ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಓ ನನ್ನ ಪ್ರೇಮದೂತರೆ…

ಕವಿತಾ ಹೆಗಡೆ

Image result for photos sculptures of god of love

ತಾರೆಗಳ ನಡುವೆ ಚೆಲ್ಲಾಡುವ ಚಂದ್ರಮನೆ
ನನ್ನ ಕರಗಳ ಕೋಮಲ ಸ್ಪರ್ಶ ಸ್ವೀಕರಿಸು
ನನ್ನ ವಿರಹದುರಿಯಲಿ ದಹಿಸಿ ಬೆಂದಿರುವ
ನನ್ನ ನಲ್ಲನನ್ನುಪಚರಿಸಿ ತಂಪಾಗಿಸು

ಬೀಸಿ ಓಡುವ ಗಾಳಿ ಮರೆಯಾಗದಿರು ಹಾಗೆ
ನನ್ನ ಗಂಧವ ಹೀರಿ ಅವನೆಡೆಗೆ ತೆರಳು
ನನ್ನ ಪರಿಮಳವವನ ನಾಸಿಕದಿ ತುಂಬಿ
ನನ್ನುಸಿರು ಅವನುಸಿರು ಒಂದಾಗಿಸು

ಸುಡುವ ಸೂರ್ಯನೆ ಸಾಕಿನ್ನು ಸುಮ್ಮನಿರು
ನನ್ನ ಕಂಗಳ ಕಾಂತಿ ಕೊಂಡು ಹೋಗು
ನನ್ನ ಚಿತ್ರವ ಅವನ ಕಣ್ಣಲ್ಲಿ ಬಿತ್ತಿ
ನನ್ನೊಲವ ನೋಟವನೆಲ್ಲೆಡೆ ಪಸರಿಸು

ಮತ್ತೆ ಮಳೆಗರೆಯುವ ಮರುಳು ಮೋಡವೆ
ನನ್ನ ಕಣ್ಣೀರ ಕೋಡಿಯನೆ ಮೊಗೆದು ಕೊಡುವೆ
ನನ್ನ ನೆನೆದು ಬಾಡಿದವನದೆಗೆ ಸುಧೆ ಸುರಿದು
ನನ್ನೊಲವಿನ ಚಿಗುರು ಬೇಗ ಬೆಳೆಸು

ಒಂದು ಕೈ ನನಗಾಗಿ ಇನ್ನೊಂದು ನಲ್ಲನಿಗಾಗಿ
ಚಾಚಿ ಮಿಲನದ ದಾರಿ ತೋರುವವರಾಗಿ
ಮಧುರ ಪ್ರೇಮಕೆ ಜಗವೇ ತಡೆಯಾಗಿ ನಿಂತಿಹುದು
ನಿಮ್ಮ ದಯೆಯಿರೆ ಒಲವು ಅಮರವಾಗುವುದು

******************

About The Author

1 thought on “”

Leave a Reply

You cannot copy content of this page

Scroll to Top