ಕಾದಿಹುದು ತನು ಮನ ಶುಭಲಕ್ಷ್ಮಿ ಆರ್ ನಾಯಕ ಇಳಿ ಸಂಜೆಯು ಜಾರುತಿಹುದುತಂಗಾಳಿಯು ಸ್ಪರ್ಶಿಸಿಹುದುಪ್ರೇಮ ರಾಗ ಹಾಡುತಿಹುದುಒಲವ ವೀಣೆ ನುಡಿಯುತಿಹುದು//೧// ನಮ್ಮಿಬ್ಬರ ಮಿಲನಕೆಕಡಲಲೆಗಳ ಚುಂಬನಚಂದ್ರನಿರದ ಬಾನಿನಲ್ಲಿನಲ್ಲೆ ನೀನೆ ಚಂದ್ರಮ//೨// ಜೀವನದ ಕನಸಹೊತ್ತುತೇಲುತಿಹುದು ನಮ್ಮ ಮನಒಲುಮೆಯೆಂಬ ಸಾಗರದಲಿಪ್ರೀತಿಯ ಅಲೆ ಅಲೆಗಳಾಗಿ//೩// ಮರಳ ರಾಶಿಯ ತೀರದಲಿಮಿಣುಕು ದೀಪದ ಬೆಳಕಿನಲ್ಲಿಬಾನು ಭುವಿಯ ಸಂಗಮದಲಿನಮ್ಮೀರ್ವರ ಸರಸ ಸಲ್ಲಾಪಕೆ//೪// ಪ್ರಕೃತಿಯ ಸೌಂದರ್ಯದಲಿನವ ಭಾವದ ರೋಮಾಂಚನಕೆಒಲವಿನಾ ಮಿಲನಕೆಕಾದಿಹುದು ತನುಮನ//೫// ******************************************
ನಿನ್ನ ಆಶ್ರಯ ಅನ್ನಪೂರ್ಣ.ಡೇರೇದ. ಕುಸುಮ ರಾಶಿಯಸುಗಂಧ ನೀನುಆ ಬಾನ ತಾರೆಯಮಿಂಚು ನೀನುನಿನ್ನ ಪ್ರೀತಿಗಾಸರೆನಾನು.ಮೌನ ವೀಣೆಮೀಟುತ ಒ!ಲವರಾಗ ಹಾಡುತಕಣ್ಣಂಚ ಕರೆಯಲಿನನಗಾಸರೆ ನೀಡಿದೆನೀನುಕಡಲ ಚಿಪ್ಪೊಂದುಮುತ್ತಿಗಾಸರೆಯಾದರೆನನ್ನ ˌನಿನ್ನ ಹೃದಯಕಲರವಕೆ ಒಲುಮೆಯಾಸರೆ.
ಪ್ರೀತಿಯ ತಿರುಳು ರೇಶ್ಮಾಗುಳೇದಗುಡ್ಡಾಕರ್ ಕರುಣೆಯ ಒಳಗಿನ ಮಾತಲ್ಲಈ ಒಲವು ಎದೆಯೊಳಗಿನಪದಮಿಕ್ಕಿದ ಚರಿತೆ …. ನಿನ್ನ ಕಂಗಳ ಅಂಗಳಕೆಹರಿಯುವದು ನೋಟವಾಗಿಭಾವನೆಗಳಿಗೆ ಹೂ ದೋಟವಾಗಿಅಂತರಂಗದೊಗೆ ಬೆಳದಿಂಗಳಾಗಿತನ್ಮಯಗೊಳಿಸುವದು ತನುವಸವಿ ನೆನಪುಗಳಲಿ…… ಸ್ವಾರ್ಥ ದ ರೂಪ ವಲ್ಲಈ ಒಲವು ಮಮತೆಯ ಆಗರ , ಬತ್ತಿದಬದುಕಿಗೆ ಜೀವನ್ಮುಖಿ ಸುಧೆಆಮಿಷಗಳು ,ಆಡಬಂಡರಎಂದೂ ಪ್ರೀತಿಯ ಹಿಮ್ಮಡಿ ಮಾಡುವದಿಲ್ಲನಿರ್ವಾಜ್ಯ ಅನುರಾಗ ಈ ಬದುಕಿಗೆನಂದಾದೀಪ …… ಮುಖವಾಡಗಳ ಹೊತ್ತುನಿಷ್ಕಲ್ಮಷ ಪ್ರೀತಿಯ ಅರಸಿದರೆಫಲವೇನು ಓ ಹೃದಯಮೊದಲು ನಿನ್ನ ನೀನುಅರಿ ನಂತರ ಜಗವ ನೋಡು ಬಾ ….ಕಾಣುವದು ಒಲವ ಸುಧೆಯುಧುಮ್ಮಿಕ್ಕುವ ಜಲಪಾತದಂತೆತನ್ನವರ ಸೇರುವದುತಣ್ಣಗೆ […]
ಓ ನನ್ನ ಪ್ರೇಮದೂತರೆ… ಕವಿತಾ ಹೆಗಡೆ ತಾರೆಗಳ ನಡುವೆ ಚೆಲ್ಲಾಡುವ ಚಂದ್ರಮನೆನನ್ನ ಕರಗಳ ಕೋಮಲ ಸ್ಪರ್ಶ ಸ್ವೀಕರಿಸುನನ್ನ ವಿರಹದುರಿಯಲಿ ದಹಿಸಿ ಬೆಂದಿರುವನನ್ನ ನಲ್ಲನನ್ನುಪಚರಿಸಿ ತಂಪಾಗಿಸು ಬೀಸಿ ಓಡುವ ಗಾಳಿ ಮರೆಯಾಗದಿರು ಹಾಗೆನನ್ನ ಗಂಧವ ಹೀರಿ ಅವನೆಡೆಗೆ ತೆರಳುನನ್ನ ಪರಿಮಳವವನ ನಾಸಿಕದಿ ತುಂಬಿನನ್ನುಸಿರು ಅವನುಸಿರು ಒಂದಾಗಿಸು ಸುಡುವ ಸೂರ್ಯನೆ ಸಾಕಿನ್ನು ಸುಮ್ಮನಿರುನನ್ನ ಕಂಗಳ ಕಾಂತಿ ಕೊಂಡು ಹೋಗುನನ್ನ ಚಿತ್ರವ ಅವನ ಕಣ್ಣಲ್ಲಿ ಬಿತ್ತಿನನ್ನೊಲವ ನೋಟವನೆಲ್ಲೆಡೆ ಪಸರಿಸು ಮತ್ತೆ ಮಳೆಗರೆಯುವ ಮರುಳು ಮೋಡವೆನನ್ನ ಕಣ್ಣೀರ ಕೋಡಿಯನೆ ಮೊಗೆದು ಕೊಡುವೆನನ್ನ ನೆನೆದು […]
ಒಲವಿನ ಬೆಳಕ ಹುಳು… ಡಾ. ಅರಕಲಗೂಡು ನೀಲಕಂಠ ಮೂರ್ತಿ ೧)ಒಂದೊಮ್ಮೆ ಎನ್ನೆದೆಯೊಲುಮೆಯಸೀಮೆಯ ಗಣಿಗಳಿಗೆಹೊಳೆವ ಬೆಳ್ಳಿ ಬಂಗಾರದ ಬೆರಗುಹರಿಸಿದ ಮಿಂಚು ಹುಳುವೆಯಾವ ದಿಕ್ಕಿನ ಕಡೆ ಹಾರಿ ಹೋದೆಅಂದಿನಿಂದ ಇಂದಿನವರೆಗೂಮತ್ತೊಮ್ಮೆ ಕಾಣದ ಹಾಗೆ…ಆ ಪ್ರೇಮದ ಗಣಿಯಲ್ಲಿಈಗ ನಿತ್ಯ ನಿರಂತರ ಕತ್ತಲೆ! ಅಂದು ಅದೆಷ್ಟೆಷ್ಟು ಆಳದಲ್ಲಿಎಂಥೆಂಥಾ ಅಂಕು ಡೊಂಕಲ್ಲಿಆ ಗಣಿ ಅಗೆದರೂ ಬಗೆದರೂಕಣ್ಣು ಕೋರೈಸಿದ್ದ ಪ್ರಖರ ಬೆಳಕುಕಾಂತ ಪ್ರೇಮ ದಿಕ್ಕು ದಿಕ್ಕುಗಳಲು!ಜಗವೆಲ್ಲ ಹೃದಯಂಗಮದಂಗಳ…ಬೆಳ್ಳಿ ಬಂಗಾರಗಳೆ ನಾಚಿ ತಲೆತಗ್ಗಿಸಿನಿಂತ ಹಾಗೆ ಮೂಕಮೌನದಲಿ!ಹಗಲು ಕಂಡ ಒಲವ ಹೊನಲುಚಿಮ್ಮುವ ಕಣ್ಣುಗಳಲಿ ಮತ್ತೆ ಕೊನರಿರಾತ್ರಿ ಕನಸಿನಲಿ ಶಶಿರಥದೈಸಿರಿ! […]
ನತದೃಷ್ಟರಿವರು
ದೀಪಾವಳಿಯ ಬೆಳಕು ಕಾಣದವರು
ದಸರಾ ಬನ್ನಿ ಮುಡಿಯದವರು
ಯುಗಾದಿಯ ಹರುಷ ಪಡೆಯದವರು
ಗೌರಿಯ ಆರತಿ ಇಲ್ಲದ ಸಹೋದರರ ರಾಖಿಯ ಪ್ರೀತಿ ಸಿಗದವರು
ಅನುವಾದಿತ ಕವಿತೆ
ಅನವರತ ಕರುಬಿದ್ದಕ್ಕೋ
ಹಲುಬಿದ್ದಕ್ಕೋ
ಅಚಾನಕ್ ಮಹಾನಗರದ ನಡುವಿಗೆ
ಪಾದವಿಡುವಾಗ ಮೈಯೆಲ್ಲ ಪುಳಕ.
ಸ್ವರ್ಗದ ಪಕ್ಷಿ ನವಿಲು ಈ ದೇಶದಲ್ಲಿ ಅಡ್ಡಾಡುತ್ತಿದೆ, ಈ ನೆಲದಲ್ಲಿ ದೊಡ್ಡ ದೊಡ್ಡ ನದಿಗಳು ಹರಿಯುತ್ತಿದೆ, ನಳನಳಿಸುವ ಹಸಿರಿನ ತೋಟಗಳು, ಉದ್ಯಾನಗಳು ಇಲ್ಲಿ ವಿಪುಲವಾಗಿವೆ, ಸ್ವರ್ಗದಲ್ಲಿರುವ ಬಂಗಾರ ವರ್ಣದ ಬಾಳೆಹಣ್ಣು ಇಲ್ಲಿ ಹೇರಳವಾಗಿದೆ ಎಂದೆಲ್ಲ ವಿವರಿಸಿದ. ಇವನ ಫಾರಸಿ ದ್ವಿಪದಿಯೊಂದು ಹೀಗಿದೆ.
ತಾಯ್ತನ ಎನ್ನುವದು ಬರಿದೆ ಜೈವಿಕ ತಾಯ್ತನಕ್ಕೆ ಸಂಬಂಧ ಪಟ್ಟುದಲ್ಲ. ಅದೊಂದು ಭಾವ. ಆ ಭಾವವಿದ್ದವರೆಲ್ಲಾ ತಾಯಂದಿರಾಗಬಹುದು ಎನ್ಬುವುದು ಸಾವಿತ್ರಿಯವರಿಂದ ಸಾಬೀತಾಗುತ್ತದೆ. ಆಕೆ ತಮ್ಮದೇ ಒಂದು ಮಗುವನ್ನು ಹೆರಲಿಲ್ಲ. ಆದರೆ ದೀನ ದಲಿತರ ಪಾಲಿಗೆ ನಿಜವಾದ ಮಾತೃಪೂರ್ಣ ತಾಯಿಯೇ ಆದರು.
ದೂರ ನಿಂತೇ ಹರಿವ ತೊರೆ ನೂತನ ದೋಶೆಟ್ಟಿ ನೆನಪು ಮೂಡಿಸಿತು ತುಟಿಯಂಚಲಿ ಹೂನಗೆಸೂಸಿ ಕಣ್ಣಂಚಲಿ ಜಿನುಗು ಹನಿಹೊರ ನಡೆಯಿ ನೀವುತು ಮೆಲ್ಲುಸಿರು ತುದಿ ನಾಲಿಗೆಯ ಮೇಲೆ ನಲಿವು ಹೆಸರುಕಣ್ಣ ಪರದೆಯಲ್ಲಡಗಿಹ ಮಂದ ಹಾಸದೂರ ನಿಂತೇ ಹರಿವ ತೊರೆ ಬೇಕೆನ್ನಿಸುವುದಿದೆ ಒಂದು ಹಿಡಿತಅದುಮಿದ ಕೈ ಇಟ್ಟ ಭಾಷೆಮುಚ್ಚಿದೆವೆಗಳ ಮುಂದೆ ಮೂರ್ತ ರೂಪ ಕಣ್ಣ ಹೊಳಪಲಿ ಕಂಡ ಹೊಸ ಅರ್ಥಅಂಗೈಯಲ್ಲಿ ಬಚ್ಚಿಕೊಂಡ ಡವಗುಡುವೆದೆಗೆಶೃತಿ ಸೇರಿದೆ ಭಾಸ ಹೊಸ ನಾಳೆಗಳ ಬಾನಲ್ಲಿ ಬಿಳಿನೊರೆಮಿಂಚುನಗೆಯ ನೆನಪಲ್ಲಿಬಿರಿವ ಹೂಗಳುಎದೆಗೂಡ ಭಾರದಲ್ಲೂ ನಳನಳಿಸುವವು ಹುಟ್ಟಿನ ತರ್ಕದಲ್ಲಿ […]