ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ
ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ ಹನಿ ಹನಿ ಟ್ರ್ಯಾಪ್ — ಮೆಸೇಜು ವಾಟ್ಸಾಪು ಫೇಸ್ಬುಕ್ಕುಮುಂತೆಲ್ಲ ಮಾಧ್ಯಮಗಳ ತಿಪ್ಪಿಗುಂಡಿಗೆಸೆಯಲುಮೋಹಕ ಪಲ್ಲಕ್ಕಿಯೊಳಗೆ ಶೃಂಗಾರಗೊಳಿಸಿದ ಹೆಣ ಬೀಳಿಸಲು ಗುಟು ಗುಟು ಸುರೆ ಕುಡಿಸಿಪೋಸ್ಟ್ ಮಾರ್ಟಮ್ಮನಕುಟುಕು ಕಾರ್ಯಾಚರಣೆ ನಡೆಸಿಹನಿ ಟ್ರ್ಯಾಪ್ ಹಾಸಿ ಮಲಗಿಸಿದ್ದಾರೆ ನಿದ್ದೆ ಎಚ್ಚರ ಅಳು ನಗು ಮಾತಿನ ಸರಸ ವಿರಸ ಕಲ್ಪನೆಗಳ ವಿಹಾರ ವಿಕಾರ ಎಲ್ಲ ಮಾತ್ರೆಗಳ ಡಬ್ಬ ಹತ್ತಿರವೇ ಇಟ್ಟು ಹನಿಟ್ರ್ಯಾಪ್ದಿಂಬಿಗೊರಗಿಸಿ ಮಲಗಿಸಿದ್ದಾರೆಮಾತ್ರೆಗಳ ಮೂಸಿನೋಡಿದರಷ್ಟೇ ಸಾಕಿಲ್ಲಿಸತ್ತ ನರನಾಡಿಗಳ ಸುತ್ತ ಉಳಿದಿರುವಜೀವವೊಂದು ಅನಾಥವಾಗಿಸಲು ನರಿಜಪದ ಭಂಟರಲ್ಲಿ ಸುಳಿದು ಸುತ್ತಿಹತ್ತಿರ ಬಂದು ಸಂದಿ […]
ನೂತನಾ ಕಾವ್ಯಗುಚ್ಛ
ನೂತನಾ ದೋಶೆಟ್ಟಿ ಕಾವ್ಯಗುಚ್ಛ ಬಟ್ಟಲ ತಳದ ಸಕ್ಕರೆ ಬಟ್ಟಲಲ್ಲಿ ಆಗಷ್ಟೇ ಕಾಯಿಸಿದಬಿಸಿ ಹಾಲುಜೊತೆಗೆ ತುಸು ಸಕ್ಕರೆಹಿತವಾದ ಮಿಲನವಸವಿಯುವ ಪರಿ ಸುಖವೇ ಸಾಕಾರವಾಗಿಬೆಳದಿಂಗಳೊಡಗೂಡಿದತಂಗಾಳಿಯ ಪಯಣಮೆತ್ತನೆಯ ಹಾಸುಕರೆವ ಕೆಂಪು ಹೂಗಳ ಗುಂಪುಕಾಮನ ಬಿಲ್ಲಿಗೂ ಬಣ್ಣ ತುಂಬುವುದೇ? ಬಟ್ಟಲು ಬರಿದಾದಾಗತಳದಲ್ಲುಳಿದ ತುಸುಸಕ್ಕರೆಯನ್ನೇತುದಿ ಬೆರಳಿನಿಂದ ಸವರಿಮೆಲ್ಲಗೆ ಹೀರಿದಾಗಖಾಲಿಯಾಗುವ ಭಯ ಕಾಲನ ದಾರಿಗುಂಟಸವೆಯಬೇಕಾದ ಹಾದಿಮೂಡಿ ಮಸುಕಾಗಿರುವಹೆಜ್ಜೆ ಗುರುತುಬಟ್ಟಲ ತಳದಸಕ್ಕರೆಯಂತೆ. ನಿನಗೆ ನೀನೇ ಸರಿಸಾಟಿ ಮನಸೊಂದುಮಲ್ಲಿಗೆ ಹೂಅಂಗಳದ ಬೆಳ್ಳಿ ರಂಗೋಲಿಅರಳಿದಾಗಬಣ್ಣ ಬಣ್ಣದ ಹೂಗಳಓಕುಳಿಬಿರಿದು ನಕ್ಕಾಗಬಾನ ಚಿಕ್ಕೆಗಳಚೆಲ್ಲಾಟದ ಪರಿ ಮನಸ್ಸೊಂದುಕೋಗಿಲೆಯ ಕೊರಳ ಇಂಪುಕರೆವ ಮಾಘದ ಮಧುರ ಪೆಂಪುಮೌನದ […]
ನಾಗರಾಜ ಹರಪನಹಳ್ಳಿ
ನಾಗರಾಜಹರಪನಹಳ್ಳಿ ಕಾವ್ಯಗುಚ್ಛ ಬೆರಳ ತುದಿಗೆ ಕರುಣೆ ಪಿಸುಗುಡುವತನಕ ಕಟ್ಟೆಯ ಮೇಲೆ ಕುಳಿತದ್ದಕ್ಕಕೊಲೆಯಾಯಿತುಉಗ್ಗಿದ ಖಾರದ ಪುಡಿಗೆಇರಿದ ಚೂರಿಗೆಕಣ್ಣು ಕರುಣೆ ಇರಲಿಲ್ಲ ಅಂತಿಂತಹ ಕಟ್ಟೆಯಲ್ಲಮಲ್ಲಿಕಾರ್ಜುನನ ಕಟ್ಟೆಇರಿದವ ಅಹಂಕಾರಿಇರಿಸಿಕೊಂಡದ್ದು ಸಮಾನತೆಒಂದು ಸವರ್ಣಧೀರ್ಘ ಸಂದಿಮತ್ತೊಂದು ಲೋಪಸಂದಿ ಕಣ್ಣು ಕಟ್ಟಿದ ,ಬಾಯಿ ಮುಚ್ಚಿದ ಈ ನಾಡಿನಲ್ಲಿ ಏನೂ ಆಗಬಹುದು ಸ್ವತಃ ದೊರೆ ದೀರ್ಘಾಸನದಲ್ಲಿಶವಾಸನದಲ್ಲಿರುವಾಗಅಹಂಕಾರ ಊರ ಸುತ್ತಿದರೆಅಚ್ಚರಿಯೇನಿಲ್ಲ ಇಲ್ಲಿ ಎಲ್ಲರೂ ಬಾಯಿಗೆ ಬೀಗಜಡಿದು ಕೊಂಡಿರುವಾಗನಿತ್ಯವೂ ಸಮಾನತೆಯ ಹಂಬಲ ಕೊಲೆಯಾಗುತ್ತಿರುತ್ತದೆಮತ್ತೊಮ್ಮೆ ಕರುಣೆಭೂಮಿಯಲ್ಲಿ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ,ನಡೆದಾಡುವ ಮರ ಬರುವತನಕನದಿಯೇ ಮನುಷ್ಯನಾಗಿ ಚೂರಿಯ ಅಹಂಕಾರದ ರಕ್ತ ತೊಳೆಯುವತನಕಇರಿದ […]
ಕಾಡು ಸುತ್ತಿಸಿ ನಿಸರ್ಗದ ಪಾಠ ಹೇಳುವ ಕಾನ್ಮನೆಯ ಕಥೆಗಳು ನಾನು ಎರಡನೇ ತರಗತಿ ಇದ್ದಿರಬಹುದು. ಅಜ್ಜಿ ಮನೆಯ ಊರಲ್ಲಿ ಬಂಡಿ ಹಬ್ಬ. ಅಂಕೋಲಾ ಹಾಗೂ ಕುಮಟಾದವರು ಏನನ್ನಾದರೂ ಬಿಟ್ಟಾರು. ಆದರೆ ಬಂಡಿ ಹಬ್ಬ ಬಿಡುವುದುಂಟೆ? ಆದರೆ ಬಂಡಿ ಹಬ್ಬದಲ್ಲಿ ದೇವರು ಒಮ್ಮೆ ಕಳಸದ ಮನೆಯಲ್ಲಿ ಕುಳಿತ ನಂತರ ಮತ್ತೆ ಎದ್ದು ಬರೋದು ರಾತ್ರಿಯೇ. ಅದರಲ್ಲೂ ಬಂಡಿ ಆಟ ಮುಗಿಸಿ ತಡವಾಗಿದ್ದ ರಾತ್ರಿಯದು. […]
ಗೂಡಂಗಡಿಯ ತಿರುವು ಬದುಕು ಎನ್ನುವುದು ಕುದಿಯುತ್ತಿರುವ ಹಾಲಿನಂತೆ. ಚೆಲ್ಲಿಹೋಗದಂತೆ ಕಾಪಾಡುವುದು ಬೆಂಕಿಯ ಕರ್ತವ್ಯವೋ, ಪಾತ್ರೆಯ ಜವಾಬ್ದಾರಿಯೋ ಅಥವಾ ಮನೆಯೊಡತಿಯ ಉಸ್ತುವಾರಿಯೋ ಎಂದು ಯೋಚಿಸುವುದು ನಿರರ್ಥಕವಾದೀತು! ಕುದಿಯುವುದು ಹಾಲಿನ ಕರ್ತವ್ಯವಾದರೆ, ಆ ಕ್ರಿಯೆ ಅಪೂರ್ಣವಾಗದಂತೆ ಮುತುವರ್ಜಿ ವಹಿಸುವುದು ಮಹತ್ತರವೆನ್ನಬಹುದಾದಂತಹ ಕೆಲಸ. ಬದುಕು ಎನ್ನುವ ಕಾಯಕ ಪರಿಪೂರ್ಣವಾಗುವುದೇ ಅದಕ್ಕೆ ಸಂಬಂಧಪಟ್ಟ ಕ್ರಿಯೆ-ಪ್ರಕ್ರಿಯೆಗಳ ನಿರಂತರತೆಯಲ್ಲಿ. ಮಣ್ಣಿನ ಒಡಲಿನಲ್ಲಿ ಬೇರು ಬಿಡುವ ಬೀಜ ಬೆಳಕಿನಾಶ್ರಯದಲ್ಲಿ ಕುಡಿಯೊಡೆವ ಕ್ಷಣದಲ್ಲಿ ಸದ್ದಿಲ್ಲದೆ ಬಿದ್ದ ಮಳೆಹನಿಯೊಂದು ಜೀವಜಲವಾಗಿ ಹರಿದು ಚಂದದ ಹೂವನ್ನರಳಿಸುತ್ತದೆ; ಎಲ್ಲಿಂದಲೋ ಹಾರಿಬಂದ ಬಣ್ಣದ ರೆಕ್ಕೆಗಳ […]
ಫಾಲ್ಗುಣ ಗೌಡ ಅಚವೆ
ಫಾಲ್ಗುಣ ಗೌಡ ಅಚವೆ ಕಾವ್ಯಗುಚ್ಛ ಅವ್ಯಕ್ತ ಎದುರಿಗಿದ್ದ ಚಿತ್ರವೊಂದುನೋಡ ನೋಡುತ್ತಿದ್ದಂತೆಪೂರ್ಣಗೊಂಡಿದೆ ಹರಿವ ನೀರಿನಂತಇನ್ನೇನನ್ನೋ ಕೆರಳಿಸುವಕೌತುಕದ ರೂಪಮೂಡಿದಂತೆ ಮೂಡಿ ಮರೆಯಾದಂತೆಆಡಿದಂತೆ ಆಡಿ ಓಡಿ ಹೋದಂತೆಮೈ ಕುಲುಕಿ ಮನಸೆಳೆವ ಹೆಣ್ಣಿನಂತೆಕತ್ತಲಾದರೂ ಅರಳಿಯೇ ಇರುವಅಬ್ಬಲಿ ಹೂವಂತೆಅದರ ಶೋಕಿ ಆಕರ್ಷಣೆಒಳ ಮಿನುಗು ಅಚ್ಚರಿಯೆಂದರೆಅದರ ಹಿಂದೊಂದುಅದರದೇ ರೂಪಸದ್ದಿಲ್ಲದೇ ಅಚ್ಚಾದಂತೆಮಾಡಿದೆಪರಕಾಯ ಪ್ರವೇಶ! ದಂಡೆಯಲ್ಲಿ ಎಲ್ಲ ನೆನಪುಗಳ ಮೂಟೆ ಕಟ್ಟಿಬಾವಿಗೆಸೆದಂತೆಬಾಕಿ ಇರುವ ಲೆಖ್ಖವನ್ನೂಚುಕ್ತಾ ಮಾಡದೇಅಲ್ಲೆಲ್ಲೋ ಮೌನ ದೋಣಿಯಲ್ಲಿಪಯಣ ಹೊರಟೆಒಸರುವುದು ನಿಂತ ನಲ್ಮೆಯೊಸಗೆಯ ಮನಸುನೀರವ ನಿರ್ವಾತ ನಿರ್ವಾಣದೆಡೆಗೆಕೊಂಡೊಯ್ದಿದೆ ದಂಡೆಯಲಿ ಮುಸುಕುವಉಸುಕಿನಲೆಯಲಿ ಕುಳಿತುಕಣ್ಣು ಮುಟ್ಟುವವರೆಗೂ ನೋಟಬರವ ಕಾಯುತ್ತಿದೆನೀ ಸಿಕ್ಕ ಸಂಜೆಯ […]
ಕಾವ್ಯಯಾನ
ಪ್ರೀತಿಯೆಂದರೆ.. ವಿಶಾಲಾ ಆರಾಧ್ಯ ಈ ಪ್ರೀತಿಯೆಂದರೆ ಹೀಗೇನೇಒಮ್ಮೆ ಮೂಡಿತೆಂದರೆ ಮನದಿಸರ್ರನೆ ಧಮನಿಯಲಿ ಹರಿದಾಡಿಮನಸ ಕದವ ತೆರೆದುಕನಸ ತೂಗು ಬಲೆಯಲಿಜಮ್ಮನೆ ಜೀಕುವಜೋಕಾಲಿಯಾಗುತ್ತದೆ..!! ಈ ಪ್ರೀತಿಯೆಂದರೆ ಹೀಗೇನೇಹರಿವ ಹೊನಲಂತೆ ಕಲ್ಲೇನುಮುಳ್ಳೇನು ಹಳ್ಳಕೊಳ್ಳವ ದಾಟಿಪರಿಧಿ ಪಹರೆಯ ಕೊತ್ತಲ ದಾಟಿಸೇರಿ ಕುಣಿಯುತ್ತದೆ ಮಾನಸಸರೋವರದ ಅಲೆಗಳ ಮೀಟಿ..!! ಪ್ರೀತಿ ಎಂದರೆ ಹೀಗೇನೇಕಂಗಳ ಬೆಸುಗೆಗೆ ಕಾವಾದ ಹೃದಯದೆಕಾಪಿಟ್ಟು ಹೆಪ್ಪಾದ ಮುಗಿಲಿನಂತೆಕಾದಲಿನ ತುಡಿತಕೆ ಒಮ್ಮೆ ಸ್ಪಂದನಿಸಿಕೂಡಿತುಂಬಿದ ಮುಗಿಲು ಸುರಿವ ವರುಣಧಾರೆಯ ಮುತ್ತ ಹನಿಗಳಂತೆ..!! *****************
ವಿಭಾ ಪುರೋಹಿತ ಕಾವ್ಯಗುಚ್ಛ
ವಿಭಾ ಪುರೋಹಿತ ಕಾವ್ಯಗುಚ್ಛ ವೆಂಟಿಲೇಟರ್ ಮತ್ತು ರಕ್ಷೆ ಭ್ರಾತೃತ್ವದ ಬಾಂಧವ್ಯ ದೆಳೆಯಲ್ಲಿಫ್ಯಾಷನ್ ಗಿಫ್ಟುಗಳ ಮೋಹದನೂಲುಆತ್ಮೀಯತೆ ಗೌಣ ಪ್ರದರ್ಶನಕ್ಕೆಕ್ಲಿಕ್ಕಾಗುವ ಕೆಂಪು ಕೇಸರಿ ಹಳದಿರಕ್ಷೆ ತಾಯಿ ಕರುಳ ಬಣ್ಣ ಅಂಟಿದೆಅದೇಕೋ ಅವಳ ಕುಡಿಗಳ ಬೆರಳು ಕೆಂಪಾಗಿವೆ! ಎಪ್ಪತ್ತು ವರ್ಷಗಳಿಂದಎದೆಯಲ್ಲಿ ಬೆಂಕಿ ಇಟ್ಟು ಕೊಂಡಿದ್ದಾಳೆ ಇತಿಹಾಸ ಗಡಿರೇಖೆಯೆಳೆದಾಗಸಹಸ್ರೋಪಾದಿಯಾಗಿ ಕಂಗಾಲಾದವರನ್ನೆಲ್ಲತನ್ನವರೆಂದು ತೆಕ್ಕೆಬಡಿದುಕೊಂಡಳುಆತ್ಮಸಾಕ್ಷಿಯಾಗಿ ಕಾಲಿಟ್ಟವರೆಷ್ಟೋ ? ಒಂದೇ ಬಳ್ಳಿಯ ಹೂಗಳಂತೆ ಮುಡಿಗಿಟ್ಟಳುಸುಮ್ಮನಿರದ ಶಕುನಿಗಳ ಕ್ಯಾತೆಗೆಹಣ್ಣಾಗಿದ್ದಾಳೆ ಪುಪ್ಪಸನೆಂಬ ಪುತ್ರರಕ್ಕಸರುಉಸಿರಾಡಲು ಬಿಡುತ್ತಿಲ್ಲ ವೆಂಟಿಲೇಟರ್ ಅಭಾವ ,ಕೆಲವೇ ಶುಶ್ರೂಷಕರಸಿಟ್ರಝೀನ್,ಡೊಲೊಗಳಿಂದ ತುಸು ಉಸುರುವಂತಹ ಗತಿಯಿದೆಬೇಕಾಗುವ ವೆಂಟಿಲೇಟರ್ ಸುಲಭದ್ದಲ್ಲ ‘ನಾವು ಭಾರತೀಯರು’ […]
ಅನುವಾದ ಸಂಗಾತಿ
ಹೆಚ್ಚೆಂದರೇನು ಮಾಡಿಯೇನು? ಕನ್ನಡ ಮೂಲ:ಶೋಭಾ ನಾಯ್ಕ .ಹಿರೇಕೈ ಕಂಡ್ರಾಜಿ. ಇಂಗ್ಲೀಷಿಗೆ:ಸಮತಾ ಆರ್. ಹೆಚ್ಚೆಂದರೇನು ಮಾಡಿಯೇನು? ಅವರಂತೆ ತಣ್ಣೀರಲ್ಲಿ ಮಿಂದುನಲವತ್ತೆಂಟನೆಯ ದಿನದವ್ರತ ಮುಗಿಸಿ,ಆ ಕೋಟೆ ಕೊತ್ತಲಗಳ ದಾಟಿಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿನಿನ್ನ ಬಳಿ ನಡೆದೇ….ಬಂದೆನೆಂದು ಇಟ್ಟುಕೋಹೆಚ್ಚೆಂದರೆ ನಾನಲ್ಲಿಏನು ಮಾಡಿಯೇನು? ‘ಬಾಲಕನಾಗಿಹೆ ಅಯ್ಯಪ್ಪ’ ಈಹಾಡು ಹಾಡು ಕೇಳಿ ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ..ನಿನಗೂ..ಯಾವ ಪರಕ್ಕೂ ..ಉಳಿದಿಲ್ಲ ನೋಡು ಎಷ್ಟೋ ವರ್ಷ ನಿಂತೇ ಇರುವೆಬಾ ಮಲಗಿಕೋ ಎಂದುಮಡಿಲ ಚೆಲ್ಲಿನನ್ನ ಮುಟ್ಟಿನ ಕಥೆಯನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯನಿನಗೆ ಹೇಳಿಯೇನು ಹುಲಿ […]
ವರ್ಧಮಾನ ಸಾಹಿತ್ಯ ಪ್ರಶಸ್ತಿ
ವರ್ಧಮಾನ ಸಾಹಿತ್ಯ ಪ್ರಶಸ್ತಿ ಡಾಕ್ಟರ್ ಬಾಳಾ ಸಾಹೇಬ ಲೋಕಾಪುರ ಮತ್ತು ಡಾ ರಾಜಶೇಖರ ಹಳೆಮನೆ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಕಳೆದ ಮೂವತ್ತೊಂಬತ್ತು ವರ್ಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಮೂಡಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ೨೦೧೯ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು ಅಥಣಿಯ ಡಾ ಬಾಳಾಸಾಹೇಬ ಲೋಕಾಪುರ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಉಜಿರೆಯ ಡಾ ರಾಜಶೇಖರ ಹಳೆಮನೆ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ . ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ […]