ಹಾಯ್ಕುಗಳು
ವಿ.ಹರಿನಾಥ ಬಾಬು
ಒಲೆಯ ಮುಂದೆ
ಕರುಳ ಸುಟ್ಟ ಅಮ್ಮ
ತಾಯ ಮಮತೆ
*
ಕುದಿ ಎಸರು
ತಾಯಿಯ ಎದೆಹಾಲು
ಕಟ್ಟಿದ ಬಾಯಿ
*
ಅಳುವ ಮಗು
ನಿಷ್ಕರುಣಿ ಜಗತ್ತು
ತಬ್ಬಲಿ ತಾಯಿ
*
ಕರುಳ ಕುಡಿ
ಭಯ ಭೀತಗೊಂಡಿದೆ
ಕತ್ತಲ ರಾಜ್ಯ
*
ರಸ್ತೆಯ ಮೇಲೆ
ಎಳೆದು ನಿಂತ ತೇರು
ಜೀವನ ಮುಕ್ತಿ
*
ಕಡಲ ನೀರು
ಸವಿಯಲೊಲ್ಲೆ ಉಪ್ಪು
ಸಪ್ಪೆ ಬದುಕು
*
ಓಡಿದ ನದಿ
ಸೇರಿತು ಕಡಲನು
ಬದುಕು ಅಂತ್ಯ
*
ಮೇಲೆ ಚಂದಿರ
ಈಕೆ ಬೆಳದಿಂಗಳು
ಬಾಳು ಹುಣ್ಣಿಮೆ
*
ಬೀಸುವ ಗಾಳಿ
ಉದುರಿದವು ಎಲೆ
ಅಪ್ಪಿತು ಮುಪ್ಪು
*
ಗುಡಿಯ ಮುಂದೆ
ಭಿಕ್ಷುಕರದೇ ಸಾಲು
ಭಕ್ತಿ ಕುರುಡು
*
ದೇವನಿರದ
ಗುಡಿಯೊಳಗೆ ನಾನು
ಅನಾಥ ಪ್ರಜ್ಞೆ
*
ಕೂಗಿತು ಕೋಳಿ
ಹರಿಯಿತು ಬೆಳಕು
ನಗುವ ಸೂರ್ಯ
*
ಉರಿವ ಬೆಂಕಿ
ಒಲೆಯ ಮೇಲೆ ಅನ್ನ
ಹಸಿದ ಕಂದ
*
ಸಿಟ್ಟಾದ ಸೂರ್ಯ
ಭೂಮಿ ಬಳಲಿ ಬೆಂಡು
ಹಾಳಾದ ರೈತ
*
ಜೋರಾದ ಮಳೆ
ಕೊಚ್ಚಿಹೋದ ಫಸಲು
ಹತಾಷ ರೈತ
*
ತುಂತುರು ಹನಿ
ಪುಲಕಗೊಂಡ ಭೂಮಿ
ಪ್ರಸನ್ನ ಜನ
*
ಮೌನದ ಕಾಡು
ಅಲ್ಲಿ ಮನುಷ್ಯರಿಲ್ಲ
ಸುಂದರ ಲೋಕ
*
ಕಣ್ಣ ಕಂಬನಿ
ಅವಳ ಖಾಲಿ ನೋಟ
ಎದೆಯ ಗಾಯ
*
ಅವಳ ಅಳು
ಆಕಾಶದ ಕಾರ್ಮೋಡ
ನನ್ನೆದೆ ನೋವು
*
ನಕ್ಕಳು ನಲ್ಲೆ
ಅರಳಿದವು ಹೂವು
ಮನಸು ತೋಟ
**********************
ಚಂದದ ಹಾಯ್ಕುಗಳು..
ಅರ್ಥಗರ್ಭಿತ ಸಾಲುಗಳು.
ಅರ್ಥಪೂರ್ಣ ಹಾಯ್ಕುಗಳು