ಈಗಲೂ ನನಗೆ ತಾಯಪ್ರೀತಿ ಅಂದಾಗ ಮಹಾ ನಿಷ್ಠುರಿಯಾಗಿದ್ದ, ಸಂಸಾರ ಸಂಭಾಳಿಸುತ್ತ ಸಿಡುಕಿಯಾಗಿದ್ದ ನನ್ನಮ್ಮ ನೆನಪಾಗುವುದಿಲ್ಲ. ಮಕ್ಕಳಿಲ್ಲದೆ ನನ್ನಂತಹವರನ್ನು ಸಾಕಿದ ಪಾರ್ವತಕ್ಕ ನೆನಪಾಗುತ್ತಾಳೆ. ಕೆಂಪನೆಯ ನಕ್ಕಾಗ ನಿರಿಗೆಗಟ್ಟುವ ಅವಳ ಮುಖ ನೆನಪಾಗುತ್ತದೆ.
ಇಂತಹ ಅಗಾಧತೆಯಲ್ಲಿ ಸೂಜಿ ಮೊನೆಯ ಮಿದುಳಿನ ಮನುಷ್ಯ ಮತ್ತು ಆತನ ಮನಸ್ಸು, ತಾನು ಮಾತ್ರ ಜೀವಿ, ಇನ್ನುಳಿದ ಕಲ್ಲು, ಭೂಮಿ, ನಕ್ಷತ್ರ, ಆಕಾಶಗಳು ನಿರ್ಜೀವಿ ಎಂದು ನಿರ್ಧರಿಸುವಾಗ, ಆ ಪ್ರಜ್ಞೆ ಎಷ್ಟು ಸ್ವಕೇಂದ್ರಿತವಲ್ಲವೇ?.
ಶಾಯರಿ
ಶಾಯರಿ ಭಾರತಿ ರವೀಂದ್ರ ಕವಿತೆ ನೀನೇಕೆನಲ್ಲನ ನಯನದಿ ಕುಳಿತೆ,ದಿಟ್ಟಿಸಿ ನೋಡಲಾರೆದೃಷ್ಟಿ ತಾಕಿತು ಪಾಪ. ಅಂಗಳದಿ ಬಿಡಿಸಿದಬಣ್ಣ ಬಣ್ಣದ ಚಿತ್ತಾರದಲಿ ನಿನ್ನನ್ನೇಹುಡುಕುತಿದ್ದೆಆದ್ರೆ ಬೆರಳಿಗಂಟಿದ ರಂಗ ವಲ್ಲಿ ಯಲ್ಲಿ ನಿನಿದ್ದೆ ಅಷ್ಟ್ಯಾಕೆ ಕನಸು ಕಾಣ್ತಿ ಹುಚ್ಚಖೋಡಿ ಮನಸಾಅವ್ ನೋಡಿ ನಕ್ಕಿದ್ದುನಿನಗಲ್ಲ. ನಿನ್ನ ಪಕ್ಕ ಇರೋ ಕೆಂಪನೆ ನಿನ್ನ ಗೆಳತಿನ್ನ ನೋಡಿ. ಪಿರೂತಿ ಅನ್ನೋದುಎದ್ಯಾಗ್ ನೆಟ್ಟಿದ ಚೂರಿಹಾಂಗಹಂಗ್ ಬಿಟ್ಟರ ಚುಚ್ಚುತಾನ ಇರತೈತಿತೆಗಿದ್ರ. ಮನುಷ್ಯಾ ಸತ್ತಹೋಗ್ತಾನ
ಟಂಕಾಗಳು
ಟಂಕಾಗಳು ಕೆ. ಸುನಂದಾ ಹಸಿದ ಹೊಟ್ಟೆಅರಸು ವೇಷ ; ಖಾಲಿಊಟದ ತಟ್ಟೆಜೀವನ ಸಾಗಿಸಲುಬೀದಿ ನಾಟಕದಾಟ** ನಡೆ ನುಡಿಯುಒಂದಾಗಲು ; ಜೀವನಸಾರ್ಥಕವಾಯ್ತುಕಪಟ ಮೋಸಗಳುಅಧಃಪತನ ವಾಯ್ತು** ನಾನೇ ಎಂಬುದುಅಹಂಕಾರ ; ನನ್ನದೇಎಂದರೆ ನಾಶಜೀವನ ನಡೆಸಲುಅರಿತು ಸಾಗಬೇಕು** ಜೀವನದಲ್ಲಿಸತ್ಯಕ್ಕೆ ; ಸಾವೇ ಇಲ್ಲಅಸತ್ಯ ಬೇಡಸಂಸ್ಕಾರ ವಂತರಿಗೆಜಯ ಕಟ್ಟಿಟ್ಟ ಬುತ್ತಿ** ಸಾವಿರ ಜನಸೇರಿ ಆಡುವ ಮಾತುಲೆಕ್ಕಕ್ಕೆ ಅಲ್ಲಆತ್ಮನ ನಿರ್ಧಾರವುಒಳಿತಿಗೆ ದಾರಿಯು** ಜೀವನ ಸಾರಕೆಲಸ ಮಾಡಿ ತಿನ್ನುಅನ್ಯರನೆಂದೂತಿರಸ್ಕರಿಸದಿರುಒಳಿತಿನ ಗುಟ್ಟಿದು** ಆಡದೇ ಮಾಡುಕೆಲಸ ಕೈ ಬಿಡದುಹಂಬಲವೇಕೆಫಲ ಅವನ ಇಚ್ಛೆನಿಷ್ಕಾಮ ಕರ್ಮ ಸಾಕು* ಸತ್ಯದ ನುಡಿಕೊನೆವರೆಗೆ ನಡಿಅಸತ್ಯ […]
ನವನವೋನ್ಮೇಶಶಾಲಿನಿ !
ಕವಿತೆ ನವನವೋನ್ಮೇಶಶಾಲಿನಿ ! ಕಾತ್ಯಾಯಿನಿ ಕುಂಜಿಬೆಟ್ಟು ಕವನ ಹುಟ್ಟುತ್ತಿಲ್ಲನವಮಾಸ ಉರುಳಿದರೂಹೆರದೆ ಹೊಟ್ಟೆಯೇ ಮೈ ಆಗಿರುವ ತುಂಬುಬಸಿರಿಯ ಹಾಗೆ ಅಂಗಾತಏದುಸಿರಲಿ ಅವಡುಗಚ್ಚಿ ಕಾಯುತ್ತಿರುವೆ ನಾಳೆ ಮೋಡಗಳ ಗಭ೯ ಸೀಳಿಕೊಂಡುನೇಸರ ಹುಟ್ಟುತ್ತಾನೆಕಾಳುಗಳು ಕಣ್ತೆರೆದುಕವಿತೆಗಳನ್ನು ಹೆರುತ್ತವೆಕಿರಣಗಳು ಆಟಿಕೆಗಳಾಗುತ್ತವೆಸುರುಳಿ ಸುಳಿವ ಕೋಮಲ ಬೆರಳುಗಳಿಗೆಇರುಳಲಿ ಹೂವುಗಳು ಬಸಿರಲಿ ಕಾಯಿಬ್ರೂಣಗಳನ್ನು ಹೆರಲುಕಾಯುತ್ತವೆಎಲ್ಲ ನಾಮ೯ಲ್ ಡೆಲಿವರಿ ನಾಳೆಗಳು ನಗುತ್ತವೆ ಕಾಲದ ಧಾವಂತದ ನಡಿಗೆ ಕಂಡುಮುಸಿಮುಸಿ ಎಂತೆಂಥ ಭಾಸ ಭವಭೂತಿ ಬೋಜಕಾಳಿದಾಸರು ಕಾಳುಗಳಲ್ಲಿ ಕಣ್ತೆರೆದು ಹಾಲತೆನೆತೆನೆಗಳನ್ನು ಉಣಿಸಿ…ಭಾಸನು ಕಾಲಕ್ಕೆ ದಾಸನಾಗಿಭವಭೂತಿಯು ಕಾಲರುದ್ರನ ಹಣೆಯ ವಿಭೂತಿಯಾಗಿಕಾಲ ತಾನು ಹೆತ್ತದ್ದನ್ನೇ ತಾನೇ […]
ಒಳ್ಳೆಯ ದಿನವೆಂದರೆ…
ವಿಲಿಯಂ ಬ್ಲೇಕ್ ನ Holy Thursday ಅನುವಾದ: ವಿಠ್ಠಲ ದಳವಾಯಿ ಕಂಪಿಸುವ ದನಿಯು ಹಾಡೇ?ಅದು ಸಂತಸದ ಪದವಾಗಿ ಬದಲಾದೀತೆ?ಬಹುಪಾಲು ಮಕ್ಕಳು ಮೂಳೆ ಚಕ್ಕಳವಾದರೆಇದು ಬಡವರ ಭೂಮಿಯೇ ಹೌದು! ಅವರ ಮಗನ ಕಣ್ಣು ಎಂದೂ ಹೊಳೆಯುವದಿಲ್ಲಬರದಿಂದ ಬಣ್ಣಗೆಟ್ಟು ಒಣಗಿಯೇ ಇವೆ ಹೊಲಬದುಕು ಪೂರಾ ಕಲ್ಲು ಮುಳ್ಳಿನ ಹಾದಿಎಂದಿಗೆ ಕೊನೆ ಮಾಗಿ ಚಳಿಯ ತೇದಿ? ಒಂದು ಸಿರಿವಂತ, ಫಲವತ್ತಾದ ಭೂಮಿಯಲ್ಲಿಅತ್ತು ಅತ್ತು ಸತ್ತು ಹೋಗುವ ಕಂದಮ್ಮಗಳಿಗೆತುತ್ತು ಉಣಿಸಲೂ ಕೈಯೇಳದಿದ್ದರೆಈ ನೆಲ ಭವ್ಯ, ಪವಿತ್ರ ಎನ್ನಬಹುದೇ? ಎಲ್ಲೆಡೆಗೂ ಸೂರ್ಯನ ಬೆಳಗು ಬಂದರೆಎಲ್ಲೆಡೆಗೂ […]
ಗಜಲ್
ಗಜಲ್ ರತ್ನರಾಯ ಮಲ್ಲ ಇಲ್ಲಿ ಚುನಾವಣೆಯ ಹಸಿವು ಹೆಚ್ಚಾಗುತಿದೆಮುಖಂಡರುಗಳ ಓಡಾಟವು ಹೆಚ್ಚಾಗುತಿದೆ ಗಲ್ಲಿ-ಗಲ್ಲಿಗಳಲ್ಲಿ ಓಟು-ನೋಟಿನದ್ದೆ ಮಾತುಮನೆ-ಮನಗಳಲ್ಲಿ ಮತ್ಸರವು ಹೆಚ್ಚಾಗುತಿದೆ ಶಾಂತಿಗಾಗಿ ಅವಿರೋಧವೆ ಚಂದ ಎನ್ನುವರುಕೋಟಿ ಕಬಳಿಸುವ ದಾಹವು ಹೆಚ್ಚಾಗುತಿದೆ ಊರು ಉದ್ಧಾರದ ಮಾತುಗಳು ಕೇಳುತಿವೆದೊಡ್ಡವರಲ್ಲಿ ತಿನ್ನುವ ಗುಣವು ಹೆಚ್ಚಾಗುತ್ತಿದೆ ಬೇಲಿಯೇ ಎದ್ದು ಹೊಲ ಮೇಯುತಿದೆ ‘ಮಲ್ಲಿ’ಜನರ ಮನಸುಗಳಲ್ಲಿ ಕ್ರೋಧವು ಹೆಚ್ಚಾಗುತಿದೆ ******************************
ಗಜಲ್
ಗಜಲ್ ಶುಭಲಕ್ಷ್ಮಿ ಆರ್ ನಾಯಕ ಇತರರ ಅಲ್ಲ ಸಲ್ಲದ ನುಡಿಗೆ ನೋಯದಿರು ಗೆಳತಿಪರರು ಆಡುವ ಬಿರುನುಡಿಗಳಿಗೆ ಅಂಜದಿರು ಗೆಳತಿ ನಿನ್ನಾತ್ಮ ಸಾಕ್ಷಿಯದು ನಿಜವನ್ನೇ ನುಡಿಯುವಾಗಕುಹಕಿಗಳ ಕುಹಕಕ್ಕೆ ಮನಕೆಡಿಸಿಕೊಳದಿರು ಗೆಳತಿ ಧರಣಿಯ ಮನುಜರಲ್ಲಿ ಮಾನವೀಯತೆಯ ತುಂಬಲುವ್ಯರ್ಥವಾಗಿ ಎಂದಿಗೂ ನೀನು ಹೆಣಗದಿರು ಗೆಳತಿ ಕೊಡುವ ದಾನ ಧರ್ಮಗಳಲಿ ಪುಣ್ಯವಿದೆ ಎಂದರಿತುಅಪಾತ್ರರಿಗೆ ದಾನ ಧರ್ಮವನು ಮಾಡದಿರು ಗೆಳತಿ ಸಾಂತ್ವನವ ನಯದಿ ಹೇಳುತ ಧೈರ್ಯ ನೀಡುವೆಯೆಂದುಸಂಕುಚಿತಮನದವರಿಗೆ ಉಪದೇಶಿಸದಿರು ಗೆಳತಿ ನಂಬಿಕೆ ವಿಶ್ವಾಸದಲಿ ಧೈರ್ಯ ತುಂಬುವ ಜನರನುನಿನ್ನ ಕಠೋರತೆಯಿಂದ ದೂರ ತಳ್ಳದಿರು ಗೆಳತಿ ಎಲ್ಲರೂ […]
ಅಪ್ಪನ ಕೊನೇ ಪತ್ರ.!
ಕವಿತೆ ಅಪ್ಪನ ಕೊನೇ ಪತ್ರ.! ಅಲ್ಲಾಗಿರಿರಾಜ್ ಕನಕಗಿರಿ ಬರುವ ಹೊಸ್ತಿಲು ಹುಣ್ಣಿಮೆಗೆರಕ್ತ ಹೆಪ್ಪುಗಟ್ಟುವ ಚಳಿ ಗಾಳಿ. ಒಂದು ವೇಳೆ ನಾನು ಕೊರೆಯುವ ಚಳಿಗೆಬೀಸುವ ವಿಷ ಗಾಳಿಗೆ ದಿಲ್ಲಿ ಗಡಿಯಲ್ಲಿಹೆಣವಾದರೆ ಯಾರೂ ಹೆದರಬೇಡಿ. ನನ್ನ ಹೆಣಕ್ಕೆ ಗೋರಿ ಕಟ್ಟುವ ಬದಲುಕೊರೆಯುವ ಚಳಿಯಲ್ಲಿ ನನ್ನ ಹೆಣ ಸುಟ್ಟು ಮೈ ಬಿಸಿ ಮಾಡಿಕೊಳ್ಳಿ.ಮುಂದಿನ ದಿನಗಳ ಹೋರಾಟಕ್ಕೆ ಅಣಿಯಾಗಿ. ನನ್ಹೆಣ ಸುಟ್ಟ ಬೂದಿ ಮನೆಗೆ ಬಂದರೆ ನಿನ್ನವ್ವನ ಹಣೆಗೆ ಹಚ್ಚಿ.ಕಣ್ಣೀರು ಬಂದರೆ ಬೆಳೆಗೆ ಹರಿಸಿಬಿಡಿ.ನಾ ಇಲ್ಲವೆಂದು ಒಕ್ಕಲುತನ ಜೊತೆಗೆ ಹೋರಾಟಎಂದೂ ನಿಲ್ಲದಿರಲಿ ಮಗನೆ. […]
ಮಲೆನಾಡಿಗರ ತುಮುಲ
ಅನಿಸಿಕೆ ಮಲೆನಾಡಿಗರ ತುಮುಲ ಗಣೇಶಭಟ್ ಶಿರಸಿ ಪಶ್ಚಿಮ ಘಟ್ಟಗಳ ಹಾಗೂ ಅಲ್ಲಿನ ಜೀವವೈವಿದ್ಯ ರಕ್ಷಣೆಯ ಉದ್ದೇಶದಿಂದ ೨೦೧೧ರಲ್ಲಿ ಡಾ. ಮಾಧವ ಗಾಡ್ಗೀಲ್ ಸಮಿತಿ ನೀಡಿದ ವರದಿಯನ್ನು ತಿರಸ್ಕರಿಸಿದನಂತರ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವ ಸಮಿತಿ ರಚಿಸಲಾಗಿತ್ತು. ಪಶ್ಚಿಮ ಘಟ್ಟದಲ್ಲಿ ಮಾನವನ ಹಸ್ತಕ್ಷೇಪವನ್ನು ಸೀಮಿತಗೊಳಿಸಬೇಕೆಂದು ಸೂಚಿಸಿರುವ ಎರಡನೇ ವರದಿಯ ಅನುಷ್ಠಾನಕ್ಕೂ ಹಿಂಜರಿಯುತ್ತಿರುವ ಕರ್ನಾಟಕದ ಸರ್ಕಾರ ಹಸಿರು ನ್ಯಾಯಾಲಯದ ಮೆಟ್ತಲೇರುವ ಪ್ರಯತ್ನ ನಡೆಸಿದೆ. ಈ ಎರಡೂ ವರದಿಗಳು ಪರಿಸರ ಪೂರಕ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತವೆಯಾದರೂ, ಡಾ. ಮಾಧವ ಗಾಡ್ಗೀಳ್ ವರದಿ ಹೆಚ್ಚು ಜನಪರವಾಗಿದೆ. […]