ಯುವ ಗಜಲ್ ಕವಿ

ಚೇತನ್ ನಾಗರಾಳ

ಹೆಸರು : ಚೇತನ್ ನಾಗರಾಳ.
ವಯಸ್ಸು : ೨೫
ಶಿಕ್ಷಣ : ಬಿ‌.ಕಾಮ್
ವೃತ್ತಿ : ಖಾಸಗಿ ಬ್ಯಾಂಕ್ ಉದ್ಯೋಗಿ
ಪ್ರಕಟಿತ ಕೃತಿಗಳು:

೧) ಹೀಗೊಂದು ಯುದ್ಧ ಬುದ್ಧನೊಂದಿಗೆ (ಕವನ ಸಂಕಲನ)
೨) ಖಾಲಿ ಕೋಣೆಯ ಹಾಡು (ಗಜಲ್ ಸಂಕಲನ)

ವಿಳಾಸ :
ಚೇತನ್ ನಾಗರಾಳ204 , ವಾರ್ಡ್ ನಂ 1ಬಸವ ವೃತ್ತದ ಹತ್ತಿರ
ಬೀಳಗಿ – 587116
ಜಿಲ್ಲೆ : ಬಾಗಲಕೋಟ
ಮೊ :8861888130

—————————–

ಸಂಗಾತಿಯ ಓದುಗರಿಗೆ ಇವರದೊಂದು ಗಜಲ್

Couple silhouettes under meteor shower, night sky with stars. Romantic lovers silhouettes, hugging and kissing under falling stars, outdoor on a field and starry royalty free illustration

ಒಮ್ಮೆ ಉಳಿಸಿಕೊ ನೀನು ಈ ರಾತ್ರಿ ಮತ್ತೆ ಬರುವುದಿಲ್ಲ
ನೆನಪಿರಲಿ ಈ ಘಳಿಗೆಯೇ ಮಧುರ ನಮಗೆ ನಾಳೆಗಳು ಇರುವುದಿಲ್ಲ..

ನಿನ್ನದೋ ಸ್ವರ ನನ್ನದೋ ಯಾವುದಾದರೇನಂತೆ
ಇಲ್ಲಿ ಯಾರೂ ನಮ್ಮ ದುಃಖಗಳನ್ನು ಹಾಡುವುದಿಲ್ಲ..

ನಿನ್ನ ಕೋಣೆಯ ಮಂದ ಬೆಳಕಿನ ದೀಪ ನಾನು
ಹೌದು, ಪ್ರೀತಿ ಯಾರನ್ನೂ ಸುಮ್ಮನೇ ಸುಡುವುದಿಲ್ಲ..

ಈ ಗಾಳಿಯಲ್ಲಿ ಅಂತಹ ಹಿತವೇನೂ ಇಲ್ಲ
ತೇಯಲಾರದೆ ಗಂಧ ಸೂಸುವುದಿಲ್ಲ..

ಅಲೆಗಳೆಂದೂ ಭಾರವಲ್ಲ ಕಡಲಿಗೆ ಚೇತನಗಳವು
ಕೇಳಿಲ್ಲಿ, ಬದುಕು ನಮ್ಮಿಂದ ಏನನ್ನೂ ಬಯಸುವುದಿಲ್ಲ..

*******************************************

************************************************************************

3 thoughts on “

  1. ಯುವ ಗಜಲ್ ಕಾರರನ್ನು ಪರಿಚಯಿಸುವ ಕೆಲಸ ಉತ್ತಮವಾಗಿದೆ. ಗೆಳೆಯ ಚೇತನ್ ನಾಗಾರಾಳಗೆ ಅಭಿನಂದನೆಗಳು. ಮತ್ತು ಸಂಪಾದಕರಿಗೆ ಧನ್ಯವಾದಗಳು.

Leave a Reply

Back To Top