ಒಪ್ಪಿಸಿಕೋ…
ಜಿ. ಲೋಕೇಶ
ಕಾಡುತಿದೆ ಎದೆಯ ಮಾತೊಂದು
ಸಿಗುವೆಯಾ ಹೇಳಲೇ ಬೇಕಿಂದು
ಆವರಿಸಿ ಹೀಗೊಂದು ಭಾವ
ಕಳೆದಿದೆ ವರುಷವೇ ತಿಳಿ ಜೀವ
ನನ್ನ ಒಳಗೆ ಮೌನಿ ನಾನು
ಒಮ್ಮೆ ಒಂದು ಕೇಳೇ ನೀನು
ಮೊರೆಯಿಡುತಿರುವೆ ತುಂಬಲು ಒಲವನ್ನು
ಇದ್ದೇನು ನನ್ನ ಪಾಡಿಗೆ
ಕಂಡೇನು ಕಣ್ಣ ಕಾಡಿಗೆ
ಕಸಿದೇ ನೀನು ಒಂಟಿತನವ
ಒರಟ ನಾನು ಕಂಡು ಒಲವ
ಹೆಜ್ಜೆಯು ಹಸಿರು ಹಾದಿಗೆ
ಹೊರಳಿತು ಮಾತಿಲ್ಲದೆ
ಹಿಡಿತ ನಿಂದು ಬಿಡಿಸು ಬಂದು
ತುಡಿತ ನಂದು ತಿಳಿಸು ನಿಂದು
ಕಳೆದಿದೆ ನನ್ನ ಬೇಸಿಗೆ
ನೆನೆದನು ನಿನ್ನ ಮಳೆಗೆ
ಬಿಸಿಯ ಬೇಕು ಎದೆಯ ಮಾತು
ಬಳಿಯಲೊಮ್ಮೆ ಕೇಳು ಕೂತು
ಅರಳಿಸು ಎದೆಯ ಕುಸುಮ
ಬಿರಿಯಲಿ ಮೀರಿಸಿ ದಿನವ
ಮಿಡಿತ ನಂದು ಬಡಿತ ನಿಂದು
ಒಮ್ಮೆ ಬಂದು ಹೇಳು ನಿಂದು
******************************
Very nice
super
Super