ಗಜಲ್

ಸಿದ್ಧರಾಮ ಹೊನ್ಕಲ್

Silhouette of Kissing Couple

ಕದ್ದು ಕದ್ದು ನೋಡುವುದೇಕೆ ಹೀಗೆ ಕಾಡುವುದೇಕೆ ಸಖಿ
ಮನ ತುಂಬಾ ಪರಸ್ಪರ ನಾವಿರಲು ಈ ಬಿಗುಮಾನವೇಕೆ ಸಖಿ

ಬಿಟ್ಟಿರಲಾರೆವು ಅನುದಿನ ಪ್ರೀತಿಯೋ ಜಗಳವೋ ಒಂದೇ
ಎಷ್ಟು ದಿನದ ಮಾತಿದು ಆದರೀಗೆ ಮಾಡುವುದೇಕೆ ಸಖಿ

ಉಸಿರುಸಿರಲಿ ಪ್ರೇಮದಿ ಮನಸು ಬೆರೆತು ಹೋಗಿರುವದು
ಕ್ಷಣ ಕಣ್ಣ ಮುಂದೆ ಕಾಣದಿದ್ದರೆ ಚಡಪಡಿಸುವದೇಕೆ ಸಖಿ

ಮನದ ಬಾಗಿಲು ಮುಚ್ಚೋದು ತೆರಿಯೋದು ಮಾಡಬೇಡ
ಹಂಬಲಿಸಿ ಕಾದು ಕುಳಿತವಗೆ ಹುಚ್ಚನಂತೆ ಕಾಣುವುದೇಕೆ ಸಖಿ

ನಾ ಎಲ್ಲಿದ್ದರೂ ಹೇಗಿದ್ದರೂ ಸದಾ ನಿನ್ನ ನೆನಪಲಿರುವುದು
ಯೋಚಿಸು ಹೊನ್ನಸಿರಿ’ಅಗಲಿ ಸುಖದಿ ಇರಲಾಗದೇಕೆ ಸಖಿ

One thought on “

Leave a Reply

Back To Top