ಕಾವ್ಯ ಸಂಗಾತಿ

ನೀನಿರಲು

ಅನಿತಾ

ನಸುಕಿನಲಿ ಹಸಿರೆಲೆಯ ಮೇಲೆ
ಬಿದ್ದ ಇಬ್ಬನಿ ಬೇಡಿದೆ ಭಗವಂತನ
ಜಗವ ಬೆಳಗುವ ದಿನಕರನ ಕಿರಣ
ಸ್ಪರ್ಶಿಸಲು

ಮೊಗ್ಗಾಗಿ ಅರಳಿದ ಸುಂದರ ಸುಮ
ಹಾತೊರೆಯುತಿದೆ, ಏಳು ಬೆಟ್ಟಗಳ
ಮೇಲೇರಿ ನಿಂತ ಆ ದೇವರ
ಕಾಲ ಬಳಿ ಸೇರಲು!

ಗುಡಿಯ ಘಂಟೆ ಧ್ಯಾನಿಸುತಿದೆ
ಸುಶ್ರಾವ್ಯವಾಗಿ ತನ್ನ ಸದ್ದು
ಜಗನ್ನಿಯಮಕನ ತಲುಪಲು!

1K+ Love Art Pictures | Download Free Images on Unsplash

ಗರ್ಭಗುಡಿಯ ಪ್ರಣತಿ
ಕಾಯುತಿದೆ ಕರುಣಮಯ ಪರಮಾತ್ಮನ
ಮುಖಾರವಿಂದವ ಉಜ್ವಲಿಸಲು!

ಜಗದ ಪ್ರತಿ ಚಲನೆಯೂ ನೀನಾಗಿರಲು
ಧ್ಯಾನಿಸದೆ ಇರಲಾರದು
ಈ ಮನವು, ಅನುಕ್ಷಣವೂ
ನನ್ನೊಳಗೆ ನೀನಿರಲು!


Leave a Reply

Back To Top