ಕನಸುಗಳ ದೊಂಬರಾಟ
ಕವಿತೆ ಕನಸುಗಳ ದೊಂಬರಾಟ ಸುಮನಸ್ವಿನಿ. ಎಂ ನೀ ಮರಳುವೆಯೆಂಬಪವಾಡವೊಂದು ಘಟಿಸಿಯೇತೀರುತ್ತದೆಂದು ನನ್ನ ನಂಬಿಸಲುಹರಸಾಹಸ ಪಡುವಕನಸುಗಳ ದೊಂಬರಾಟಕ್ಕೆನಕ್ಕುಬಿಡುತ್ತೇನೆ ಈಗೀಗ..ಹೊರಳಿ ನೋಡಿದರೂ ಸಹಕಾಣದಷ್ಟು ದೂರದಲ್ಲಿ ನೀನನ್ನಿರಿಸಿಬಿಟ್ಟಿರುವುದರಿಂದ! ದಿನಕ್ಕೆರಡು ಬಾರಿಯಾದರೂಕಣ್ತುಂಬಿ ತುಳುಕಿ ಉರುಳಿಹೋಗಲು ನಿನ್ನ ನೆನಪುಗಳುನನ್ನೊಂದಿಗೆ ಜಿದ್ದಿಗೆ ಬೀಳುತ್ತವೆ..ಎದೆಯೊಳಗೆ ಹನಿಯೊಡೆದುಹರಡಿಕೊಂಡಂತೆಲ್ಲಾ ಜಾಗಸಾಲದಾದಾಗ, ಪಾಪ!ಅಮಾಯಕ ನೆನಪುಗಳುತಾನೇ ಏನು ಮಾಡಿಯಾವು? ಏಳುಸಮುದ್ರಗಳಾಚೆಗಿನಏಳುಸುತ್ತಿನ ಏಕಾಂತ ಕೋಟೆಯತುತ್ತತುದಿಯ ಕೋಣೆಗೂ ನುಗ್ಗಿ‘ರಾಜ’ಕುಮಾರನೊಬ್ಬ ಬರುತ್ತಾನೆಂಬನಿರೀಕ್ಷೆಯ ಅದಮ್ಯ ನಂಬಿಕೆಗೆಬೆರಗಾಗುತ್ತೇನೆ ಬಹಳವೇ,ಮುಗಿದ ದಾರಿಯ ಕಡೆಯಲ್ಲೊಂದುಹೊಸ ತಿರುವು ಸೃಷ್ಟಿಯಾಗುವಭ್ರಮೆಯ ‘ಬಗೆ’ಗೆ ಸೋಜಿಗಪಡುತ್ತಾ! *************************************
ಹಾಯ್ಕುಗಳು
ಹಾಯ್ಕುಗಳು ವಿ.ಹರಿನಾಥ ಬಾಬು ಒಲೆಯ ಮುಂದೆಕರುಳ ಸುಟ್ಟ ಅಮ್ಮತಾಯ ಮಮತೆ* ಕುದಿ ಎಸರುತಾಯಿಯ ಎದೆಹಾಲುಕಟ್ಟಿದ ಬಾಯಿ* ಅಳುವ ಮಗುನಿಷ್ಕರುಣಿ ಜಗತ್ತುತಬ್ಬಲಿ ತಾಯಿ* ಕರುಳ ಕುಡಿಭಯ ಭೀತಗೊಂಡಿದೆಕತ್ತಲ ರಾಜ್ಯ* ರಸ್ತೆಯ ಮೇಲೆಎಳೆದು ನಿಂತ ತೇರುಜೀವನ ಮುಕ್ತಿ* ಕಡಲ ನೀರುಸವಿಯಲೊಲ್ಲೆ ಉಪ್ಪುಸಪ್ಪೆ ಬದುಕು* ಓಡಿದ ನದಿಸೇರಿತು ಕಡಲನುಬದುಕು ಅಂತ್ಯ* ಮೇಲೆ ಚಂದಿರಈಕೆ ಬೆಳದಿಂಗಳುಬಾಳು ಹುಣ್ಣಿಮೆ* ಬೀಸುವ ಗಾಳಿಉದುರಿದವು ಎಲೆಅಪ್ಪಿತು ಮುಪ್ಪು* ಗುಡಿಯ ಮುಂದೆಭಿಕ್ಷುಕರದೇ ಸಾಲುಭಕ್ತಿ ಕುರುಡು* ದೇವನಿರದಗುಡಿಯೊಳಗೆ ನಾನುಅನಾಥ ಪ್ರಜ್ಞೆ* ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ* ಉರಿವ ಬೆಂಕಿಒಲೆಯ ಮೇಲೆ […]
ಆಧುನಿಕ ವಚನಗಳು
ಆಧುನಿಕ ವಚನಗಳು ರತ್ನಾ ಕಾಳೇಗೌಡ ಅರಮನೆಯ ರಾಜನಾದರೇನು?ಬಡವ ಭಿಕ್ಷುಕನಾದರೇನು?ಇಬ್ಬರಿಗೂ ಒಂದೇ ರೀತಿಯ ಹಸಿವುಅನ್ನವೇ ಇಬ್ಬರ ಹೊಟ್ಟೆ ತುಂಬಿಸುವುದುಅರಮನೆಯಲ್ಲಿ ಮಲಗುವುದಕ್ಕೆ ಮಂಚಭಿಕ್ಷುಕರಿಗೆ ಪಾರ್ಕಿನ ಕಲ್ಲು ಬೆಂಚೇಮಂಚ:ಇಬ್ಬರೂ ಮಾಡುವುದು ನಿದ್ದೆ ಎಂಬುದತಿಳಿದು ಬಾಳಯ್ಯ — ರತ್ನದೀಪ ನಿರ್ಗತಿಕ ಮಾಡಿ ಬಂಧುಗಳ ಮನೆಗೆಹೋದಾಗ ಗುರುತಿಲ್ಲದವರಂತೆ ಮುಖತಿರುಗಿಸಿಕೊಂಡು ಸೋದರತ್ತೆಧನಿಕಳೆಂದು ತಿಳಿದಾಗ ಮುಗಿ ಬಿದ್ದುಬಂದಿರಯ್ಯಎತ್ತೆತ್ತಲೂ ನನ್ನದೆ ಗುಣಗಾನಮಾಡುತಿಹರಯ್ಯಗುಣ ನಡೆ ನುಡಿಯಿಂದಲೇ ಸಮಾಜದಲ್ಲಿಸ್ಥಾನ ಮಾನ ದೊರೆಯುವುದೆಂದುತಿಳಿಯರಯ್ಯಗುಣ ನಡತೆಯನ್ನು ಮೂಲೆಗೆ ತಳ್ಳಿ ಹಣಕ್ಕೆಬೆಲೆ ಕೊಡುವ ದಾನ ದಾಹಿಗಳನು ಮನೆಗೆಹೇಗೆ ಸೇರಿಸಲಯ್ಯ –ರತ್ನದೀಪ ಗಜನ ಮಣಿಸಿ ದಂತ ಪಡೆಯಬಹುದುವ್ಯಾಘ್ರನ […]
ಮುಂಜಾವಿನ ಬೆರಗು
ಕವಿತೆ ಮುಂಜಾವಿನ ಬೆರಗು ಡಾ.ಪ್ರೀತಿ ಕೆ.ಎ. ಅದೊಂದು ತಿಳಿ ಮುಂಜಾವುಎದ್ದಿದ್ದೆ ನಿನ್ನ ನೆನಪುಗಳಿಂದಕಣ್ಣ ಮೇಲಿನ ಮುಂಗುರುಳನ್ನುಹಗೂರಕ್ಕೆ ಹಿಂದೆ ಸರಿಸಿಬೆಚ್ಚಗಿನ ಚಹಾವನ್ನು ಇಷ್ಟಿಷ್ಟೇಹೀರುತ್ತಾ ಬಾಲ್ಕನಿಯಲ್ಲಿ ನಿಂತಿದ್ದೆ ನಿನ್ನೆವರೆಗೆ ಮೊಗ್ಗಾಗಿದ್ದಕೆಲವೇ ಕೆಲವು ಗಳಿಗೆಗಳಹಿಂದಷ್ಟೇ ಹೂವಾಗಿ ಬಿರಿದಆ ಸೇವಂತಿಗೆಯ ಮೃದು ಪಕಳೆಗಳಿಗೆನಿನ್ನದೇ ಮೈಯ ಘಮ ಚೀವ್ ಚೀವ್ ಗುಬ್ಬಿಮರಿಗಳಜೊತೆ ಸೇರಿದ ಹೊಸ ಹಕ್ಕಿಗಳಸಂಗೀತ ಸುಧೆಯಲ್ಲಿನಿನ್ನದೇ ನಾದ ಮೆಲ್ಲನೇ ಬೀಸುತ್ತಿರುವತಂಗಾಳಿಗೆ ಸಾಥ್ ಕೊಡುವಂತೆಅತ್ತಿಂದಿತ್ತ ಓಲಾಡುತ್ತಿರುವಆ ಎಳೇ ಸಂಪಿಗೆ ಗಿಡಕ್ಕೆನಿನ್ನದೇ ಲಯ ನೀಲಾಕಾಶದಲ್ಲಿ ತುಸುವೇಮೊಗವನ್ನು ತೋರುತ್ತಿದ್ದಇದೀಗ ಬಂಗಾರದ ಬಣ್ಣದಿಂದಮಿರಿ ಮಿರಿ ಹೊಳೆಯುತ್ತಿರುವ ಸೂರ್ಯನಿಗೆನಿನ್ನ ಕಣ್ಣುಗಳಲ್ಲಿದ್ದಷ್ಟೇ […]
ದ್ವಿಪದಿಗಳು
ದ್ವಿಪದಿಗಳು ಸಿದ್ಧರಾಮ ಕೂಡ್ಲಿಗಿ ಖಾಲಿಯಾದ ಕಣ್ಣುಗಳಲಿ ತೇಲುತ್ತವೆ ಕಂಬನಿದುಂಬಿದ ಮೋಡಗಳು ಒಮ್ಮೊಮ್ಮೆ ಭೋರ್ಗರೆಯುತ್ತವೆ ಒಮ್ಮೊಮ್ಮೆ ಕಣ್ಣಂಚಿನಲೇ ನಿಲ್ಲುತ್ತವೆ – ಬಂಜೆ ನೆಲಕೂ ಆಗಾಗ ಕನವರಿಕೆ ಒಡಲು ತುಂಬುವ ಸರದಾರ ಬರಬಹುದೆಂದು – ಬರಿದಾದ ತಲೆಯಲಿ ಚಿಂತೆಯ ಹದ್ದುಗಳದೇ ಗಲಾಟೆ ಬೇಟೆ ಸಿಕ್ಕರೆ ಭೂರಿ ಭೋಜನ ಇಲ್ಲದಿರೆ ಬರೀ ಗಾನ ಬಜಾನ – ಮತ್ತೊಬ್ಬರ ಬೂಟಿನಲಿ ಮೂಗು ತೂರಿಸುವ ಹೆಜ್ಜೆಗಳು ತಮಗೊಂದು ಅಸ್ತಿತ್ವವಿದೆಯೆಂದು ಎಂದೂ ಯೋಚಿಸವು – ಮುಗುಳ್ನಗೆಗಳು ಹಾರಾಡುತ್ತವೆ ಚಿಟ್ಟೆಯಂತೆ ಪ್ರೀತಿ ಇದ್ದಲ್ಲಿ ಕೂರುತ್ತವೆ ಇಲ್ಲದಿದ್ದಲ್ಲಿ ಮುಂದೆ […]
ಗಜಲ್
ಗಜಲ್ ಅಕ್ಷತಾ ಜಗದೀಶ ಬಾಳಲ್ಲಿ ಆನಂದದ ಹೊಳೆ ಹರಿಸಿದೆ ನೀ ಕಂದಸಾಗರದ ಆಳದಲಿ ದೊರಕಿದ ಮುತ್ತಿನಂತೆ ಆನಂದ ನೀ ಅತ್ತರು ಅದು ಸಂಗೀತದ ನಾದ ಕಂದನಕ್ಕಾಗ ಅದುವೇ ಮಾತ್ರ ಸ್ವರ್ಗದಾನಂದ ತೊದಲು ನುಡಿಯಲಿ ನುಡಿವೆ ನೀ ಕಂದನಿನ್ನೊಡನಾಟವದುವೇ ಎನಗೆ ಚಂದ ಬಾಳಲ್ಲಿ ನಂದಾದೀಪವಾದೇ ನೀ ಕಂದಸಂತೋಷದ ಅಲೆಯಾಗಲಿ ಈ ಅನುಬಂಧ ಪುಟ್ಟ ಪುಟ್ಟ ಹೆಜ್ಜೆ ನೀ ಇಡುವಾಗ ಕಂದಮನೆ ಆಗಿದೆ ಮಂತ್ರಾಲಯದಂತೆ ಮಹದಾನಂದ. ************************
ಕ್ಷಮಿಸಿ ಬಿಡು ಬಸವಣ್ಣ
ಕವಿತೆ ಕ್ಷಮಿಸಿ ಬಿಡು ಬಸವಣ್ಣ ಡಾ.ಶಿವಕುಮಾರ್ ಮಾಲಿಪಾಟೀಲ ನೀ ಹಾಕಿದ ಸಮಾನತೆಯಭದ್ರ ಬುನಾದಿ ಮೇಲೊಂದುಅಸಮಾನತೆಯ ಸೋರುವ ಗುಡಿಸಲು ಹಾಕಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನೀನು ಗಳಿಸಿದ ನೈತಿಕಆಸ್ತಿಯ ಮಾರಿಮಹಾಮನೆಯ ಜಂತಿಮುರಿದು ಉರುವಲಾಗಿಬಳಸುತ್ತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನಿನ್ನ ಜನ್ಮದಿನದಂದೆಆಸ್ತಿ, ಬಂಗಾರ ಖರೀದಿಸಿಅಕ್ಷಯ ನಿಧಿ ತುಂಬಿಸಿಕೃತಕ ಜಗತ್ತು ಕಟ್ಟುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ದೇಶ ವಿದೇಶಗಳಲಿ ನಿನ್ನ ಮೂರುತಿ ಸ್ಥಾಪಿಸಿ,ನಿನ್ನ ವಚನಗಳನ್ನುಎಲ್ಲಾ ಭಾಷೆಗಿಳಿಸಿ,ಕಲ್ಯಾಣ ನಾಡನ್ನೆಕಟ್ಟುವುದ ಮರೆತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ವಚನಗಳನ್ನು ಹೇಳುತ್ತ ಕೇಳುತ್ತ ವಚನ ಭ್ರಷ್ಟರಾಗಿ,ಕಾಯಕವೇ ಕಷ್ಟವೆಂದುನಿನ್ನನ್ನು ಕೂಡಲಸಂಗಮದಲ್ಲಿ ದಿನವೂ ಮುಳುಗಿಸುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ […]
ಯುವ ಗಜಲ್ ಕವಿ ಚೇತನ್ ನಾಗರಾಳ ಹೆಸರು : ಚೇತನ್ ನಾಗರಾಳ.ವಯಸ್ಸು : ೨೫ಶಿಕ್ಷಣ : ಬಿ.ಕಾಮ್ವೃತ್ತಿ : ಖಾಸಗಿ ಬ್ಯಾಂಕ್ ಉದ್ಯೋಗಿಪ್ರಕಟಿತ ಕೃತಿಗಳು: ೧) ಹೀಗೊಂದು ಯುದ್ಧ ಬುದ್ಧನೊಂದಿಗೆ (ಕವನ ಸಂಕಲನ)೨) ಖಾಲಿ ಕೋಣೆಯ ಹಾಡು (ಗಜಲ್ ಸಂಕಲನ) ವಿಳಾಸ :ಚೇತನ್ ನಾಗರಾಳ204 , ವಾರ್ಡ್ ನಂ 1ಬಸವ ವೃತ್ತದ ಹತ್ತಿರಬೀಳಗಿ – 587116ಜಿಲ್ಲೆ : ಬಾಗಲಕೋಟಮೊ :8861888130 —————————– ಸಂಗಾತಿಯ ಓದುಗರಿಗೆ ಇವರದೊಂದು ಗಜಲ್ ಒಮ್ಮೆ ಉಳಿಸಿಕೊ ನೀನು ಈ ರಾತ್ರಿ ಮತ್ತೆ ಬರುವುದಿಲ್ಲನೆನಪಿರಲಿ […]
ಅಂಕಣ ಬರಹ “ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ…” ಆಗಾಗ ಕೆಲವರು ಬರಹವನ್ನೂ ಮತ್ತು ಬರೆದ ಬರಹಗಾರನನ್ನೂ ಒಂದೆನ್ನುವಂತೆ ಭಾವಿಸಿ ಅನುಮಾನದಿಂದ ನೋಡುವುದನ್ನು ನೋಡುತ್ತಿರುತ್ತೇವೆ. ಗೆಳೆಯರು ಇದನ್ನು ಬಾರಿ ಬಾರಿ ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ಇದು ಪ್ರತಿಯೊಬ್ಬ ಬರಹಗಾರನಿಗೂ ಒಂದಲ್ಲಾ ಒಂದು ಬಾರಿ ಎದುರಿಸಬೇಕಾಗಿ ಬರುವ ಸಾಮಾನ್ಯ ಸನ್ನಿವೇಶವೂ ಆಗಿರುತ್ತದೆ. ಆದರೆ ಓದುಗರು ಒಂದು ಮಾತನ್ನು ನೆನಪಿನಲ್ಲಿಡಬೇಕು. ಅವನು ಬರಹಗಾರ… ತನಗೆ ಕಂಡ, ಅನುಭವಿಸಿದ, ಇರರ ಅನುಭವದಿಂದ ಅರಿತ ಎಲ್ಲವನ್ನೂ ಒಂದಾಗಿಸಿ ಬರಹದ ಮೂಲತತ್ವದ ಅಚ್ಚಿಗೆ ಸುರಿದು ಓದುಗರಿಗೆ […]
ಅಂಕಣ ಬರಹ ಹೊಸ ದನಿ ಹೊಸ ಬನಿ ೧೬ ಹುಚ್ಚು ಆದರ್ಶಗಳಿಲ್ಲದ ಭಾವ ಭಿತ್ತಿಯ ಸಹಜ ನಿರೂಪಣೆ ನಾಗರೇಖಾ ಗಾಂವಕರ್ ಕವಿತೆಗಳು ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆಬಡಿಯದೇ, ಪೊಗರಿದ ಅವನೆಂಬವನ ಹುಡುಕಿ ಸೋತಿದ್ದೇನೆ, ಹುಡುಕಿ ಕೊಡು ಹೇ! ಪ್ರಭು. ಎಂದು ಗಟ್ಟಿಯಾಗಿ ಪ್ರಶ್ನಿಸುತ್ತಲೇ ಸುರುವಾಗುವ ಈ ಕವಿತೆ ಗಂಡಿನ ಅಹಮ್ಮನ್ನು ಗುರಾಯಿಸುತ್ತಲೇ ಕಡೆಗೆ ಆದರವನ ದೇವರಿಗೆ ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆ ಮೈಲಿಗೆಯಂತೆ. ಆ ದೇವನೆಂಬವನ ಹುಡುಕಿ ಕೊಡು ಹೇ! ಪ್ರಭು […]