ಶಾಯರಿ
ಭಾರತಿ ರವೀಂದ್ರ
ಕವಿತೆ ನೀನೇಕೆ
ನಲ್ಲನ ನಯನದಿ ಕುಳಿತೆ,
ದಿಟ್ಟಿಸಿ ನೋಡಲಾರೆ
ದೃಷ್ಟಿ ತಾಕಿತು ಪಾಪ.
ಅಂಗಳದಿ ಬಿಡಿಸಿದ
ಬಣ್ಣ ಬಣ್ಣದ ಚಿತ್ತಾರದಲಿ ನಿನ್ನನ್ನೇ
ಹುಡುಕುತಿದ್ದೆ
ಆದ್ರೆ ಬೆರಳಿಗಂಟಿದ ರಂಗ ವಲ್ಲಿ ಯಲ್ಲಿ ನಿನಿದ್ದೆ
ಅಷ್ಟ್ಯಾಕೆ ಕನಸು ಕಾಣ್ತಿ ಹುಚ್ಚ
ಖೋಡಿ ಮನಸಾ
ಅವ್ ನೋಡಿ ನಕ್ಕಿದ್ದು
ನಿನಗಲ್ಲ. ನಿನ್ನ ಪಕ್ಕ ಇರೋ ಕೆಂಪನೆ ನಿನ್ನ ಗೆಳತಿನ್ನ ನೋಡಿ.
ಪಿರೂತಿ ಅನ್ನೋದು
ಎದ್ಯಾಗ್ ನೆಟ್ಟಿದ ಚೂರಿ
ಹಾಂಗ
ಹಂಗ್ ಬಿಟ್ಟರ ಚುಚ್ಚುತಾನ ಇರತೈತಿ
ತೆಗಿದ್ರ. ಮನುಷ್ಯಾ ಸತ್ತ
ಹೋಗ್ತಾನ