ ಕನ್ನಡಮ್ಮನಿಗೆ ಹಾರ? ಪದಗಳ ಅಡಿಪಾಯ ನೆಡಲು ಶ್ರಮದಕಲ್ಲ ಹೊರುವೆಯಾ ಸಂಗಾತಿ ಸಾಹಿತ್ಯದ ತೇರನೆಳೆಯುತ ಮುಂದಡಿ ಇಡುತಲಿ ಸಾಗೋಣವೇ? ಸಾಂಗತ್ಯದ ಭರವಸೆ ಕೊಡುತ ಬಾಳಗಮ್ಯ ಸೇರುವೆಯಾ ಸಂಗಾತಿ ಕುಶಲ ಕರ್ಮಿಯಂತೆ ಮಾಡೋಣ ಚಿತ್ತಾರದ ಕುಸುರಿ ಕೆಲಸ ವಿಶಾಲ ಪುಸ್ತಕಗಳ ಆಗಸದಿ ನನ್ನೊಡನೆಯೇ ಹಾರುವೆಯಾ ಸಂಗಾತಿ ಅನನ್ಯವು ಕಾವ್ಯಪ್ರಪಂಚ ವಿಸ್ಮಯ ವಿನೂತನ ವಿಹಾರವಿದು ಅಮೂಲ್ಯವು ಸುಜಿಗೆ ಓದುವಿಕೆ ಕಡೆವರೆಗೂ ಇರುವೆಯಾ ಸಂಗಾತಿ *****************************
ಕನ್ನಡಮ್ಮನ ಬೆಡಗು
ಕವಿತೆ ಕನ್ನಡಮ್ಮನ ಬೆಡಗು ವೀಣಾ ರಮೇಶ್ ಕರುನಾಡು ನನ್ನದುಕನ್ನಡವದೇ ಸಾಕುನನಗೆ ಬಿರುದುಸಂಸ್ಕೃತಿಯ ತವರಿದುಹಸಿರು ಸಿರಿಯಶೃಂಗಾರದಲಿ ಬಿರಿದು ಧೀರ ಶರಧಿಯ ಬಗೆದುಕವಿಶ್ರೇಷ್ಠ ರ ಆಗೆದುಸಾಹಿತ್ಯ ಶಿಖರದನೆತ್ತಿಯಲಿ ಇಳಿದುಹರಿಸಿದಳು ಅಕ್ಷರಧಾರೆಮೊಗೆ ಮೊಗೆದು ಮಲೆನಾಡ ಕಾಡಲ್ಲಿಕಂಗೊಳಿಸಿದ ಸುಂದರಿರಸಋಷಿಗೆ ಜ್ಞಾನಪೀಠದಹೆಮ್ಮೆಯ ಗರಿನಾಲ್ಕು ತಂತಿಗಳಲಿಮೀಟಿದ ನಾದಲಹರಿನಮ್ಮ ವರಕವಿ ಶಿಲ್ಪಕಲೆ,ಬೇಲೂರು ಹಳೇಬೀಡಿನ ಬೆಡಗುರಾಜ ವೈಭೋಗದಮೈಸೂರಿನ ಸೊಬಗುಹಂಪಿಯ ಸುವರ್ಣ ಯುಗ ಕನ್ನಡಾಂಬೆಯಮೆರುಗು. ಯಕ್ಷ ಪ್ರೇಮಿಗಳ ಹೃದಯದಲಿಯಕ್ಷಗಾನದ ಹೆಜ್ಜೆಗಳಲಿಮದ್ದಳೆಯ ಸದ್ದಲ್ಲಿಕುಣಿಯಿತು ಯಕ್ಷಗಾನಕಾರಂತರ ಹೆಜ್ಜೆಗಳಲಿ ಎಲ್ಲೆಲ್ಲೂಮೊಳಗಲಿ ನಿನ್ನ ಕಹಳೆಸಮರಸದ ಸಹಬಾಳ್ವೆಬೆಳಗಲಿ ,ಹರಡಲಿಕನ್ನಡ ದೇವಿಯಪ್ರಭಾವಳಿ **********
ಉಪಯೋಗಿಸೋಣ, ಉಳಿಯೋಣ
ಲೇಖನ ಉಪಯೋಗಿಸೋಣ, ಉಳಿಯೋಣ ಶಾಂತಿವಾಸು ನಮ್ಮ ದೇಶದ ಪ್ರತಿ ರಾಜ್ಯವೂ ಅದರದೇ ಆದ ವೈಶಿಷ್ಟ್ಯ ಹಾಗೂ ಹಲವಾರು ಪದ್ಧತಿಯ ಆಚರಣೆಗಳು ಇರುವಂತೆ ನಮ್ಮ ಕರ್ನಾಟಕದ ನೆಲದ ಮೇಲಿನ ಪ್ರತಿಯೊಂದು ಪಂಗಡಗಳಿಗೆ, ಜಾತಿಗಳಿಗೆ, ಪ್ರಾಣಿಗಳು, ಜಾನುವಾರುಗಳಿಗೆ, ವಸ್ತುಗಳಿಗೆ ಹೀಗೆ ಎಲ್ಲಕ್ಕೂ ಪ್ರತ್ಯೇಕ ಹಬ್ಬಗಳಿವೆ. ಬೇರೆ ಬೇರೆ ಪ್ರದೇಶಗಳು ಹಾಗೂ ರಾಜ್ಯಗಳಿಂದ ಜೀವನವನ್ನರಸಿ ಬಂದು ನೆಲೆ ಕಂಡುಕೊಂಡ ಲಕ್ಷಾಂತರ ಜನರ ನೆಮ್ಮದಿಯ ನಮ್ಮ ಕರುನಾಡು, ಬಂದವರು ನಮ್ಮವರೇ ಎನ್ನುವ ಔದಾರ್ಯ ಮೆರೆದು, “ಬದುಕು, ಬದುಕಲು ಬಿಡು” ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ವಿಭಿನ್ನ […]
ರಾಜ್ಯೋತ್ಸವದ ಶುಭಾಶಯಗಳು
ಪ್ರಿಯರೆ, ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಕರ್ನಾಟಕ ಹಾಗೂ ಅದಕ್ಕೂ ಮೊದಲು ವಿಶಾಲ ಮೈಸೂರು ಎಂಬ ಹೆಸರು ಮತ್ತು ಒಗ್ಗೂಡುವಿಕೆಯ ಹಿಂದಿನ ಇತಿಹಾಸ ಅರಿಯುವುದು ಲೇಖಕರಾದ ನಮ್ಮೆಲ್ಲರ ಹೊಣೆ. ೧೯೦೫ ರಿಂದ ೧೯೨೦ ರ ಸಮಯದಲ್ಲಿ ಕನ್ನಡ ಮಾತಾಡುವ ಪ್ರದೇಶದ ಒಗ್ಗೂಡುವಿಕೆಯ ಹೋರಾಟ ಸಹ ಆರಂಭವಾಯಿತು. ಕರ್ನಾಟಕ ವಿದ್ಯಾವರ್ದಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ ಹೋರಾಟವೂ ಕನ್ನಡ ಮಾತಾಡುವ ಪ್ರದೇಶಗಳ ಒಗ್ಗೂಡಿಸುವಿಕೆಯಲ್ಲಿದೆ. ಮದ್ರಾಸ್ , ಹೈದರಾಬಾದ್, ಮುಂಬಯಿ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಗ್ಗೂಡುವಿಕೆಯಲ್ಲಿ […]
ದೇವಾಲಯ ಮತ್ತು ನೀರ್ಗುದುರೆ
ಅನುವಾದಿತ ಕವಿತೆ ದೇವಾಲಯ ಮತ್ತು ನೀರ್ಗುದುರೆ Hippopotamus and the Church: T.S.Eliot ಕನ್ನಡಕ್ಕೆ: ವಿ.ಗಣೇಶ್ ವಿಶಾಲವಾದ ಬೆನ್ನಿನ ನೀರ್ಗುದುರೆ ತಾ ಆಗಾಗ್ಗೆಕೆಸರಿನಲಿ ನಿಲ್ಲುವುದು ಹೊಟ್ಟೆಯನೂರತಲಿ ಭದ್ರವಾಗಿ ನಿಂತಂತೆಯೇ ನಮಗೆ ಕಾಣುತಲಿದ್ದರೂ ಅಲ್ಲಿ ಕಾಣುವುದು ಬರಿ ರಕ್ತ ಮಾಂಸಗಳಷ್ಟೆ ಯೇ ಮಾಂಸದ ಮುದ್ದೆ ಅದರ ಶಕ್ತಿಹೀನತೆ ಗುರುತುಎಲುಬು ಮೂಳೆಗಳಿಲ್ಲದೆ ಯೇ ಕುಸಿಯುತಿರುವುದುದೇಗುಲದ ಕಟ್ಟಡವದೋ ಸ್ಥಿರವಾಗಿ ನಿಂತಿಹುದುತಳಪಾಯಕೆ ಹಾಕಿರುವ ಬಂಡೆಗಳೆ ಜೊತೆಯಲಿ ನೀರ್ಗುದುರೆ ತಾ ನಡೆವಾಗ ಎಡವಲು ಬಹುದುಅನ್ನಾಹಾರಗಳ ಅದು ಹುಡುಕುತ್ತ ಹೊರಟಾಗದೇಗುಲವೇನೂ ಆಂತೆ ಎಡವಿ ಬೀಳಲಸದಳವು ಕಪ್ಪ ಕಾಣಿಕೆ […]
ವಿವೇಕ ವಾಣಿ
ಕವಿತೆ ವಿವೇಕ ವಾಣಿ ಬಾಗೇಪಲ್ಲಿ ಕೃಷ್ಣಮೂರ್ತಿ ಬೆಳಕು ಮೂಡುವಮುನ್ನ ನಡಿಗೆಗೆ ಹೊರಟೆಬಿಳುಪಿಗೆ ಪರಿಕಲಿತ ಸೌಂದರ್ಯದ ಆಕಾಶ ಮಲ್ಲಿಗೆ ಹೂ ಕಂಡೆ ಮರದ ಎತ್ತರದಿಆನಂದಿಸಲು ಬಿಡದ ಮನ ಹೇಳಿತುಆಕೆ ಇಷ್ಟೇ ಅಲ್ಲವೆ ನಿನಗೆ? ಮುನ್ನಡೆದು ಹಾದಿಬದಿಯ ಗಿಡದ ಹೂ ಮೇಲೆ ಕುಂತ ಬಣ್ಣದಚಿಟ್ಟೆ ಕಂಡೆಪ್ರಯಾಸದಿ ಹಿಡಿದೆ ಪಾಪವೆನಿಸೆ ಬದುಕಲ ಬಿಟ್ಟೆಹಿಡಿದ ಬೆರಳಿಗೆ ಹತ್ತಿತ್ತು ರೆಕ್ಕೆಯ ಬಣ್ಣಸಂತೋಷಿಪ ಮೊದಲೇ ಮನ ಹೇಳಿತು ಪುನಃಆಕೆ ಇಷ್ಟೇ ಅಲ್ಲವೆ ನಿನಗೆ! ಯೋಚನೆ ಹರಿವನು ಬದಲಿಸ ಲೆತ್ನಿಸಿಮುಂದಿನ ಮರದ ರೆಂಬೆಯಲಿ ಕುಂತ ಹಕ್ಕಿಕಂಡೆರಾತ್ರಿ ಓದಿದ […]
ಪುಸ್ತಕ ಪರಿಚಯ
ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧) ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨) ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩) ಮನಮಗ್ನತೆ( ಬುದ್ದನಡೆ -೪) ರೇಶ್ಮಾಗುಳೇದಗುಡ್ಡಾಕರ್ ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧) ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨) ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩) ಮನಮಗ್ನತೆ( ಬುದ್ದನಡೆ -೪) ಬೆಲೆ : 170 ರೂ. ನೆಮ್ಮದಿಯ ಆಗರ ಬುದ್ಧ ಗುರುವಿನ ಮಾತು ,ಬರಹಗಳು .ಇಂದಿನ ಅಂತರ್ಜಾಲದ ತಾಣದಲ್ಲಿಯೂ ಬುದ್ಧಗುರುವಿನ ಕೋಟ್ಗಳು ಒಂದು ಪವರ್ ಫುಲ್ tonic ನಂತೆ ಓದುಗರಿಗೆ ಎದುರಾಗುತ್ತದೆ . ಬದುಕಿನ ಒತ್ತಡ,ನಿರಾಸೆ ,ನೋವಿಗೆ ಸಮಾಧಾನ ನೀಡುತ್ತವೆ, ಇಂತಹ ಬುದ್ಧಗುರುವಿನ […]
ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ
ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರ್ಗಿ ವಿಶ್ವವಿದ್ಯಾಲಯ ನೀಡುವ ಕಲ್ಯಾಣ ಕರ್ನಾಟಕ ಪ್ರದೇಶದ ಪುಸ್ತಕ ಬಹುಮಾನ ಹಾಗೂ ಲೇಖಕ/ ಪ್ರಕಾಶಕರ ಗೌರವ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಎಚ್ ಟಿ ಪೋತೆ ಅವರು ತಿಳಿಸಿದರು. ಕಡಕೋಳ ಅವರೊಡನೆ ಅವಧಿ’ಯ […]