ಅಂಕಣ ಸಂಗಾತಿ ನೆನಪಿನದೋಣಿಯಲಿ ದಸರಾ ಮೈಸೂರು ದಸರಾ  ಎಷ್ಟೊಂದು ಸುಂದರಾ  ಚೆಲ್ಲಿದೆ ನಗೆಯಾ ಪನ್ನೀರ  ಎಲ್ಲೆಲ್ಲೂ ನಗೆಯಾ ಪನ್ನೀರ  ಬಾಲ್ಯ ಎಂದರೆ ಹಬ್ಬಗಳ ಆಚರಣೆ ಮನದಲ್ಲಿ ಎಂದಿಗೂ ಹಸಿರು . ಅದರಲ್ಲೂ ಮೈಸೂರಿನಲ್ಲಿ ಹುಟ್ಟಿ ಬೆಳೆದ ನನಗೆ ದಸರಾ ಎಂದರೆ ಜೀವನದ ಒಂದು ಅವಿಭಾಜ್ಯ ಅಂಗದಂತೆ.   ದಸರೆಯನ್ನು ನೆನಪು ಮಾಡಿಕೊಳ್ಳದ ನೆನಪಿನ ದೋಣಿಯ ಪಯಣ ಅರ್ಥಹೀನ ಅನ್ನಿಸಿಬಿಡುತ್ತದೆ. ಹಾಗಾಗಿಯೇ ಇಂದಿನ ನೆನಪಿನ ದೋಣಿಯ ಯಾನವಿಡೀ ದಸರೆಯ ಸ್ಮರಣೆ.   ನವರಾತ್ರಿ ದಸರಾ ಎಂದರೆ ಧಾರ್ಮಿಕ ಆಧ್ಯಾತ್ಮಿಕ ಸಾಂಸ್ಕೃತಿಕ […]

ಕಾವ್ಯ ಸಂಗಾತಿ ನೀನಿರಲು ಅನಿತಾ ನಸುಕಿನಲಿ ಹಸಿರೆಲೆಯ ಮೇಲೆಬಿದ್ದ ಇಬ್ಬನಿ ಬೇಡಿದೆ ಭಗವಂತನಜಗವ ಬೆಳಗುವ ದಿನಕರನ ಕಿರಣಸ್ಪರ್ಶಿಸಲು ಮೊಗ್ಗಾಗಿ ಅರಳಿದ ಸುಂದರ ಸುಮಹಾತೊರೆಯುತಿದೆ, ಏಳು ಬೆಟ್ಟಗಳಮೇಲೇರಿ ನಿಂತ ಆ ದೇವರಕಾಲ ಬಳಿ ಸೇರಲು! ಗುಡಿಯ ಘಂಟೆ ಧ್ಯಾನಿಸುತಿದೆಸುಶ್ರಾವ್ಯವಾಗಿ ತನ್ನ ಸದ್ದುಜಗನ್ನಿಯಮಕನ ತಲುಪಲು! ಗರ್ಭಗುಡಿಯ ಪ್ರಣತಿಕಾಯುತಿದೆ ಕರುಣಮಯ ಪರಮಾತ್ಮನಮುಖಾರವಿಂದವ ಉಜ್ವಲಿಸಲು! ಜಗದ ಪ್ರತಿ ಚಲನೆಯೂ ನೀನಾಗಿರಲುಧ್ಯಾನಿಸದೆ ಇರಲಾರದುಈ ಮನವು, ಅನುಕ್ಷಣವೂನನ್ನೊಳಗೆ ನೀನಿರಲು!

ಲೇಖನ ಓಡುತ್ತಿರುವ ಜೀವನಕ್ಕೆ ಜಯಶ್ರೀ.ಜೆ. ಅಬ್ಬಿಗೇರಿ ಇಂದು ನಾವು ನಡೆಸುತ್ತಿರುವ ಜೀವನದ ಕ್ರಮದ ಕುರಿತು ಕೊಂಚ ಯೋಚಿಸಿದರೆ ಭಯ ಹುಟ್ಟುತ್ತದೆ. ಹಾಗೆ ನೋಡಿದರೆ ಹಾವು ಏಣಿಯಾಟದ ಚರಿತ್ರೆ ನಮ್ಮ ಹಿಂದಿದೆ. ಹೀಗಿದ್ದಾಗ್ಯೂ ದೈವಸೃಷ್ಟಿಯಲ್ಲಿ ನಾವೇ ಶ್ರೇಷ್ಠವೆಂದು ಕೊಚ್ಚಿಕೊಳ್ಳುತ್ತೇವೆ. ನಮ್ಮ ಬುದ್ಧಿವಂತಿಕೆಗೆ ಶಹಬ್ಬಾಸಗಿರಿ ಕೊಟ್ಟುಕೊಳ್ಳುತ್ತೇವೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಕಂಡು ಹಿಡಿದು ಯಂತ್ರ ನಾಗರಿಕತೆಯಲ್ಲಿ ಬದುಕುತ್ತಿದ್ದೇವೆ. ಆಧುನಿಕ ಜೀವನಶೈಲಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಗರ ಕೇಂದ್ರೀಕೃತ ಬದುಕಿಗೆ ಆಕರ್ಷಿತರಾಗಿದ್ದೇವೆ. ದೋಚುವ ಉಪಭೋಗಿಸುವ ಕೊಳ್ಳುಬಾಕ ಸಂಸ್ಕೃತಿಯನ್ನು ಬಾಚಿ ತಬ್ಬಿಕೊಂಡಿದ್ದೇವೆ. ಭೂಮಿಯ […]

ಪುಸ್ತಕ ಸಂಗಾತಿ ಕಾವೇರಿತೀರದಪಯಣ ಪುಸ್ತಕವೊಂದು ಓದಲು ಮಡಿಲಿಗೆ ಬಿದ್ದಾಗ ಅದು ಕಾವೇರಿಯದೆಂದು ತಿಳಿದು ಕಣ್ಣರಳಿತು. ಇದೊಂದು ಅನುವಾದ ಕೃತಿಯೆಂಬುದು ಮತ್ತಷ್ಟು ಖುಷಿಕೊಟ್ಟಿತು. ಮೂಲ ಮಲಯಾಳಂ ಆಗಿದ್ದು , ಮಲಯಾಳಂ ಸಾಹಿತಿಯೊಬ್ಬರೂ ಕಾವೇರಿಯ ಜತೆ ಹೆಜ್ಜೆಯಿಡುತ್ತಲೇ ಕಾವೇರಿ ತೀರದ ಇತಿಹಾಸದ ಅನಾವರಣ ಮಾಡಿದ್ದಾರೆ. ಕನ್ನಡ ಮಣ್ಣಲ್ಲೇ ಹುಟ್ಟಿ, ಕಾವೇರಿಯ ಬಗಲಲ್ಲೇ ಉಸಿರಾಡಿ  ಈ ಕೃತಿಯನ್ನು ಓದುವ ಮೂಲಕವಾದರೂ  ನಾನೂ ಕಾವೇರಿಯೊಡನೆ  ಪ್ರಯಾಣ ಬೆಳೆಸಿದೆ. ಕೊಡಗಿನ ತಲಕಾವೇರಿಯಿಂದ ಹೊರಟ ಜೀವನದಿ ಪೂಂಪುಹಾರ್ ತಲುಪುವವರೆಗೂ ಅದೆಷ್ಟು ರೋಚಕ ಕಥೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟಿಲ್ಲ! […]

ಲೇಖನ ಗೃಹಿಣಿ ಮತ್ತು ಸಾಹಿತ್ಯ ಜ್ಯೋತಿ  ಡಿ.ಬೊಮ್ಮಾ ಪ್ರಾಚೀನಕಾಲದಿಂದಲೂ ಸ್ತ್ರೀ ಎರಡನೆ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಪುರುಷ ಮೇಲು ಸ್ತ್ರೀ ಕೀಳು ಎಂಬ ಭಾವನೆಯಿಂದ  ಸ್ತ್ರೀ ಯು ಶಿಕ್ಷಣದಿಂದ ವಂಚಿತಳಾಗಿದ್ದಳು. ಹಾಗಾಗಿ ಸ್ತ್ರೀ ಯು ಸಾಹಿತ್ಯ ರಚನೆಯಲ್ಲಿ ಹಿಂದೆ ಬಿದ್ದಳು.  ಮೊಟ್ಟಮೊದಲ ಸಾಹಿತ್ಯ ರಚಿಸಿರುವದು ಹನ್ನೆರಡನೆ ಶತಮಾನದ ವಚನಗಾರ್ತಿಯರು . ಎರಡನೆಯ ಹಂತ ದೇಶದ ಸ್ವತಂತ್ರ ಚಳುವಳಿಗಳ ಸಂದರ್ಭದಲ್ಲಿ. ಹನ್ನೆರಡನೆಯ ಶತಮಾನದ ವಚನಗಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಿದರು.ಸಾಮಾಜಿಕ ಸ್ವಾತಂತ್ರ್ಯ ಅಂದೋಲನ ರಚಿಸಿದರು. […]

ಕಹಿ ಹಾಡು

ನಗ್ನ ಸತ್ಯ‌ ನಗ್ನ ಸತ್ಯ
ನಗ್ನ ಸತ್ಯ ನಗ್ನ ಸತ್ಯ
ಬದುಕು ಛಾಯೆ, ವಿದ್ಯೆ ಮಾಯೆ
ಕವಿತೆ ಒಂದು ಔಷಧ ನಗ್ನ ಸತ್ಯ!

Back To Top