ಟಂಕಾಗಳು
ಕೆ. ಸುನಂದಾ

ಹಸಿದ ಹೊಟ್ಟೆ
ಅರಸು ವೇಷ ; ಖಾಲಿ
ಊಟದ ತಟ್ಟೆ
ಜೀವನ ಸಾಗಿಸಲು
ಬೀದಿ ನಾಟಕದಾಟ
**
ನಡೆ ನುಡಿಯು
ಒಂದಾಗಲು ; ಜೀವನ
ಸಾರ್ಥಕವಾಯ್ತು
ಕಪಟ ಮೋಸಗಳು
ಅಧಃಪತನ ವಾಯ್ತು
**
ನಾನೇ ಎಂಬುದು
ಅಹಂಕಾರ ; ನನ್ನದೇ
ಎಂದರೆ ನಾಶ
ಜೀವನ ನಡೆಸಲು
ಅರಿತು ಸಾಗಬೇಕು
**
ಜೀವನದಲ್ಲಿ
ಸತ್ಯಕ್ಕೆ ; ಸಾವೇ ಇಲ್ಲ
ಅಸತ್ಯ ಬೇಡ
ಸಂಸ್ಕಾರ ವಂತರಿಗೆ
ಜಯ ಕಟ್ಟಿಟ್ಟ ಬುತ್ತಿ
**
ಸಾವಿರ ಜನ
ಸೇರಿ ಆಡುವ ಮಾತು
ಲೆಕ್ಕಕ್ಕೆ ಅಲ್ಲ
ಆತ್ಮನ ನಿರ್ಧಾರವು
ಒಳಿತಿಗೆ ದಾರಿಯು
**
ಜೀವನ ಸಾರ
ಕೆಲಸ ಮಾಡಿ ತಿನ್ನು
ಅನ್ಯರನೆಂದೂ
ತಿರಸ್ಕರಿಸದಿರು
ಒಳಿತಿನ ಗುಟ್ಟಿದು
**
ಆಡದೇ ಮಾಡು
ಕೆಲಸ ಕೈ ಬಿಡದು
ಹಂಬಲವೇಕೆ
ಫಲ ಅವನ ಇಚ್ಛೆ
ನಿಷ್ಕಾಮ ಕರ್ಮ ಸಾಕು
*
ಸತ್ಯದ ನುಡಿ
ಕೊನೆವರೆಗೆ ನಡಿ
ಅಸತ್ಯ ಬೇಡ
ದೇವನೇ ಬರುವನು
ಭಕ್ತನಿದ್ದೆಡೆ ಓಡಿ
**************************************