ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೊದಲ ಸ್ಪರ್ಶ

ಮಾಲತಿ ಶಶಿಧರ್

Person Wearing Silver Ring With Red Nail Polish

ಮೊದಲ ಸ್ಪರ್ಶ
ಮೈ ನಡುಕ ರೋಮಾಂಚಕ
ಅದುರಿದಧರ, ಸಾಲು ಬೆವರ
ಪದದಲ್ಲಿಡುವ ಕಸರತ್ತು

ರೋಮ ರೋಮದ
ಬಳ್ಳಿಯಲ್ಲೂ ಮೈನೆರೆದ
ಹೂಗಳು
ಮನದಲ್ಲಲ್ಲಲ್ಲಿ ಬೆಳಗಿದ
ನಕ್ಷತ್ರಗಳ ಸಾಲು

ನೆನೆದು ನೆನೆದು
ಏರಿ ಕಾವು
ಬಿಸಿಯುಸಿರಲೇ ಬರೆದ
ಶೃಂಗಾರ ರಸ

ಅದೆಂತಾ ಮಾಂತ್ರಿಕ
ಮೊದಲ ಸ್ಪರ್ಶ
ತಣ್ಣಗೆ ಸೋಕಿ
ಬಿಸಿ ಏರಿಸುವ ಆಟ
ಅಣುರೇಣುವಿನಲ್ಲೂ
ಅದರದ್ದೇ ಜೂಜಾಟ..

About The Author

1 thought on “”

Leave a Reply

You cannot copy content of this page

Scroll to Top