ನನ್ನ ಕವಿತೆ

ನನ್ನ ಕವಿತೆ

ಕವಿತೆ ನನ್ನ ಕವಿತೆ ಲಕ್ಷ್ಮೀದೇವಿ ಪತ್ತಾರ ಹರುಕು ಬಟ್ಟೆಮುರುಕು ಮನೆಯಲಿಅರೆ ಹೊಟ್ಟೆ ಊಟದಲ್ಲೂಹೆತ್ತ ಮಕ್ಕಳು ಕಲಿತುಮನೆಗೆ ಆಸ್ತಿ ಆಗುವರೆಂಬಹೆತ್ತವರ ಹೊಟ್ಟೆ ತುಂಬಾ ಕನಸುನನ್ನ ಕವಿತೆ ಭೂಮಿ ಹರಗಿ ಹದಗೊಳಿಸಿಗಟ್ಟಿ ಬೀಜವ ಬಿತ್ತಿಮಳೆ ಬರುವುದೆಂಬ ಭರವಸೆ ಹೊತ್ತರೈತನ ನಿರೀಕ್ಷೆ ನನ್ನ ಕವಿತೆ ಕೆಲಸವಿಲ್ಲವೆಂದು ಕೊರಗದೆಸಿಕ್ಕ ಕೆಲಸವನ್ನ ಚೊಕ್ಕನಾಗಿ ಮಾಡಿ ಹೊಟ್ಟೆಗೆ ಹಿಟ್ಟು ಗಿಟ್ಟಿಸಿಕೊಳ್ಳುವ ಗಟ್ಟಿಗರ ಇಚ್ಛಾಶಕ್ತಿನನ್ನ ಕವಿತೆ ಬಾಳ ಪಥದ ಏರಿಳಿತಗಳನ್ನು ಎದುರಿಸಿ ಸಂಸಾರ ರಥವನ್ನು ಸುಗಮವಾಗಿ ದಡ ಸೇರಿಸುವ ಸ್ತ್ರೀ ರತ್ನ ನನ್ನ ಕವಿತೆ ಗಾಳಿ ಮಳೆ […]

ಅಹಮ್ಮಿನ ಕೋಟೆ

ಕವಿತೆ ಅಹಮ್ಮಿನ ಕೋಟೆ ಚಂದ್ರಪ್ರಭ ಬಿ. ‘ಸೋತರೇ ಗೆಲುವು ಮಗಳೇ’ ಅವ್ವನ ಮೆಲು ನುಡಿ‘ಇಟ್ಟಾಂಗಿರಬೇಕ ಮಗಾ’ ಅಜ್ಜಿಯ ಚೆನ್ನುಡಿನಿನ್ನ ನಲ್ನುಡಿ ಎದುರು ಗಾಳಿಯೊಡನೆತೂರಿ ಹೋದುದು ಅರಿವಿಗೇ ಬರಲಿಲ್ಲಆಹಾ! ಏನದರ ಸೊಗಸು…ಖೋಡಿ ಮನಸ್ಸಿನ ಹತ್ತು ಹದಿನಾರು ಕನಸುಚಿತ್ತಾಕರ್ಷಕ ಸೆಳೆತ.. ಬಲು ಮತ್ತಿನ ಅಮಲು ಬಿಸಿಲೇರಿದಂತೆಲ್ಲ ನಿಚ್ಚಳ ಬೆಳಕುನಡು ಮಧ್ಯಾಹ್ನದ ನಿಗಿನಿಗಿ ಕೆಂಡಮಂಜು ಕರಗಿ ಒಳಹೊರಗೆಲ್ಲ ಕಡು ತಾಪಅಪಥ್ಯವಾಗುವ ಅವ್ವ ಅಜ್ಜಿಯ ಕಿವಿಮಾತುತುದಿ ಮೊದಲಿಲ್ಲದ ತಪ್ಪು ಒಪ್ಪುಗಳಗುಣಾಕಾರ ಭಾಗಾಕಾರ… ಮುಂಬರಿಯಲು ತವಕಿಸುವ ಹೃದಯನಿಂತೇ ಬಿಡುವ ಹಠಮಾರಿ ಹೆಜ್ಜೆಕ್ಷಮಿಸು ಗೆಳೆಯ, ನಿನ್ನಂತೆ […]

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1) ಹೂಗಳು ಬಣ್ಣದ ಲೋಕ :ಹೂಗಳು ಹಲವಾರು,ದೃಷ್ಟಿ ಹೀನತೆ. 2) ವಿರಹ ವಿರಹ ತಾಪ :ಮೂಡಣದ ದೊರೆಗೆ,ಭುವಿ ಪ್ರೀತಿಗೆ. 3) ಕವಿ ಕವಿ ತಾಕತ್ತು :ರವಿ ಇಲ್ಲೆಡೆ ಎಲ್ಲಾಕರಾಮತ್ತು. 4) ಭೂರಮೆ ಭೂರಮೆ ಕಳೆ:ಹಸಿರುಟ್ಟ ಬೆಡಗಿ,ಕೋಗಿಲೆ ಗಾನ. 5) ಮೌನ ಮೌನದ ಭಾರ :ಮಾತುಗಳ ಕದನ,ಮುಕ್ತಾಯ ಗೀತೆ. 6) ಅಮ್ಮ ದಾರಿ ದೀವಿಗೆ :ಅಮ್ಮನ ನಗೆ ರೂಪ,ಬಾಳು ಸಂಭ್ರಮ. 7) ನಲ್ಲ ಅನುದಿನವೂಅನವರತ ನಗು,ನಲ್ಲನ ಮೊಗ. 8) ಕಾಣಿಕೆ ಮುಗಿಲ ಮಾಲೆ :ಭುವಿಯ […]

ಅನಾಮಿಕಾ

ಕವಿತೆ ಅನಾಮಿಕಾ ಮೋಹನ್ ಗೌಡ ಹೆಗ್ರೆ.‌ ಅವಳು ಮಲಗಿದ್ದಾಳೆಕಣ್ಣಿನಲ್ಲಿ ಕನಸಿನ ಹಸಿವ ತುಂಬಿಒಡಲಿನಲಿ ಮತ್ಯಾವುದೋ ಹಸಿವ ನುಂಗಿಅವಳ ದೇಹದೊಡನೆ ದುಡ್ಡು ಮಾತಾಡುವುದ ಕೇಳಿ… ಒಂದಾನೊಂದು ದಿನದಲ್ಲಿಅವಳು ಮಲಗಿರುವಾಗತೊಟ್ಟಿಲ ತೂಗಿದ ಕೈಗಳುಮಲಗಿದ ಮುದ್ದು ಮುಖಕ್ಕೆಮುತ್ತಿನ ಮಳೆಗೆರೆದ ಮನಸುಗಳುಹೊಸ ಬಟ್ಟೆಯ ಉಡಿಸಿ ಆನಂದಿಸಿದ ಕಣ್ಗಳುಅವಳಿಗೆ ನೆನಪಾಗುತಲೇ ಇಲ್ಲ… ವಿದ್ಯೆ ಬುದ್ದಿಗಳನ್ನು ಕಲ್ಲು ಕಟ್ಟಿ ಮುಳುಗಿಸಿದ್ದಾಳೆಕೆಲವೊಮ್ಮೆ ಇವಳೂ ಏಳದ ಹಾಗೇಮನಸು ಬಯಸದ ಶೃಂಗಾರಕೆ ನಿತ್ಯ ಅಣಿಯಾಗುತಾಳೆಎಲ್ಲೂ ಬೆವರದವರು ಇವಳಲ್ಲಿ ಬಂದು ಬೆವರುವಷ್ಟೂ ಕ್ರೂರತನವಸಹಿಸಿಕೊಂಡು ಅದೊಂದು ವೃತ್ತಿಯೇ ಎನಿಸುವಷ್ಟುಬಲಿತ ಮಾಂಸ ಖಂಡಗಳೇಉಬ್ಬು ತಗ್ಗುಗಳೇ […]

ಪಾರಿಜಾತ ಗಿಡ

ಲಲಿತ ಪ್ರಬಂಧ ಪಾರಿಜಾತ ಗಿಡ ವಿದ್ಯಾ ಶ್ರೀ ಎಸ್ ಅಡೂರ್. ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ  ಒಂದು  ರೀತಿಯ ಪ್ರೀತಿ.ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ  ಅರ್ದಂಬರ್ದ ಕಥೆಗಳು ಕಲಸುಮೇಲೋಗರ ವಾಗಿ ಒಂದು ಅಲೌಕಿಕ ಆಕರ್ಷಣೆ ಯಾಗಿ ಬೆಳೆದಿದೆ.             ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ ಒಂದು ಗೆಲ್ಲು ಕೇಳಿ ತಂದು ಮನೆಯ ಹಿತ್ತಿಲಲ್ಲಿ ನೆಟ್ಟಿದ್ದೆ. ಕಾಲಮಾನ ಕ್ಕೆ ಅನುಗುಣವಾಗಿ ಅದು […]

ನಿನಗಿಂತ ದೊಡ್ಡವರು…..

ಕವಿತೆ ನಿನಗಿಂತ ದೊಡ್ಡವರು….. ಯಮುನಾ.ಕಂಬಾರ ತುಟಿ ಬಿಚ್ಚದೇ ಬಾಯ್ಮುಚ್ಚಿಕೊಂಡುತೆಪ್ಪಗೆ ಮೌನದಲಿ,ಒಮ್ಮೆ ದುಃಖ ಒಮ್ಮೆ ಸುಖ ಅಟ್ಟಿಸಿಕೊಂಡುಕಾಲ ಹಾಕುವ ಕಾರಣಿಕಳೇ….!!. ಕ್ರೌರ್ಯ , ಕೋಪ ತಾಪಗಳಗರ್ಭದಲ್ಲಿ ಅಡಗಿ ಕುದಿಗೊಂಡರೂಮತ್ತೆ ಮತ್ತೆ ಅದೇ ಮೌನಅದೇ ಶಾಂತಿ ,ಅದೇ ಆ ಸುರಿಯುವ ಕಾಂತಿ !! ನಿನ್ನ ಸಹನೆಗೆ ತಾಳ್ಮೆಗೆಇಲ್ಲ – ಸಾಟಿಇತಿಹಾಸದ ಕತ್ತಲಲ್ಲಿ – ಕರಗಿವೆಸಾವಿರ ಸಾವಿರ ಮರೆಯದ ಮಾಣಿಕ್ಯದ ದೀಪ್ತಿ !! ಆಗಲೂ ಈಗಲೂ ಧುಮ್ಮಿಕ್ಕಿ ಪುಟಿಯುತಿವೆ – ಸಾಯದ ಅಮರ ಅಕ್ಷರಗಳು:” ದುರಾಸೆ ದುಃಖಕ್ಕೆ ಮೂಲಅಹಿಂಸೆ ಬದುಕಿನಸೂತ್ರಕಾಯಕವೇ ಕೈಲಾಸ […]

ಜಿ. ಪಿ. ರಾಜರತ್ನಂ ಜನ್ಮದಿನ

ಇಂದು ಕನ್ನಡದ ಧೀಮಂತ ಸಾಹಿತಿ ಪ್ರೊ.ಜಿ.ಪಿ.ರಾಜರತ್ನಂ ಅವರು ಜನಿಸಿದ ದಿನ ಬಾಲ್ಯ ‘ಜಿ. ಪಿ. ರಾಜರತ್ನಂ'(೧೯೦೪-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ “ನಾಗಪಟ್ಟಣ”ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು […]

ರಾಮಕೃಷ್ಣ ಗುಂದಿ ಆತ್ಮಕತೆ–02 ಗುಂದಿ ಹಿತ್ತಲದಲ್ಲಿ ಕಡ್ಲೆ ಬೇಸಾಯ ಗಂಗಾವಳಿ ನದಿಯ ದಕ್ಷಿಣ ತೀರದಿಂದ ನದಿಯ ಶಾಖೆಯಾಗಿ ಚಿಕ್ಕ ಹಳ್ಳವೊಂದು ಅಗ್ಗರಗೋಣ ಗ್ರಾಮದ ಅಂಚಿನಿಂದ ಹೆಗ್ರೆ ಗ್ರಾಮದವರೆಗೆ ಹರಿದು ಅಗ್ರಗೋಣ ಮತ್ತು ನಾಡುಮಾಸ್ಕೇರಿ ಗ್ರಾಮಗಳ ನಡುವೆ ಗಡಿರೇಖೆಯೊಂದನ್ನು ನಿರ್ಮಿಸಿದೆ. ಹಳ್ಳದ ಇಕ್ಕೆಲದಲ್ಲೂ ವಿಸ್ತಾರವಾದ ಗದ್ದೆಬಯಲು ಹನೇಹಳ್ಳಿಯ ಅಂಚಿನವರೆಗೂ ವ್ಯಾಪಿಸಿದೆ. ಹಳ್ಳದ ಪೂರ್ವ ದಂಡೆಯ ಅಗ್ಗರಗೋಣ ಗ್ರಾಮ ವ್ಯಾಪ್ತಿಯ ಬಯಲಲ್ಲಿ ಒಂದು ಪುಟ್ಟ ದಿನ್ನೆಯಿದೆ. ಹಳ್ಳಕ್ಕೆ ಹತ್ತಿರವಾಗಿ ಎರಡು-ಮೂರು ಗುಂಟೆಯ ಅಳತೆಯಲ್ಲಿ ವಿಸ್ತರಿಸಿಕೊಂಡಿರುವ ಈ ಗುಂದವನ್ನು ಜನರು ವಾಡಿಕೆಯಲ್ಲಿ […]

ಬೆಳಗಬೇಕಾದರೆ..!

ಕವಿತೆ ಬೆಳಗಬೇಕಾದರೆ..! ಸುಮನಸ್ವಿನಿ. ಎಂ ನೋವ ನುಂಗಲು ಹಿಂಜರಿಯದೇಘರ್ಷಿಸಿಕೊಳ್ಳಬೇಕುಬೆಳಕ ಹೊತ್ತಿಸಬೇಕಾದರೆ… ಸುಟ್ಟುಕೊಳ್ಳುವ ಅಂಜಿಕೆಯಿಲ್ಲದೇನಿರ್ಭಯ ಗೀರಿಕೊಳ್ಳಬೇಕುಬೆಳಗಬೇಕಾದರೆ… ಕರಗಿಹೋಗಲು ಕಳವಳಗೊಳದೇಪ್ರಾಂಜಲ ದಹಿಸಬೇಕುಪ್ರಜ್ವಲಿಸಬೇಕಾದರೆ… ಬೂದಿಯಾಗಲು ಹೆದರದೇಹೊತ್ತಿ ಉರಿಯಬೇಕುಬೆಳಕಾಗಬೇಕಾದರೆ… ಮಾಯವಾಗೋ ಭಯವ ಮೀರಿನಿರಂತರ ಧಗಧಗಿಸಬೇಕುಶಾಶ್ವತ ಮಿನಗುತಿರಬೇಕಾದರೆ… ******************************************

ಅಂಕಣ ಬರಹ ರಂಗ ರಂಗೋಲಿ -೨  ‘ಸಿರಿ’ ತುಂಬಿದ ಬಾಲ್ಯ ಒಂದು ಭಾವನಾ ಲೋಕದ ಹೊಸಿಲಿನ ಒಳಗೆ ರಂಗು ರಂಗಾದ ಕಲ್ಪನಾಲೋಕ ಶೃಂಗಾರಗೊಂಡು ಕೂತಿತ್ತು. ಅಲ್ಲಿ ನಿತ್ಯ ನರ್ತನ ವಿಲಾಸ. ನನ್ನಲೊಳಗೆ ” ಸಿರಿ” ಎಂಬ ಪ್ರೀತಿ ಅರಳಿದ ಪ್ರಕ್ರಿಯೆಗೆ ಮೂಲ ಬಿತ್ತನೆಯಿದು.  ಹಾಂ..ಸಿರಿ!. ಹೌದು..ಸ್ತ್ರೀ ಕುಲಕ್ಕೆ ಪ್ರತಿಭಟನೆಯ ದಾರಿಯನ್ನು ತೋರಿಸಿಕೊಟ್ಟ, ಪುರುಷ ಪ್ರಧಾನ ಸಮಾಜದ ವಿರುದ್ಧ ಬಂಡಾಯ ಸಾರಿದ ಹಳ್ಳಿಯ ಹೆಣ್ಣಿನ ಆತ್ಮವಿಶ್ವಾಸದ ಪ್ರತೀಕ. ಸ್ತ್ರೀತ್ವವನ್ನು ಅರಿವಿನ ನೆಲೆಯಲ್ಲಿ  ಗ್ರಹಿಸಬೇಕಾದ ಒತ್ತಾಯವನ್ನು ತಿಳಿಸಿದ ಇಲ್ಲಿನ ಮಣ್ಣಿನಲ್ಲಿ […]

Back To Top