ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೀತಿಯ ತಿರುಳು

ರೇಶ್ಮಾಗುಳೇದಗುಡ್ಡಾಕರ್

Image result for photos of love in arts

ಕರುಣೆಯ ಒಳಗಿನ‌ ಮಾತಲ್ಲ
ಈ ಒಲವು ಎದೆಯೊಳಗಿನ‌
ಪದಮಿಕ್ಕಿದ ಚರಿತೆ ….

ನಿನ್ನ ಕಂಗಳ ಅಂಗಳಕೆ
ಹರಿಯುವದು ನೋಟವಾಗಿ‌
ಭಾವನೆಗಳಿಗೆ ಹೂ ದೋಟವಾಗಿ
ಅಂತರಂಗದೊಗೆ ಬೆಳದಿಂಗಳಾಗಿ
ತನ್ಮಯಗೊಳಿಸುವದು ತನುವ
ಸವಿ ನೆನಪುಗಳಲಿ‌……

ಸ್ವಾರ್ಥ ದ ರೂಪ ವಲ್ಲ
ಈ ಒಲವು ‌
ಮಮತೆಯ ಆಗರ , ಬತ್ತಿದ
ಬದುಕಿಗೆ ಜೀವನ್ಮುಖಿ ಸುಧೆ
ಆಮಿಷಗಳು ,ಆಡಬಂಡರ
ಎಂದೂ ಪ್ರೀತಿಯ ಹಿಮ್ಮಡಿ ಮಾಡುವದಿಲ್ಲ
ನಿರ್ವಾಜ್ಯ ಅನುರಾಗ ಈ‌ ಬದುಕಿಗೆ
ನಂದಾದೀಪ ……

ಮುಖವಾಡಗಳ ಹೊತ್ತು
ನಿಷ್ಕಲ್ಮಷ ಪ್ರೀತಿಯ ಅರಸಿದರೆ
ಫಲವೇನು ಓ ಹೃದಯ
ಮೊದಲು ನಿನ್ನ ನೀನು
ಅರಿ ನಂತರ ಜಗವ ನೋಡು ಬಾ ….
ಕಾಣುವದು ಒಲವ ಸುಧೆಯು‌
ಧುಮ್ಮಿಕ್ಕುವ ಜಲಪಾತದಂತೆ
ತನ್ನವರ ಸೇರುವದು‌
ತಣ್ಣಗೆ ಹರಿಯುವ ನದಿಯಂತೆ …..

********************************

About The Author

5 thoughts on “”

Leave a Reply

You cannot copy content of this page

Scroll to Top