ದೇವಾಲಯ ಮತ್ತು ನೀರ್ಗುದುರೆ

ಅನುವಾದಿತ ಕವಿತೆ

ದೇವಾಲಯ ಮತ್ತು ನೀರ್ಗುದುರೆ

Hippopotamus and the Church: T.S.Eliot

ಕನ್ನಡಕ್ಕೆ: ವಿ.ಗಣೇಶ್

40 Beautiful Examples of Abstract Photography - The Photo Argus

ವಿಶಾಲವಾದ ಬೆನ್ನಿನ ನೀರ್ಗುದುರೆ ತಾ ಆಗಾಗ್ಗೆ
ಕೆಸರಿನಲಿ ನಿಲ್ಲುವುದು  ಹೊಟ್ಟೆಯನೂರತಲಿ
 ಭದ್ರವಾಗಿ ನಿಂತಂತೆಯೇ  ನಮಗೆ ಕಾಣುತಲಿದ್ದರೂ
 ಅಲ್ಲಿ ಕಾಣುವುದು ಬರಿ ರಕ್ತ ಮಾಂಸಗಳಷ್ಟೆ ಯೇ  

ಮಾಂಸದ ಮುದ್ದೆ ಅದರ ಶಕ್ತಿಹೀನತೆ ಗುರುತು
ಎಲುಬು ಮೂಳೆಗಳಿಲ್ಲದೆ ಯೇ  ಕುಸಿಯುತಿರುವುದು
ದೇಗುಲದ ಕಟ್ಟಡವದೋ ಸ್ಥಿರವಾಗಿ ನಿಂತಿಹುದು
ತಳಪಾಯಕೆ ಹಾಕಿರುವ  ಬಂಡೆಗಳೆ ಜೊತೆಯಲಿ

ನೀರ್ಗುದುರೆ ತಾ ನಡೆವಾಗ ಎಡವಲು ಬಹುದು
ಅನ್ನಾಹಾರಗಳ ಅದು ಹುಡುಕುತ್ತ ಹೊರಟಾಗ
ದೇಗುಲವೇನೂ ಆಂತೆ ಎಡವಿ ಬೀಳಲಸದಳವು  
ಕಪ್ಪ ಕಾಣಿಕೆ ಸಾಕಷ್ಟು ಬಂದು ಬೀಳುವುದರಿಂದ

ಮಾವಿನ ತೋಪಿನ ಕಡೆ ಮಾವು ಹಣ್ಣಾದಾಗ
ನೀರ್ಗುದುರೆ ಚಲಿಸುವುದು ಹಣ್ಣುಗಳ ತಿನ್ನಲು
ದೇಶವಿದೇಶದ ಜಾತಿ ಜಾತಿಯ ಹಣ್ಣುಗಳೆಲ್ಲ
ಬಂದು ತಾ ಬೀಳುವುವು ಆ ದೇಗುಲದೊಳಗೆ

ಪ್ರೇಯಸಿಯ ಜೊತೆಗೆ ತಾ ಕೂಡುವಾಗೆಲ್ಲ
ಸಂತಸದಿ ಬೀಗುವುದು ಅದರ ಕಾಮವದನ
ಅನುದಿನವು ದೇವರ ಪೂಜೆ ನಡೆಯುತ್ತಿದ್ದರೂ
ದೇಗುಲದಲೆಂದೂ ಕಾಣೆವು ಅಂಥ ಸಂತಸವ

ಹಗಲಿನ ವೇಳೆಯಲಿ ನಿದ್ರಿಸುವ ನೀರ್ಗುದುರೆ
ರಾತ್ರಿಯಲಿ ಬೇಟೆಯ ಹುಡುಕುತ್ತಲಿರುವುದು
ನಿದ್ದೆಬುದ್ಧಿಗಳನೆಲ್ಲ ಒಟ್ಟಿಗೆ ಕೊಡುವಂತ ಆ
ದೇಗುಲದ ಮಹಿಮೆಯ ಅರಿಯೆವು ಪಾಮರರು

 ಗರಿಗೆದರಿ ಹಾರುವುದು ಅದು ತಾ ಗಗನದಲಿ
 ರೆಕ್ಕೆಪುಕ್ಕಗಳೆಲ್ಲ ಕೆಸರಲ್ಲಿ ಹೂತಿದ್ದರೂ ಸಹ
 ಗುಡಿಯೊಳಗೆ ಅಡಗಿರುವ ದೇವರ ಹೊಗಳಿ
 ಗಗನದಲಿ ಸುತ್ತುವರು ದೇವತೆಗಳ ದಂಡು

ಮುದ್ದು ಕುರಿಮರಿ  ಪಾಪವನು ಕಳೆಕೊಳ್ಳುತ
ತಾನೆ ಬಲಿಯಾಗುತ ಅವನ ಪಾದಗಳಿಗೆ
ಸ್ವರ್ಗವನು ತಬ್ಬಿಕೊಳುವುದು ತೋಳಿನಲಿ 
ಸಂತರ ನಡುವೆ ಯೇ ತಾನೂ ಒಬ್ಬನಾಗುತಲಿ

ಹಿಮದ ಬೆಟ್ಟದ ತರ ಕರಗಿ ನಿರಾಗುವುದದು
ದೇವ ಕನ್ಯೆಯರ ಮುತ್ತು ಮಳೆಗಳ ಕರೆಯುತ
ನಿಜ ದೇಗುಲ ಕಲ್ಲುಗಳು ಕರಗದೇಯಿರುವುವು
ಸೂರ್ಯ ಚಂದ್ರರು ಅನುದಿನ ಉರಿಯುತಲಿದ್ದರು

***********************************

Leave a Reply

Back To Top