ಅಪ್ಪನ ಕೊನೇ ಪತ್ರ.!

ಕವಿತೆ

ಅಪ್ಪನ ಕೊನೇ ಪತ್ರ.!

ಅಲ್ಲಾಗಿರಿರಾಜ್ ಕನಕಗಿರಿ

 A group of protesters shout slogans as they arrive to join farmers demanding to abolish new farming laws they say will result in exploitation by corporations, at the Delhi-Haryana state border. (Image: AP)

ಬರುವ ಹೊಸ್ತಿಲು ಹುಣ್ಣಿಮೆಗೆ
ರಕ್ತ ಹೆಪ್ಪುಗಟ್ಟುವ ಚಳಿ ಗಾಳಿ.

ಒಂದು ವೇಳೆ ನಾನು ಕೊರೆಯುವ ಚಳಿಗೆ
ಬೀಸುವ ವಿಷ ಗಾಳಿಗೆ ದಿಲ್ಲಿ ಗಡಿಯಲ್ಲಿ
ಹೆಣವಾದರೆ ಯಾರೂ ಹೆದರಬೇಡಿ.

ನನ್ನ ಹೆಣಕ್ಕೆ ಗೋರಿ ಕಟ್ಟುವ ಬದಲು
ಕೊರೆಯುವ ಚಳಿಯಲ್ಲಿ ನನ್ನ ಹೆಣ ಸುಟ್ಟು ಮೈ ಬಿಸಿ ಮಾಡಿಕೊಳ್ಳಿ.
ಮುಂದಿನ ದಿನಗಳ ಹೋರಾಟಕ್ಕೆ ಅಣಿಯಾಗಿ.

ನನ್ಹೆಣ ಸುಟ್ಟ ಬೂದಿ ಮನೆಗೆ ಬಂದರೆ ನಿನ್ನವ್ವನ ಹಣೆಗೆ ಹಚ್ಚಿ.
ಕಣ್ಣೀರು ಬಂದರೆ ಬೆಳೆಗೆ ಹರಿಸಿಬಿಡಿ.
ನಾ ಇಲ್ಲವೆಂದು ಒಕ್ಕಲುತನ ಜೊತೆಗೆ ಹೋರಾಟ
ಎಂದೂ ನಿಲ್ಲದಿರಲಿ ಮಗನೆ.

ಇದು ನಿನಗೆ ಕೊನೇ ಪತ್ರ….

ಇಂತಿ ನಿನ್ನ ಅಪ್ಪ “ಅನ್ನದಾತ”.

************************************

One thought on “ಅಪ್ಪನ ಕೊನೇ ಪತ್ರ.!

Leave a Reply

Back To Top