ವಿಲಿಯಂ ಬ್ಲೇಕ್ ನ Holy Thursday
ಅನುವಾದ: ವಿಠ್ಠಲ ದಳವಾಯಿ
ಕಂಪಿಸುವ ದನಿಯು ಹಾಡೇ?
ಅದು ಸಂತಸದ ಪದವಾಗಿ ಬದಲಾದೀತೆ?
ಬಹುಪಾಲು ಮಕ್ಕಳು ಮೂಳೆ ಚಕ್ಕಳವಾದರೆ
ಇದು ಬಡವರ ಭೂಮಿಯೇ ಹೌದು!
ಅವರ ಮಗನ ಕಣ್ಣು ಎಂದೂ ಹೊಳೆಯುವದಿಲ್ಲ
ಬರದಿಂದ ಬಣ್ಣಗೆಟ್ಟು ಒಣಗಿಯೇ ಇವೆ ಹೊಲ
ಬದುಕು ಪೂರಾ ಕಲ್ಲು ಮುಳ್ಳಿನ ಹಾದಿ
ಎಂದಿಗೆ ಕೊನೆ ಮಾಗಿ ಚಳಿಯ ತೇದಿ?
ಒಂದು ಸಿರಿವಂತ, ಫಲವತ್ತಾದ ಭೂಮಿಯಲ್ಲಿ
ಅತ್ತು ಅತ್ತು ಸತ್ತು ಹೋಗುವ ಕಂದಮ್ಮಗಳಿಗೆ
ತುತ್ತು ಉಣಿಸಲೂ ಕೈಯೇಳದಿದ್ದರೆ
ಈ ನೆಲ ಭವ್ಯ, ಪವಿತ್ರ ಎನ್ನಬಹುದೇ?
ಎಲ್ಲೆಡೆಗೂ ಸೂರ್ಯನ ಬೆಳಗು ಬಂದರೆ
ಎಲ್ಲೆಡೆಗೂ ಭೋರ್ಗರೆದು ಮಳೆ ಸುರಿದರೆ
ಎಂದೂ ಹಸಿವಿನಿಂದ ದಿಗಿಲಾಗೋದಿಲ್ಲ ಪರಿವಾರ
ಆಗ ಕರೆಯಬಹುದು ಅದು ಪವಿತ್ರ ಗುರುವಾರ
****************************************