ಕಾದಿಹುದು ತನು ಮನ

ಶುಭಲಕ್ಷ್ಮಿ ಆರ್ ನಾಯಕ

Image result for photos of love paintings

ಇಳಿ ಸಂಜೆಯು ಜಾರುತಿಹುದು
ತಂಗಾಳಿಯು ಸ್ಪರ್ಶಿಸಿಹುದು
ಪ್ರೇಮ ರಾಗ ಹಾಡುತಿಹುದು
ಒಲವ ವೀಣೆ ನುಡಿಯುತಿಹುದು//೧//

ನಮ್ಮಿಬ್ಬರ ಮಿಲನಕೆ
ಕಡಲಲೆಗಳ ಚುಂಬನ
ಚಂದ್ರನಿರದ ಬಾನಿನಲ್ಲಿ
ನಲ್ಲೆ ನೀನೆ ಚಂದ್ರಮ//೨//

ಜೀವನದ ಕನಸಹೊತ್ತು
ತೇಲುತಿಹುದು ನಮ್ಮ ಮನ
ಒಲುಮೆಯೆಂಬ ಸಾಗರದಲಿ
ಪ್ರೀತಿಯ ಅಲೆ ಅಲೆಗಳಾಗಿ//೩//

ಮರಳ ರಾಶಿಯ ತೀರದಲಿ
ಮಿಣುಕು ದೀಪದ ಬೆಳಕಿನಲ್ಲಿ
ಬಾನು ಭುವಿಯ ಸಂಗಮದಲಿ
ನಮ್ಮೀರ್ವರ ಸರಸ ಸಲ್ಲಾಪಕೆ//೪//

ಪ್ರಕೃತಿಯ ಸೌಂದರ್ಯದಲಿ
ನವ ಭಾವದ ರೋಮಾಂಚನಕೆ
ಒಲವಿನಾ ಮಿಲನಕೆ
ಕಾದಿಹುದು ತನುಮನ//೫//

******************************************

One thought on “

Leave a Reply

Back To Top