ಗಜಲ್ ಸಿದ್ಧರಾಮ ಹೊನ್ಕಲ್ ಕದ್ದು ಕದ್ದು ನೋಡುವುದೇಕೆ ಹೀಗೆ ಕಾಡುವುದೇಕೆ ಸಖಿಮನ ತುಂಬಾ ಪರಸ್ಪರ ನಾವಿರಲು ಈ ಬಿಗುಮಾನವೇಕೆ ಸಖಿ ಬಿಟ್ಟಿರಲಾರೆವು ಅನುದಿನ ಪ್ರೀತಿಯೋ ಜಗಳವೋ ಒಂದೇಎಷ್ಟು ದಿನದ ಮಾತಿದು ಆದರೀಗೆ ಮಾಡುವುದೇಕೆ ಸಖಿ ಉಸಿರುಸಿರಲಿ ಪ್ರೇಮದಿ ಮನಸು ಬೆರೆತು ಹೋಗಿರುವದುಕ್ಷಣ ಕಣ್ಣ ಮುಂದೆ ಕಾಣದಿದ್ದರೆ ಚಡಪಡಿಸುವದೇಕೆ ಸಖಿ ಮನದ ಬಾಗಿಲು ಮುಚ್ಚೋದು ತೆರಿಯೋದು ಮಾಡಬೇಡಹಂಬಲಿಸಿ ಕಾದು ಕುಳಿತವಗೆ ಹುಚ್ಚನಂತೆ ಕಾಣುವುದೇಕೆ ಸಖಿ ನಾ ಎಲ್ಲಿದ್ದರೂ ಹೇಗಿದ್ದರೂ ಸದಾ ನಿನ್ನ ನೆನಪಲಿರುವುದುಯೋಚಿಸು ಹೊನ್ನಸಿರಿ’ಅಗಲಿ ಸುಖದಿ ಇರಲಾಗದೇಕೆ ಸಖಿ

ಮೊದಲ ಸ್ಪರ್ಶ ಮಾಲತಿ ಶಶಿಧರ್ ಮೊದಲ ಸ್ಪರ್ಶಮೈ ನಡುಕ ರೋಮಾಂಚಕಅದುರಿದಧರ, ಸಾಲು ಬೆವರಪದದಲ್ಲಿಡುವ ಕಸರತ್ತು ರೋಮ ರೋಮದಬಳ್ಳಿಯಲ್ಲೂ ಮೈನೆರೆದಹೂಗಳುಮನದಲ್ಲಲ್ಲಲ್ಲಿ ಬೆಳಗಿದನಕ್ಷತ್ರಗಳ ಸಾಲು ನೆನೆದು ನೆನೆದುಏರಿ ಕಾವುಬಿಸಿಯುಸಿರಲೇ ಬರೆದಶೃಂಗಾರ ರಸ ಅದೆಂತಾ ಮಾಂತ್ರಿಕಮೊದಲ ಸ್ಪರ್ಶತಣ್ಣಗೆ ಸೋಕಿಬಿಸಿ ಏರಿಸುವ ಆಟಅಣುರೇಣುವಿನಲ್ಲೂಅದರದ್ದೇ ಜೂಜಾಟ..

ವರ್ಷಧಾರೆ ಸಂಮ್ಮೋದ ವಾಡಪ್ಪಿ ಅವಳ ಕಣ್ಣ ನೋಟದಲಿಮಿಂಚು ಹರಿಯುತತಲಿತ್ತುಎನ್ನ ಮನದ ಭಾವನೆಗಳಅವಳು ಅರಿತಂತಿತ್ತು ಪ್ರೀತಿಯ ಕಾರ್ಮೋಡಗಳುವರ್ಷಧಾರೆಯ ಮಾಡಲೆಂದುಒಟ್ಟಿಗೆ ಬಂದು ನಿಂತಂತ್ತಿತ್ತುತಂಗಾಳಿಯು ತಂಪನು ಸೂಸುತಲಿತ್ತು ಪ್ರೇಮದ ಮಳೆಯ ಸಿಂಚನದಲಿನೆನೆಯಲು ಹವಣಿಸುತಲಿತ್ತುಅವಳ ಕಣ್ಣರೆಪ್ಪೆ ಎಲ್ಲ ತಿಳಿಸಿತ್ತುಕಾದಿರುವ ಮನದ ದಣಿವಾರಿತ್ತು ಕಿರುನಗೆಯು ಮೊಗದಲಿ ಹೊರಹೊಮ್ಮಿತ್ತುಮನದ‌ ತೊರೆಯು ತುಂಬಿಹರಿದಿತ್ತುಬಾಳ ಸಂಗಾತಿಯ ಪ್ರೇಮದ ಪರಿಯೇಬದುಕಲ್ಲಿ ಭರವಸೆಯ ಬಹು ಚೆಲ್ಲಿತ್ತು ನಲ್ಮೆಯ ಗೆಳತಿಯು ಕೈಹಿಡಿದು ನಡೆವಾಗನೀರು ಗಾಳಿ ಸೇರಿ ಒಲವ ಧಾರೆಯ ಎರೆದುನೀರುಣಿಸಿ ಕಾರ್ಮೋಡ ಸರಿದು ಹೋಗಿತ್ತುಜೊತೆಯಲಿ ನಡೆವ ದಾರಿಯಲಿ ಬೆಳಕು ಕಂಡಿತ್ತು *********************************

ಒಪ್ಪಿಸಿಕೋ… ಜಿ. ಲೋಕೇಶ ಕಾಡುತಿದೆ ಎದೆಯ ಮಾತೊಂದುಸಿಗುವೆಯಾ ಹೇಳಲೇ ಬೇಕಿಂದುಆವರಿಸಿ ಹೀಗೊಂದು ಭಾವಕಳೆದಿದೆ ವರುಷವೇ ತಿಳಿ ಜೀವನನ್ನ ಒಳಗೆ ಮೌನಿ ನಾನುಒಮ್ಮೆ ಒಂದು ಕೇಳೇ ನೀನುಮೊರೆಯಿಡುತಿರುವೆ ತುಂಬಲು ಒಲವನ್ನು ಇದ್ದೇನು ನನ್ನ ಪಾಡಿಗೆಕಂಡೇನು ಕಣ್ಣ ಕಾಡಿಗೆಕಸಿದೇ ನೀನು ಒಂಟಿತನವಒರಟ ನಾನು ಕಂಡು ಒಲವಹೆಜ್ಜೆಯು ಹಸಿರು ಹಾದಿಗೆಹೊರಳಿತು ಮಾತಿಲ್ಲದೆಹಿಡಿತ ನಿಂದು ಬಿಡಿಸು ಬಂದುತುಡಿತ ನಂದು ತಿಳಿಸು ನಿಂದು ಕಳೆದಿದೆ ನನ್ನ ಬೇಸಿಗೆನೆನೆದನು ನಿನ್ನ ಮಳೆಗೆಬಿಸಿಯ ಬೇಕು ಎದೆಯ ಮಾತುಬಳಿಯಲೊಮ್ಮೆ ಕೇಳು ಕೂತುಅರಳಿಸು ಎದೆಯ ಕುಸುಮಬಿರಿಯಲಿ ಮೀರಿಸಿ ದಿನವಮಿಡಿತ ನಂದು […]

ಕಾದಿಹುದು ತನು ಮನ ಶುಭಲಕ್ಷ್ಮಿ ಆರ್ ನಾಯಕ ಇಳಿ ಸಂಜೆಯು ಜಾರುತಿಹುದುತಂಗಾಳಿಯು ಸ್ಪರ್ಶಿಸಿಹುದುಪ್ರೇಮ ರಾಗ ಹಾಡುತಿಹುದುಒಲವ ವೀಣೆ ನುಡಿಯುತಿಹುದು//೧// ನಮ್ಮಿಬ್ಬರ ಮಿಲನಕೆಕಡಲಲೆಗಳ ಚುಂಬನಚಂದ್ರನಿರದ ಬಾನಿನಲ್ಲಿನಲ್ಲೆ ನೀನೆ ಚಂದ್ರಮ//೨// ಜೀವನದ ಕನಸಹೊತ್ತುತೇಲುತಿಹುದು ನಮ್ಮ ಮನಒಲುಮೆಯೆಂಬ ಸಾಗರದಲಿಪ್ರೀತಿಯ ಅಲೆ ಅಲೆಗಳಾಗಿ//೩// ಮರಳ ರಾಶಿಯ ತೀರದಲಿಮಿಣುಕು ದೀಪದ ಬೆಳಕಿನಲ್ಲಿಬಾನು ಭುವಿಯ ಸಂಗಮದಲಿನಮ್ಮೀರ್ವರ ಸರಸ ಸಲ್ಲಾಪಕೆ//೪// ಪ್ರಕೃತಿಯ ಸೌಂದರ್ಯದಲಿನವ ಭಾವದ ರೋಮಾಂಚನಕೆಒಲವಿನಾ ಮಿಲನಕೆಕಾದಿಹುದು ತನುಮನ//೫// ******************************************

ನಿನ್ನ ಆಶ್ರಯ ಅನ್ನಪೂರ್ಣ.ಡೇರೇದ. ಕುಸುಮ ರಾಶಿಯಸುಗಂಧ ನೀನುಆ ಬಾನ ತಾರೆಯಮಿಂಚು ನೀನುನಿನ್ನ ಪ್ರೀತಿಗಾಸರೆನಾನು.ಮೌನ ವೀಣೆಮೀಟುತ ಒ!ಲವರಾಗ ಹಾಡುತಕಣ್ಣಂಚ ಕರೆಯಲಿನನಗಾಸರೆ ನೀಡಿದೆನೀನುಕಡಲ ಚಿಪ್ಪೊಂದುಮುತ್ತಿಗಾಸರೆಯಾದರೆನನ್ನ ˌನಿನ್ನ ಹೃದಯಕಲರವಕೆ ಒಲುಮೆಯಾಸರೆ.

ಪ್ರೀತಿಯ ತಿರುಳು ರೇಶ್ಮಾಗುಳೇದಗುಡ್ಡಾಕರ್ ಕರುಣೆಯ ಒಳಗಿನ‌ ಮಾತಲ್ಲಈ ಒಲವು ಎದೆಯೊಳಗಿನ‌ಪದಮಿಕ್ಕಿದ ಚರಿತೆ …. ನಿನ್ನ ಕಂಗಳ ಅಂಗಳಕೆಹರಿಯುವದು ನೋಟವಾಗಿ‌ಭಾವನೆಗಳಿಗೆ ಹೂ ದೋಟವಾಗಿಅಂತರಂಗದೊಗೆ ಬೆಳದಿಂಗಳಾಗಿತನ್ಮಯಗೊಳಿಸುವದು ತನುವಸವಿ ನೆನಪುಗಳಲಿ‌…… ಸ್ವಾರ್ಥ ದ ರೂಪ ವಲ್ಲಈ ಒಲವು ‌ಮಮತೆಯ ಆಗರ , ಬತ್ತಿದಬದುಕಿಗೆ ಜೀವನ್ಮುಖಿ ಸುಧೆಆಮಿಷಗಳು ,ಆಡಬಂಡರಎಂದೂ ಪ್ರೀತಿಯ ಹಿಮ್ಮಡಿ ಮಾಡುವದಿಲ್ಲನಿರ್ವಾಜ್ಯ ಅನುರಾಗ ಈ‌ ಬದುಕಿಗೆನಂದಾದೀಪ …… ಮುಖವಾಡಗಳ ಹೊತ್ತುನಿಷ್ಕಲ್ಮಷ ಪ್ರೀತಿಯ ಅರಸಿದರೆಫಲವೇನು ಓ ಹೃದಯಮೊದಲು ನಿನ್ನ ನೀನುಅರಿ ನಂತರ ಜಗವ ನೋಡು ಬಾ ….ಕಾಣುವದು ಒಲವ ಸುಧೆಯು‌ಧುಮ್ಮಿಕ್ಕುವ ಜಲಪಾತದಂತೆತನ್ನವರ ಸೇರುವದು‌ತಣ್ಣಗೆ […]

ಓ ನನ್ನ ಪ್ರೇಮದೂತರೆ… ಕವಿತಾ ಹೆಗಡೆ ತಾರೆಗಳ ನಡುವೆ ಚೆಲ್ಲಾಡುವ ಚಂದ್ರಮನೆನನ್ನ ಕರಗಳ ಕೋಮಲ ಸ್ಪರ್ಶ ಸ್ವೀಕರಿಸುನನ್ನ ವಿರಹದುರಿಯಲಿ ದಹಿಸಿ ಬೆಂದಿರುವನನ್ನ ನಲ್ಲನನ್ನುಪಚರಿಸಿ ತಂಪಾಗಿಸು ಬೀಸಿ ಓಡುವ ಗಾಳಿ ಮರೆಯಾಗದಿರು ಹಾಗೆನನ್ನ ಗಂಧವ ಹೀರಿ ಅವನೆಡೆಗೆ ತೆರಳುನನ್ನ ಪರಿಮಳವವನ ನಾಸಿಕದಿ ತುಂಬಿನನ್ನುಸಿರು ಅವನುಸಿರು ಒಂದಾಗಿಸು ಸುಡುವ ಸೂರ್ಯನೆ ಸಾಕಿನ್ನು ಸುಮ್ಮನಿರುನನ್ನ ಕಂಗಳ ಕಾಂತಿ ಕೊಂಡು ಹೋಗುನನ್ನ ಚಿತ್ರವ ಅವನ ಕಣ್ಣಲ್ಲಿ ಬಿತ್ತಿನನ್ನೊಲವ ನೋಟವನೆಲ್ಲೆಡೆ ಪಸರಿಸು ಮತ್ತೆ ಮಳೆಗರೆಯುವ ಮರುಳು ಮೋಡವೆನನ್ನ ಕಣ್ಣೀರ ಕೋಡಿಯನೆ ಮೊಗೆದು ಕೊಡುವೆನನ್ನ ನೆನೆದು […]

ಒಲವಿನ ಬೆಳಕ ಹುಳು… ಡಾ. ಅರಕಲಗೂಡು ನೀಲಕಂಠ ಮೂರ್ತಿ ೧)ಒಂದೊಮ್ಮೆ ಎನ್ನೆದೆಯೊಲುಮೆಯಸೀಮೆಯ ಗಣಿಗಳಿಗೆಹೊಳೆವ ಬೆಳ್ಳಿ ಬಂಗಾರದ ಬೆರಗುಹರಿಸಿದ ಮಿಂಚು ಹುಳುವೆಯಾವ ದಿಕ್ಕಿನ ಕಡೆ ಹಾರಿ ಹೋದೆಅಂದಿನಿಂದ ಇಂದಿನವರೆಗೂಮತ್ತೊಮ್ಮೆ ಕಾಣದ ಹಾಗೆ…ಆ ಪ್ರೇಮದ ಗಣಿಯಲ್ಲಿಈಗ ನಿತ್ಯ ನಿರಂತರ ಕತ್ತಲೆ! ಅಂದು ಅದೆಷ್ಟೆಷ್ಟು ಆಳದಲ್ಲಿಎಂಥೆಂಥಾ ಅಂಕು ಡೊಂಕಲ್ಲಿಆ ಗಣಿ ಅಗೆದರೂ ಬಗೆದರೂಕಣ್ಣು ಕೋರೈಸಿದ್ದ ಪ್ರಖರ ಬೆಳಕುಕಾಂತ ಪ್ರೇಮ ದಿಕ್ಕು ದಿಕ್ಕುಗಳಲು!ಜಗವೆಲ್ಲ ಹೃದಯಂಗಮದಂಗಳ…ಬೆಳ್ಳಿ ಬಂಗಾರಗಳೆ ನಾಚಿ ತಲೆತಗ್ಗಿಸಿನಿಂತ ಹಾಗೆ ಮೂಕಮೌನದಲಿ!ಹಗಲು ಕಂಡ ಒಲವ ಹೊನಲುಚಿಮ್ಮುವ ಕಣ್ಣುಗಳಲಿ ಮತ್ತೆ ಕೊನರಿರಾತ್ರಿ ಕನಸಿನಲಿ ಶಶಿರಥದೈಸಿರಿ! […]

ನತದೃಷ್ಟರಿವರು

ದೀಪಾವಳಿಯ ಬೆಳಕು ಕಾಣದವರು
ದಸರಾ ಬನ್ನಿ ಮುಡಿಯದವರು
ಯುಗಾದಿಯ ಹರುಷ ಪಡೆಯದವರು
ಗೌರಿಯ ಆರತಿ ಇಲ್ಲದ ಸಹೋದರರ ರಾಖಿಯ ಪ್ರೀತಿ ಸಿಗದವರು

Back To Top