ಕಾವ್ಯ ಸಂಗಾತಿ

ನಿಮಿತ್ತ

ಕವಿ ಬೇಕಿಲ್ಲ
ಕವಿತೆ ಹುಟ್ಟಿಗೆ
ಸೂರ್ಯನುದಯಕ್ಕೆ
ಅರಳೋ ಕುಸುಮ ಕವಿತೆ

ದಾರಿ ಬೇಕಿಲ್ಲ
ನದಿ ಸಾಗರ ಸೇರಲು
ಸಾಗರದ ಸಂಗೀತಕ್ಕೆ
ಕುಣಿಯೋ ನವಿಲು ನದಿ

ಮೋಡ ಬೇಕಿಲ್ಲ
ಮಳೆಯಾಗಲು
ಭುವಿಯ ಒಲವಿಗೆ
ಕರಗೋ ಹೃದಯ ಮಳೆ

ಹೂವು ಬೇಕಿಲ್ಲ
ಜೇನಾಗಲು
ದುಂಬಿ ಹಸಿವಿಗೆ
ಸಂದ ಹೂರಣ ಜೇನು

ಯಾರ ಉಸಿರಿಗೆ
ಯಾರು ಕಾರಣರು?
ಎಲ್ಲವೂ ನಿಮಿತ್ತ
ಪ್ರಕೃತಿಯ ಸುತ್ತ


ಒಲವು

Leave a Reply

Back To Top