ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದ್ವಿಪದಿಗಳು

ಸಿದ್ಧರಾಮ ಕೂಡ್ಲಿಗಿ

Lovers footprints. In the sand on beach royalty free stock photo

ಖಾಲಿಯಾದ ಕಣ್ಣುಗಳಲಿ ತೇಲುತ್ತವೆ ಕಂಬನಿದುಂಬಿದ ಮೋಡಗಳು

ಒಮ್ಮೊಮ್ಮೆ ಭೋರ್ಗರೆಯುತ್ತವೆ ಒಮ್ಮೊಮ್ಮೆ ಕಣ್ಣಂಚಿನಲೇ ನಿಲ್ಲುತ್ತವೆ

ಬಂಜೆ ನೆಲಕೂ ಆಗಾಗ ಕನವರಿಕೆ

ಒಡಲು ತುಂಬುವ ಸರದಾರ ಬರಬಹುದೆಂದು

ಬರಿದಾದ ತಲೆಯಲಿ ಚಿಂತೆಯ ಹದ್ದುಗಳದೇ ಗಲಾಟೆ

ಬೇಟೆ ಸಿಕ್ಕರೆ ಭೂರಿ ಭೋಜನ ಇಲ್ಲದಿರೆ ಬರೀ ಗಾನ ಬಜಾನ

ಮತ್ತೊಬ್ಬರ ಬೂಟಿನಲಿ ಮೂಗು ತೂರಿಸುವ ಹೆಜ್ಜೆಗಳು

ತಮಗೊಂದು ಅಸ್ತಿತ್ವವಿದೆಯೆಂದು ಎಂದೂ ಯೋಚಿಸವು

ಮುಗುಳ್ನಗೆಗಳು ಹಾರಾಡುತ್ತವೆ ಚಿಟ್ಟೆಯಂತೆ

ಪ್ರೀತಿ ಇದ್ದಲ್ಲಿ ಕೂರುತ್ತವೆ ಇಲ್ಲದಿದ್ದಲ್ಲಿ ಮುಂದೆ ಸಾಗುತ್ತವೆ

ಏನು ಪುಣ್ಯವೋ ಹೆಜ್ಜೆಗಳಿಗೆ ಮಾತು ಬರದಿರುವುದು

ಇಲ್ಲವಾದರೆ ಅವುಗಳಲ್ಲಿಯೂ ಪ್ರೀತಿ ಜಗಳಗಳಿರುತ್ತಿದ್ದವು

ಕಣ್ಣೊಳಗಿನ ಆಸೆಯೆಂಬ ಧೂಳು ತೊಳೆದರೆ

ಎಲ್ಲವೂ ಸ್ಪಷ್ಟ, ದಿಟ್ಟ, ನೇರ, ನಿರಂತರ

*****************************************

About The Author

Leave a Reply

You cannot copy content of this page

Scroll to Top