ಅನುವಾದ ಸಂಗಾತಿ
ಸ್ವಾಮಿ ಭಕ್ತಿ ಮೂಲ:ವಿಲಿಯಂ ವರ್ಡ್ ವರ್ತ್ ಕನ್ನಡಕ್ಕೆ: ವಿ.ಗಣೇಶ್ ಬೊಗಳುವ ಸಪ್ಪಳವು ಕುರುಬನಿಗೆ ಕೇಳಿಸಿತು ನರಿಯದೋ ನಾಯಿಯದೋ ಕೂಗಿರಬೇಕೆಂದು ಅರೆ ಕ್ಷಣ ನಿಂತು ಹುಡುಕಾಡಿದನು ದಶದಿಕ್ಕುಗಳಲಿ. ಹರಿದು ಹಾಸಿದ್ದ ಕಲ್ಲುಬಂಡೆಗಳ sಸುತ್ತಲೂ ಹುಡುಕಾಡಿದಾಗ ತುದಿಯ ಗಿಡಗಂಟೆಗಳ ಮಡಿಲಲ್ಲಿ ಅಲುಗಾಡುತ್ತಿರುವ ಹಸಿರು ಪೆÇದೆಯೊಂದು ಕಾಣಿಸಿತು. ಅದರ ಅಡಿಯಲಿ ಕಣ್ಣೀರಿಡುತಿರುವ ಶುನಕವೊಂದು ಪೊದೆಯ ಕಡೆಗೇ ವೀಕ್ಷಿಸುತ ಅಳುವುದ ಕಾಣಿಸಿತು. ಅತಿ ಸೂಕ್ಷ್ಮಮತಿಯಾದ ಆ ಶುನಕವ ನೋಡಿದರೆ ಕಾಡಿನಲಿ ಹುಟ್ಟಿ ಬೆಳೆದ ಶುನಕವಲ್ಲವೆನಿಸಿತು. ಅದರ ಅಳುವಿನಲೇನೋ ಘೋರ ದುಃಖವಿಹುದೆಂದು ಭಾವಿಸಿದ […]
ಉದಯಿಸುತ್ತಿರುವ ಸೂರ್ಯನೊಂದಿಗೆ ಹೆಜ್ಜೆಯಿಡುವ ತವಕದಲ್ಲಿ. ತೇರೂವೋ ಮೂಲ ಗೌರಿ ದೇಶಪಾಂಡೆ ಕನ್ನಡಕ್ಕೆ- ಚಂದ್ರಕಾಂತ ಪೋಲಳೆ ಬೆಲೆ-೮೦ ನನಗೆ ಬೇರೆ ಭಾಷೆಗಳಿಂದ ಅನುವಾದಗೊಂಡ ಕಾದಂಬರಿಗಳ ಹುಚ್ಚು ಹಿಡಿಸಿದ್ದು ಸೃಷ್ಟಿ ನಾಗೇಶರವರು. ಅವರ ಸೃಷ್ಟಿ ಪ್ರಕಾಶನ ಎಂದರೆ ಅನುವಾದಗಳಿಗಾಗಿಯೇ ಮೀಸಲಾಗಿರುವ ಪ್ರಕಾಶನ. ಜಗತ್ತಿನ ಅದ್ಭುತ ಕಾದಂಬರಿಗಳ ಅನುವಾದಗಳನ್ನು ನಾನು ಓದಿದ್ದು ಸೃಷ್ಟಿ ಪ್ರಕಾಶನದ ಪುಸ್ತಕಗಳಿಂದಾಗಿಯೇ. ತಮ್ಮ ಪ್ರಕಾಶನದ ಪುಸ್ತಕಗಳನ್ನು ತಲುಪಿಸುವ ಸೃಷ್ಟಿ ನಾಗೇಶ ಇದನ್ನು ಮೊದಲು ಓದಿ, ಈ ಪುಸ್ತಕ ಅದ್ಭುತವಾಗಿದೆ ಓದಿ ಎಂದೆಲ್ಲ ಸಲಹೆ ಮಾಡಿಯೇ ಕಳುಹಿಸುತ್ತಾರೆ. […]
ಗುಂಡಪ್ಪೆಯ ಮಳೆಗಾಲ ಈ ಮಾವಿನಹಣ್ಣಿಗೂ ಮಳೆಗಾಲಕ್ಕೂ ಒಂಥರಾ ಅವಿನಾಭಾವ ಎನ್ನುವಂಥ ಸಂಬಂಧ. ಮೊದಲಮಳೆಯೆನ್ನುವ ಸಂಭ್ರಮ ನಮ್ಮೊಳಗೊಂದು ಹೊಸ ಚೈತನ್ಯ ತುಂಬುವ ಸಮಯದಲ್ಲಿ, ಸಕಲ ಸೊಬಗಿನ ದೇವಕನ್ಯೆಯೊಬ್ಬಳು ಭುವಿಗಿಳಿದಂತೆ ಮಾವಿನಹಣ್ಣೊಂದು ನೆಲಕ್ಕುರುಳುತ್ತದೆ. ಹೀಗೆ ಕಳಚಿಬಿದ್ದ ಮಾವಿನಹಣ್ಣಿನ ಮೇಲೆ ಮಳೆಹನಿಗಳೆಲ್ಲ ಮುತ್ತಿನಂತೆ ಹೊಳೆದು, ಗೌಜು-ಗದ್ದಲವಿಲ್ಲದ ಹೊಸ ಲೋಕವೊಂದು ಸೃಷ್ಟಿಯಾಗುತ್ತದೆ. ಹೀಗೆ ಗದ್ದೆಬಯಲಿನಲ್ಲೋ, ಬೆಟ್ಟದ ತುದಿಯಲ್ಲೋ ನಿರಾತಂಕವಾಗಿ ಹುಟ್ಟಿಕೊಳ್ಳುವ ಈ ಸೊಬಗಿನ ಪ್ರಪಂಚಕ್ಕೆ ಮಳೆಯೊಂದು ಜೀವ ತುಂಬುವ ಪರಿ ಅನನ್ಯ. ಮಳೆ ಆಗೊಮ್ಮೆ ಈಗೊಮ್ಮೆ ಅವಾಂತರಗಳನ್ನು ಸೃಷ್ಟಿಸಿದರೂ ಅದೊಂದು ಮಾಯೆಯಾಗಿ ಮೈ-ಮನಗಳನ್ನು […]
ಪುಸ್ತಕ ಸಂಗಾತಿ
ನಾನು ಮತ್ತು ಆಕಾಶ ಡಾ.ಧನಂಜಯ ಕುಂಬ್ಳೆ ಕವಿಮಿತ್ರ ಡಾ.ಧನಂಜಯ ಕುಂಬ್ಳೆಯವರ ‘ನಾನು ಮತ್ತು ಆಕಾಶ’ ವಿಮರ್ಶಾ ಸಂಕಲನದ ಬರಹಗಳನ್ನು ಮರುಓದುವ ಅವಕಾಶ ಲಭಿಸಿದೆ. ಹದಿನಾರು ವರ್ಷಗಳ ಹಿಂದೆ ಪುಟ ತಿರುವಿ ದೃಷ್ಟಿ ಹಾಯಿಸಿದ್ದೆ ಅಷ್ಟೆ. ಈಗ ಅನುಭವಿಸಿದ ಸಾರ್ಥಕ ಭಾವ. ೨೦೦೩ರಲ್ಲಿ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪುಸ್ತಕ ಪ್ರಕಾಶನ ಧನಸಹಾಯ ಯೋಜನೆಯಲ್ಲಿ ಆಯ್ಕೆಯಾದ ಈ ಕೃತಿಯನ್ನು ಪುತ್ತೂರಿನ ಅನನ್ಯ ಪ್ರಕಾಶನ ಹೊರ ತಂದಿದೆ. ಧನಂಜಯ ಅವರ ಭಾವಗಳು, ಸಂವೇದನೆಗಳು, […]
ಕಾವ್ಯಯಾನ
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ನೆನಪು ಮರೆಯಲು ಮದಿರೆಯ ಸಂಗ ಮಾಡಿದ್ದೆ ಸಖಿವ್ಯಸನ ತೊರೆಯಲು ಸುರೆಯ ಹಂಗ ಬಿಡದಾಗಿದೆ ಸಖಿ ಮಧುವಿನ ದಾಸನಾಗಿ ದಾಸ್ಯದಿ ಬದುಕ ನೂಕುತಿರುವೆತುಟಿಯಂಚಿಗಿಟ್ಟ ಬಟ್ಟಲಿನಲ್ಲಿ ನೀನು ಕಾಣುತಿರುವೆ ಮರೆಯದಾಗಿದೆ ಸಖಿ ನೀರವ ಮೌನದ ಕತ್ತಲೆಯಲಿ ಸಿಗಬಹದೆಂದು ಹುಡುಕಿರುವೆಶರಾಬಿನ ಸಿಸೆಯೊಳಗೂ ನಿನ್ನದೆ ಬಿಂಬವ ಕಾಣುತಿದೆ ಸಖಿ ಮರೆಯಲಾಗದ ಹವ್ಯಾಸ ನನ್ನನು ಬೆಂಬಿಡದೆ ಕಾಡಿದೆಅವಳನು ಮರೆಯುವ ಮಾತಾಡಿಮಿಣುಕು ದೀಪದ ಮುಂದೆ ಕುಳಿತಿದ್ದೆ ಸಖಿ ಸುರಪಾನದ ಸುಖದಲಿ ತೇಲಾಡಿ ನೊಂದ ಮರುಳನು ಮರುಗುತಿರುವನುಆದದ್ದೇಲ್ಲ ಮರೆತು ಹೊಸಬಾಳ್ವೆಗೆ ಹೊಂದಿ […]
ಕಥಾಯಾನ
ಮರಳಿನ ಕಥೆ ರಮೇಶ್ ನೆಲ್ಲಿಸರ ತುಂಗಾನದಿಯ ನೀರನ್ನು ಕುಡಿದೊ ಅಥವಾ ಬೆಳೆಗಳಿಗೆ ಹಾಯಿಸಿ ಬದುಕು ಕಟ್ಟಿಕೊಂಡವರು ಹಲವರಾದರೆ ತುಂಗೆಯ ಒಡಲ ಬಗೆದು ಮರಳು ತೆಗೆಯುವುದರ ಮೂಲಕ ಸಿರಿತನದ ಸುಪ್ಪತ್ತಿಗೆಯನ್ನು ಅನುಭವಿಸುತ್ತಿರುವವರು ಕೆಲವೇ ಕೆಲವರು, ರಾಜಕೀಯದ ವಾಸನೆ ತುಂಗೆಯ ಎಡಬಲದ ಮರಳು ಕ್ವಾರಿಗಳ ಪ್ರತಿ ಮರಳಿನ ಕಣದಲ್ಲಿ ಹಿಂದೆಯೂ ಇತ್ತು ಈಗಲೂ ಇದೆ. ಅಂದ ಹಾಗೆ ನಾನು ಹೇಳ ಹೊರಟಿದ್ದು ಈ ಮರಳು ಮಾಫಿಯಾದ ಕುರಿತು ಅಲ್ಲ!, ಈ ಮರಳು ದಂಧೆಗೆ ಅಂಟಿಕೊಂಡಿರುವ ಕೆಲಸಗಾರರ ಕುರಿತು, ಆಗ 2002-03 […]
ಕಾವ್ಯಯಾನ
ಜಕ್ಕವಕ್ಕಿಗಳು ಕಮಲಾ ಹೆಮ್ಮಿಗೆ ೧. ನೆನಪಿದೆಯೆ ನಿಮಗೆ ಕಣವಿಯವರೆ ಜಯನಗರದ ಹಳಿ ದಾಟಿದರೆ ಹಳದೀ ಹೂವು ಚೆಲ್ಲಿದ ರಸ್ತೆ ‘ ಚೆಂಬೆಳಕು’! ಹಕ್ಕಿ ಗೂಡಂಥ ನಿಮ್ಮ ಮನೆ ಆಚೀಚೆ ಕೂತ ನೀವುಗಳು,ನಡುವೆ ಬೂದಿ ಮುಚ್ಚಿದ ಕೆಂಡದಂಥ ನಾನು….ಮಧ್ಯೆ ವ್ಯಸ್ತ,ಮೂಸಿನೋಡುವ ನಿಮ್ಮ ‘ಗೂಫಿ’ನಾಯಿ!………. ಗುಟುಕರಿಸುತ್ತ ಚಹಾ,ಮಾತು,ಬದುಕಿನ ಪಾಡು………………………… ಜsರ್ ಮಳೆಯಿದ್ದಲ್ಲಿ, ದಾಟಿಸುತ್ತಿದ್ದಿರಿ ಬ್ರಿಡ್ಜು,ಛತ್ರಿ ಹಿಡಿದು….. ೨. ನಿಮ್ಮ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲೊಮ್ಮೆ ಓದಬೇಕಿತ್ತು ನಾನೂ,ಒಂದು ಕವಿತೆ ರೈಲಲ್ಲಿ ಒಂದೇ ಬೋಗಿ….ಧಡಖ್ […]
ಕಾವ್ಯಯಾನ
ನಿನ್ನದೇ ಜಪದಲ್ಲಿ ವೀಣಾ ಪಿ. ಏಕಪತ್ನಿ ರಾಮನಿಗೆ ವನ-ವೈಭೋಗಗಳಲಿಅನ್ಯ ಸ್ತ್ರೀಯಿಲ್ಲ ಸತಿ ಸೀತೆ ಹೊರತು.. ಕೃಷ್ಣನನೆದೆಯಲ್ಲಿ ಅನುರಣಿತ ರಾಗದಲಿಅನ್ಯ ಪ್ರೇಮವದಿಲ್ಲಅನುರಾಗಿ ರಾಧೆ ಹೊರತು.. ಮೀರಾ-ಶಬರಿಯರಲ್ಲಿ ಅನ್ಯ ತುಡಿತವದಿಲ್ಲಕೃಷ್ಣ-ರಾಮರ ಪರಮ ಕಾಮ್ಯದ ಹೊರತು.. ಸ್ವರ-ಶೃತಿಯ ಬೆಸೆಯುವ ಸರಸತಿಯ ಮೀಟು ತಂತಿಅನ್ಯವಾದ್ಯವಲ್ಲವದು ವೀಣಾ.. ಹಂಗಿನರಮನೆ ತೊರೆದ ಪ್ರೇಮದೀ ಗುಡಿಯಲ್ಲಿಬೇರೆ ಮಾತುಗಳಿಲ್ಲ ನಿನ್ನ ಜಪದ ಹೊರತು.. *******
ಕವಿತೆ ಕಾರ್ನರ್
ತಬ್ಬಲಿ ಕವಿತೆ ಮಾತುಗಳ ಅಟ್ಟಹಾಸದೊಳಗೆ ಅಪಹಾಸ್ಯಕ್ಕೀಡಾದ ಮೌನ ಶಬ್ದಗಳ ಜಾತ್ರೆಯೊಳಗೆ ತೇರಿನ ಗಾಲಿಯಡಿ ಅಪ್ಪಚ್ಚಿಯಾಯಿತು. ಮುಳ್ಳುಗಳ ಕಾವಲಿನಲಿದ್ದ ಹೂಗಳು ನಗುವುದನ್ನೆ ಮರೆತುಬಿಟ್ಟವು ವಿರಹದಲಿ ಬಣ್ಣಗೆಟ್ಟ ಚಿಟ್ಟೆಗಳು ಹಸಿವಿನಲಿ ಕಂಗೆಟ್ಟವು. ನಿನ್ನೆ ಸಂಜೆಯ ಮುದಿಬಿಸಿಲಲಿ ಅಕಾಲ ಮಳೆಸುರಿಯುತು ವಿದಾಯದ ಹೊತ್ತಿನಲಿ ಬಿಕ್ಕಿದವಳ ನೋಡಿ ಒಂಟಿಹಕ್ಕಿ ಮಮ್ಮುಲ ಮರುಗಿತು. ಕವಿತೆಯೊಂದ ಕಟ್ಟುವ ನೆಪದಲಿ ಶಬ್ದಗಳ ಮಾರಣಹೋಮ ಕವಿಯ ಸಮಾದಿಯ ಮೇಲೆ ಅಪರಿಚಿತ ಓದುಗನ ಹೂಗುಚ್ಚ. ಎರಡು ಸಾಲಾದರು ಬರೆದು ಹೋಗು ಗೋಗರೆದ ಕವಿತೆಯೀಗ ತಬ್ಬಲಿ. ******** ಕು.ಸ.ಮಧುಸೂದನ
ಕಾವ್ಯಯಾನ
ಇನ್ನಷ್ಟು ಯೌವನ ಕೊಡು ಮಂಜುನಾಥ ನಾಯ್ಕ ಹಾಲುಮಾರುವ ಹುಡುಗ ಕಾಜುಗಣ್ಣಿನ ವಿನೋದನೊರೆ ಹಾಲಿನಂತವನು ಪೇಟೆಯ ತುಂಬಹಾಲು ಹಂಚುವ ಉಮೇದಿಕಾಜುಗಣ್ಣ ಬಿಂಬಗೊಳಗೆಉಫ್ ಉಫ್ ಎಂದು ರಸ್ತೆ ಉಬ್ಬಿನಲಿ ತುಳಿದಿದ್ದಕ್ಕೆ ಸೈಕಲ್ಲುಬಿದ್ದು ರಕ್ತಕಾರಿಕೊಂಡ ಹೆಬ್ಬಟ್ಟಿನ ಉರಿ ಬ್ರೇಕೊತ್ತಿದೆಸೈಕಲ್ಲಿನ ವೇಗಕ್ಕೆಅಪ್ಪನ ಕ್ಯಾನ್ಸರಿಗೆ, ಅಮ್ಮನ ಮಧುಮೇಹಕ್ಕೆಚಂದನದ ಕೊರಡುತೇಯುತ್ತಿದೆ ಬೀದಿಯಲಿಕಾಯುತ್ತಿದೆಹಾಲಿನ ಮನಸ್ಸೊಂದುಮಗನ ಬರುವಿಕೆಗೆಅಡುಗೆ ಮನೆಯಲಿ ಬೇನೆಯಲಿಬೇಯುವ ಹಂಚಿನ ರೊಟ್ಟಿ ಐನೋರ ತೋಟದ ಮರದ ತುದಿಗೇರಿ ಅಡಿಕೆಗೊನೆ,ಸಿಂಗಾರ,ಸಿಯಾಳಕಾಯಿ ಕೊಯ್ವ ಈರಜ್ಜಕಸರತ್ತುಗಯ್ಯುತ್ತಾಆಕಾಶ ಮುಟ್ಟುವಂತೆಮರದ ತುದಿಯಲಿಒಂದೊಂದೇ ಫಲಗಳಎಸೆಯುವ ಕೆಳಗೆನುಣ್ಣಗೆ ಜಾರುವ ಮರತಡವರಿಸುವುದು ಒಮ್ಮೊಮ್ಮೆ ಈರನ ಕಾಲುಕೆಳಗೆ ಭೂಮಿ ಬಾಯ್ತೆರೆದು […]