ಪುಸ್ತಕ ಪರಿಚಯ

ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧)
             ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨)
       ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩)
      ಮನಮಗ್ನತೆ( ಬುದ್ದನಡೆ -೪)

ರೇಶ್ಮಾಗುಳೇದಗುಡ್ಡಾಕರ್ 

ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧)

             ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨)

            ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩)

      ಮನಮಗ್ನತೆ( ಬುದ್ದನಡೆ -೪)

ಬೆಲೆ : 170 ರೂ.

ನೆಮ್ಮದಿಯ ಆಗರ ಬುದ್ಧ ಗುರುವಿನ ಮಾತು ,ಬರಹಗಳು .ಇಂದಿನ ಅಂತರ್ಜಾಲದ ತಾಣದಲ್ಲಿ‌ಯೂ ಬುದ್ಧಗುರುವಿನ ಕೋಟ್ಗಳು ಒಂದು ಪವರ್ ಫುಲ್ tonic ನಂತೆ ಓದುಗರಿಗೆ ಎದುರಾಗುತ್ತದೆ .

ಬದುಕಿನ ಒತ್ತಡ,ನಿರಾಸೆ ,ನೋವಿಗೆ  ಸಮಾಧಾನ ನೀಡುತ್ತವೆ,

ಇಂತಹ ಬುದ್ಧಗುರುವಿನ ಅಂಗಳ ತಣ್ಣನೆಯ ತಂಪಿನದು ಇಲ್ಲಿ ಉನ್ಮಾದ,ಉದ್ವೇಗ ದ್ವಂದ್ವಗಳಿಗೆ ತಾವಿಲ್ಲ , ಏನಿದ್ದರೂ ಸದೃಢವಾದ ಸಮಚಿತ್ತ  ಮಾತ್ರ ಇಲ್ಲಿ‌ ವಿಹರಿಸುತ್ತದೆ !

ಅದು ಯಾವಕಾಲ ,ಯಾವ ಜಾಗವಾದರೂ ಸರಿಯೇ .

ಇಲ್ಲಿ‌ ಯಾವುದೇ ಅಡ್ಡಿ ಆತಂಕ‌ಗಳು ಚಿಗುರೂಡೆಯುವದಿಲ್ಲ.

ಬುದ್ಧ ಯುಗ ಯುಗಗಳ ಬೆಳಕು,  ಧ್ಯಾನದ  ಬುದ್ಧ ನೋಡುಗರನ್ನು ಸೆಳೆದರೆ, ಬರಹಗಳು ಓದುಗರನ್ನು ಸೆಳೆಯುತ್ತವೆ. ಹೊಸ ಆಲೋಚನೆಗೆ ಕೊಂಡ್ಯೊಯುತ್ತವೆ.

    ಈ ಬುದ್ಧದೇವನ ಅಂಗಳಕ್ಕೆ ಬುದ್ಧ ಮಾರ್ಗದ ನಾಲ್ಕು ರೈನಾ ಪರಿಮಾಣ ಪುಸ್ತಕಗಳು ನಮ್ಮನ್ನು ನೇರ ಕರೆದೊಯ್ಯುತ್ತವೆ .

ನಮ್ಮೊಳಗಿನ ಬುದ್ಧಗುರುವನ್ನು ಅನಾವರಣಗೊಳಿಸುವ ಮೂಲಕ ..! ನಮಗೆ ಹತ್ತಿರವಾದ ಭಾಷಾ ಶೈಲಿಯಲ್ಲಿ ,

ಇಲ್ಲಿ ಬರುವ ಉದಾಹರಣೆ ಪ್ರತಿಯೊಬ್ಬರಿಗೂ ಸರಳವಾಗಿ ಬುದ್ಧ ಗುರುವಿನ ಮಾರ್ಗವನ್ನು ಅರ್ಥೈಸಿಕೊಳ್ಳಲು ನೆರವಾಗುತ್ತವೆ .

ಬುದ್ಧ ಗುರುವಿನ ಸಂದೇಶದ ಹೂರಣಕ್ಕೆ ಜೊತೆಯಾಗಿ ಈ ಹೊತ್ತಿಗೆಯಲ್ಲಿ  ಸಂಧರ್ಭಕ್ಕೆ ಅನುಗುಣವಾಗಿ ಬರುವ

ಸರಹಪಾದರ ನುಡಿಗಟ್ಟು ,ಅಲ್ಲಮ ಪ್ರಭುಗಳ ವಚನಗಳು

ಬುದ್ಧ ಗುರುವಿನ ತಾತ್ವಿಕ ಚಿಂತನೆ , ಬದುಕಿನ ಅರಿವನ್ನು ಮತ್ತಷ್ಟು ಆಳವಾಗಿ ಅರ್ಥೈಸಿಕೊಳ್ಳಲು ನೆರವಾಗುತ್ತವೆ.

ಬೌದ್ಧ ಮದ್ಯಮ ಮಾರ್ಗ   ನಿರಂತರ ಬದಲಾಗುತ್ತಿರುವ ಬದುಕಿನ ಪ್ರವಾಹವನ್ನು ಗ್ರಹಿಸಲು ಮಿಥ್ಯದ ಪರದೆ ಕಳಚಲು ನಮಗೆ ಸಹಾಯ ಮಾಡುತ್ತದೆ .

ಪೂರ್ವಾಗ್ರಹ ಪೀಡಿತ ದೃಷ್ಟಿ ಕೋನವನ್ನು ನಿವಾರಿಸಿಕೊಂಡು ಹೊಸ ಆಶಾಭಾವನೆಯ ಮುನ್ನೊಟ

ಹೊಂದುವದು ,ಸಾಂಧರ್ಭಿಕ ಜಗತ್ತಿನ ಮಹತ್ವ ತಿಳಿಯುವದು ಪ್ರತಿ ಮನದ ಸವಾಲೇ ಸರಿ .

ಇದನ್ನು ಬುದ್ಧಗುರುವಿನ ಸಂದೇಶಗಳು ನಮಗೆ ನೆನಪು ಮಾಡುತ್ತವೆ , ಬದಲಾಗುತ್ತಿರುವ ಜಗತ್ತಿನಲ್ಲಿ  ಕಾಡುವ

ಆಡಚಣೆ ,ಒತ್ತಡ , ನಿರಾಶೆ ,ಹತಾಷೆ ಭಾವಗಳು ಒಂದೆಡೆಯಾದರೆ

ನಮಗರಿವಿಲ್ಲದೆ ಮನದೂಳಗೆ ಹೆಮ್ಮರವಾಗಿರುವ ಈರ್ಷ್ಯೆ ಹಲವಾರು ಸಮಸ್ಯೆಗೆ ದಾರಿಯಿರುತ್ತದೆ ಈ  ಮರವನ್ನು ಬುಡಸಮೇತ ಕಿತ್ತೊಸೆಯಲು

ಬುದ್ಧ ಗುರುವಿನ ಚಿಂತನೆಗಳು ನಮಗೆ ಅಗತ್ಯ .

ಮೃಗತ್ವದ ಸೆರಗಲ್ಲಿಯು ಮಮತೆಯ ಮಡಿಲು ಇರುತ್ತದೆ

ಆ ಮಡಿಲಿಗೂ ಹೃದಯದ ಅಗತ್ಯವಿದೆ ಎಂಬುದನ್ನು  ಹೇಳುವ  ಪ್ರಜ್ಞಾಪಾರಮಿತ ಹೃದಯ ಸೂತ್ರ , ಲೋಕವನ್ನು

ಕರುಣೆ ,ವಾತ್ಸಲ್ಯದಿಂದ ಕಣ್ಣುಗಳಿಂದ ಕಾಣಿರಿ ಎಂಬುದನ್ನು ಮನವರಿಕೆ ಮಾಡುತ್ತದೆ

ಬುದ್ಧ ಸೂತ್ರ ,ಪಠಣದ ವಿಷಯವಲ್ಲ ಪಾಲನೆಯಲ್ಲಿ ಮೇಳೈಸಿ ಬದುಕಿನಲ್ಲಿ ನೆಮ್ಮದಿಯ ಕಾಣಬೇಕು .

ಎಚ್ಚರದ ಪ್ರಜ್ಞೆ ನಮ್ಮ ಮನೋಕೋಶವನ್ನು ತುಂಬಬೇಕು

ಅದೃಶ್ಯ ಲೋಕದ ಹಂಬಲ , ಅದರ ಆರಾಧನೆ ವರ್ತಮಾನದ ಅಮೋಘ ಕ್ಷಣಗಳನ್ನು ಕಾಣದಂತೆ ಮಾಡುತ್ತದೆ .ಇಂತಹ ಮನದಿಂದ ಹಗುರಾಗುವ, ಭಾರಗಳನ್ನು ಇಳಿಸುವ ಕಾರ್ಯ ಸುಲಭವಲ್ಲ .

ಇದನ್ನು ಬುದ್ಧ ಮಾರ್ಗ  ಓದುಗರ ಮುಂದೆ ಇಡುತ್ತದೆ

ಪರ್ಯಾಯ ದಾರಿ ತೋರುತ್ತದೆ .

ಭೂತ ,ಭವಿಷ್ಯದ ಚಿಂತೆಯಲ್ಲಿ ವರ್ತಮಾನ ಸದ್ದಿಲ್ಲದೆ ಸರಿದು ವ್ಯರ್ಥವಾಗಿ ಹರಿದು ಹೊಗುತ್ತದೆ ,ಮತ್ತೆ ಇದೇ ವರ್ತಮಾನ ಭೂತವಾಗಿ ಕಾಡುತ್ತದೆ ..!

ಮನದ ಬಹುಪಾಲು ಶಕ್ತಿ ಹೀಗೆ  ಕಳೆದು ರಾಶಿ ರಾಶಿ ಚಿಂನೆಗಳನ್ನು ಒಟ್ಟುಮಾಡುವ ಮನಕ್ಕೆ ಮಗ್ನತೆಯಿಂದ ನಿರಂತರ ಚಲನಶೀಲವಾದ ಮನಕ್ಕೆ ಏಕಾಗ್ರತೆಯ ನಿರಾಳತೆನ್ನು ನೀಡಬೇಕಾಗಿದೆ .

ಮನಮಗ್ನತೆಗೆ ಇರುವ ವಿವಿಧ ರೂಪಗಳು ಓದುಗರಿಗೆ ಹೊತ್ತಗೆಯಲ್ಲಿ ಸಿಗುತ್ತವೆ .ನಾಗಾಲೋಟದಲ್ಲಿ ಓಡುವ

ಮನ ಅದರ ವೇಗ ವನ್ನು ನಿಂಯತ್ರಿಸಲು ಅದು ಹೋಗುತ್ತಿರುವ ದಾರಿಯನ್ನು  ಗಮನಿಸಿ ಸೂಕ್ತವಾದ

ದಾರಿಗೆ ತರಲು ಮಾರ್ಗದರ್ಶನ ಅಗತ್ಯ

ಈ ಮಾರ್ಗದರ್ಶನಗಳೇ ಬುದ್ಧ ಗುರುವಿನ ಸಂದೇಶಗಳು

ಮನಮಗ್ನತೆ ಎಂಬುದು ಕಣ್ಣು ಮುಚ್ಚಿ ಅರಿಯುವದಲ್ಲ

ಎಚ್ಚರದ ತಿಳಿವಿದು .ಜಗವನ್ನು ಇಲ್ಲಿರುವ ದೃಶ್ಯಗಳನ್ನು ಕಾಣಲು ದೃಷ್ಟಿ ಒಂದೇ ಸಾಲದು ಆ ದೃಷ್ಟಿಯಲ್ಲಿ ಎಚ್ಚರ ,ಪ್ರಜ್ಣೆ ಇರಲೇ ಬೇಕು .ನಿರಂತರ ಚಲಿಸುವ ಜಗದ ಪ್ರವಾಹದಲ್ಲಿ ನೋಡಿದ್ದು ಬದಲಾಗಿರುತ್ತದೆ ,ಅಥವಾ ಬದಲಾದದ್ದನ್ನೆ ನಾವು ಒಪ್ಪದೆ ಹಾಗೆ ಇದೆ ಎಂದು ನಾವು

ಗ್ರಹಿಸುವಲ್ಲಿ ಎಡವಿ ಸಮಸ್ಯಯ ಸರಮಾಲೆಗ ತುತ್ತಾಗುತ್ತೇವೆ . ಈ ತೊಳಲಾಟ , ತಲ್ಲಣಗಳು ಸುದೀರ್ಘವಾಗಿ ಕಾಡಿ ಮನವನ್ನು ಸಂತಸದಿಂದ ದೂರ ಮಾಡುತ್ತವೆ .

ಈ ಸಂದರ್ಭದಲ್ಲಿ ಬುದ್ಧಗುರುವಿನ  ತತ್ವಗಳು ನಿಜದ ಅರಿವನ್ನು ತಿಳಿಸುತ್ತವೆ .

ಬುದ್ಧಗುರುವಿನ ಸಂದೇಶಗಳು ತಕ್ಷಣ ಬಂದುದಲ್ಲ ,ಅವು

ತೋರಿಕೆ,ವೈಭವಕ್ಕೆ ಶರಣಾಗುವದಿಲ್ಲ ಶಾಂತ ಸದೃಢ ಚಿತ್ತ ಹೊಂದಲು ಸಹಕಾರಿಯಾಗುತ್ತವೆ  ಈ ಚಿತ್ತವೆ ನಮ್ಮೊಳಗಿನ ಬುದ್ಧನ ಕಾಣಲು ಸಾದ್ಯ ವಾಗುವಂತೆ ಮಾಡುತ್ತವೆ .

ನಮ್ಮೂಳಗಿರು ಬುದ್ಧ ಗುರುವಿನ ದರ್ಶನಕ್ಕೆ ಮನಮಗ್ನತೆ ಅಗತ್ಯವಿದೆ , ನಮ್ಮ ಬದುಕಿಗೆ ನಮ್ಮೊಳಗಿರುವ ಬುದ್ಧನ ಅನಿವಾರ್ಯ ತೆ ಇದೆ ,

ಬುದ್ಧ ಗುರು ಸತ್ಯದ ಬೆಳಕು ಹೌದು ,ಪ್ರಜ್ಞೆಯ ಪ್ರತೀಕವು ಹೌದು , ದೀರ್ಘ ಕಾಲ ಕಾಡುವ ಋಣಾತ್ಮಕ ಚಿಂತನೆಗಳಿಂದ ಮುಕ್ತರಾಗಿ ಜ್ಞಾನದ ಬೆಳಕಾದ ನಮ್ಮೊಳಗಿನ‌ ಬುದ್ಧನನ್ನು ನಾವು ಆಹ್ವಾನಿಸ ಬೇಕಾಗಿದೆ

ಈ ಪುಸ್ತಕಗಳು  ಶಾಂತ ಚಿಂನೆಗಳನ್ನು ಓದುಗರಲ್ಲಿ ಹರಿಸುತ್ತವೆ ಇಡಿಯಾದುದನ್ನು ಬಿಡಿಯಾಗಿ ನೀಡುತ್ತವೆ

ಬಿಡಿಯಾದ ವಿಚಾರವನ್ನು ಇಡಿಯಾಗಿಸುತ್ತವೆ .

ಈ ಜೀವನ ದುಃಖದ ಸರಮಾಲೆ ಎಂದು ಬುದ್ಧ ಗುರು

ಎಲ್ಲಿಯೂ ಹೇಳಿಲ್ಲ , ಈ ಜಗದಲ್ಲಿ ಪ್ರತಿಯೊಂದು ಘಟನೆಗಳು ಕಾರಣವಿಲ್ಲದೆ ಜರುಗವದಿಲ್ಲ , ಮಾಯೆಇಲ್ಲ , ತಂತ್ರಗಳು ಇಲ್ಲ ನಮ್ಮ ನೋಟದ ವೈಫಲ್ಯತೆಯೇ ದುಃಖದ ಮಡುವಿಗೆ ಜಾರಿಸುತ್ತದೆ , ಮಮತೆಯನ್ನು ಮರೆಸಿ ರೋಷ ,ಆವೇಶ ಗಳನ್ನು ಮನ ತುಂಬಿಕೊಂಡು ಸಹಜ

ಮಾನವ ಗುಣಗಳಾದ  ಪ್ರೀತಿ ,ಕರುಣೆ , ವಾತ್ಸಲ್ಯ ಸ್ನೇಹ ,

ಮಾಯವಾಗಿವೆ . ಎಂಬ ತಿಳಿವನ್ನು ಬುದ್ಧ ಗುರುವಿನ ಸಂದೇಶಗಳು  .ಓದುಗರಿಗೆ  ಎರಕಮಾಡುತ್ತವೆ .

ಬುದ್ಧ ಗುರುವಿನ ಮಾರ್ಗವೇ ಒಂದು ಬೆಳಕು .ಮಿಥ್ಯದ

ವೈಭವತೆಯನ್ನು ಓಡಿಸಿ ಸರಳ ಜೀವನಕೆ ದಾರಿ ಮಾಡುತ್ತದೆ .

ದಾವ್ ದ ಜಿಂಗ್ ಸೂತ್ರಗಳು ತತ್ವ ರಸಾನುಭವದಂತೆ ಗೋಚರಿಸುತ್ತವೆ

ಬುದ್ಧ ಗುರುವಿನ‌ ಸಂದೇಶದ

ಅನುಭವಗಳ ಸಾರದಂತೆ ಓದುಗರ ಮನದಲ್ಲಿ .ಬುದ್ಧ ಮಾರ್ಗವು ಸರಕುಳನ್ನು ಇಳಿಸಿ ನಮ್ಮ ಪಯಣವನ್ನು ಸರಳಗೊಳಿಸುತ್ತದೆ .

ಸದಾ ಚಲಿಸುವ ಜಗದಲ್ಲಿ ಬುದ್ಧಗುರುವಿನ ಅಗತ್ಯ ಒಂದು ದಿನಕ್ಕೆ ಸೀಮಿತವಾಗಲು ಸಾದ್ಯವಿಲ್ಲ .ಅದು ನಿರಂತರ ವನಿತ್ಯ

ಜೀವನದ ಸಂಜೀವಿನಿ .

**************************

Leave a Reply

Back To Top