ಗಜಲ್
ಅಕ್ಷತಾ ಜಗದೀಶ
ಬಾಳಲ್ಲಿ ಆನಂದದ ಹೊಳೆ ಹರಿಸಿದೆ ನೀ ಕಂದ
ಸಾಗರದ ಆಳದಲಿ ದೊರಕಿದ ಮುತ್ತಿನಂತೆ ಆನಂದ
ನೀ ಅತ್ತರು ಅದು ಸಂಗೀತದ ನಾದ ಕಂದ
ನಕ್ಕಾಗ ಅದುವೇ ಮಾತ್ರ ಸ್ವರ್ಗದಾನಂದ
ತೊದಲು ನುಡಿಯಲಿ ನುಡಿವೆ ನೀ ಕಂದ
ನಿನ್ನೊಡನಾಟವದುವೇ ಎನಗೆ ಚಂದ
ಬಾಳಲ್ಲಿ ನಂದಾದೀಪವಾದೇ ನೀ ಕಂದ
ಸಂತೋಷದ ಅಲೆಯಾಗಲಿ ಈ ಅನುಬಂಧ
ಪುಟ್ಟ ಪುಟ್ಟ ಹೆಜ್ಜೆ ನೀ ಇಡುವಾಗ ಕಂದ
ಮನೆ ಆಗಿದೆ ಮಂತ್ರಾಲಯದಂತೆ ಮಹದಾನಂದ.
************************