ಫಾಲ್ಗುಣ ಗೌಡ ಅಚವೆ

ಫಾಲ್ಗುಣ ಗೌಡ ಅಚವೆ ಕಾವ್ಯಗುಚ್ಛ

Swimmer, Sport, Swim, Water, Crawl

ಅವ್ಯಕ್ತ

Hands, World, Map, Global, Earth, Globe

ಎದುರಿಗಿದ್ದ ಚಿತ್ರವೊಂದು
ನೋಡ ನೋಡುತ್ತಿದ್ದಂತೆ
ಪೂರ್ಣಗೊಂಡಿದೆ

ಹರಿವ ನೀರಿನಂತ
ಇನ್ನೇನನ್ನೋ ಕೆರಳಿಸುವ
ಕೌತುಕದ ರೂಪ
ಮೂಡಿದಂತೆ ಮೂಡಿ ಮರೆಯಾದಂತೆ
ಆಡಿದಂತೆ ಆಡಿ ಓಡಿ ಹೋದಂತೆ
ಮೈ ಕುಲುಕಿ ಮನಸೆಳೆವ ಹೆಣ್ಣಿನಂತೆ
ಕತ್ತಲಾದರೂ ಅರಳಿಯೇ ಇರುವ
ಅಬ್ಬಲಿ ಹೂವಂತೆ
ಅದರ ಶೋಕಿ ಆಕರ್ಷಣೆ
ಒಳ ಮಿನುಗು

ಅಚ್ಚರಿಯೆಂದರೆ
ಅದರ ಹಿಂದೊಂದು
ಅದರದೇ ರೂಪ
ಸದ್ದಿಲ್ಲದೇ ಅಚ್ಚಾದಂತೆ
ಮಾಡಿದೆ
ಪರಕಾಯ ಪ್ರವೇಶ!


ದಂಡೆಯಲ್ಲಿ

Dirty river with river bank. On one side and tree on another. nature. natural. wild royalty free stock photo

ಎಲ್ಲ ನೆನಪುಗಳ ಮೂಟೆ ಕಟ್ಟಿ
ಬಾವಿಗೆಸೆದಂತೆ
ಬಾಕಿ ಇರುವ ಲೆಖ್ಖವನ್ನೂ
ಚುಕ್ತಾ ಮಾಡದೇ
ಅಲ್ಲೆಲ್ಲೋ ಮೌನ ದೋಣಿಯಲ್ಲಿ
ಪಯಣ ಹೊರಟೆ
ಒಸರುವುದು ನಿಂತ ನಲ್ಮೆಯೊಸಗೆಯ ಮನಸು
ನೀರವ ನಿರ್ವಾತ ನಿರ್ವಾಣದೆಡೆಗೆ
ಕೊಂಡೊಯ್ದಿದೆ

ದಂಡೆಯಲಿ ಮುಸುಕುವ
ಉಸುಕಿನಲೆಯಲಿ ಕುಳಿತು
ಕಣ್ಣು ಮುಟ್ಟುವವರೆಗೂ ನೋಟ
ಬರವ ಕಾಯುತ್ತಿದೆ
ನೀ ಸಿಕ್ಕ ಸಂಜೆಯ ರಂಗು ನೋಡುತ್ತ

ಅಲ್ಲಿ ನಿನ್ನ ಹೆಜ್ಜೆಗಳು ಅಚ್ಚಾಗಿವೆಯೆಂದು
ನಾ ಹೆಜ್ಜೆಗಳನಿಡುತ್ತಿರುವೆ ಪ್ರತಿದಿನ
ಅದೇ ಹಳೆಯ ಪ್ರೀತಿ ಗಳಿಗೆಗಳ ಜೊತೆಗೆ

ನಡೆವ ಹೆಜ್ಜೆಗಳ ಬೆರಳುಗಳಿಗೆ
ಒಂದು ದೃಷ್ಟಿ ದಿಕ್ಕಿರುತ್ತದಂತೆ?
ಮಂದವಾಗಿದೆ ದೃಷ್ಟಿ ಮುಂದೇನು ಕಾಣದೇ?
ದಿಕ್ಕೆಟ್ಟ ಒಲವಿನೊಡಲು
ಕವಲೊಡೆದ ದಾರಿಗಳಲ್ಲಿ
ಮುಸುಗುತ್ತಿದೆ

ಪ್ರತಿ ಸಂಜೆ ನನ್ನ ಎದೆ ದಂಡೆಯಲ್ಲಿ
ನೀ ನಡೆದ ಹೆಜ್ಜಗಳ ಹುಡುಕುತ್ತ
ಚಿನ್ನದ ಗೆರೆಗಳ ಅಂಚಿನಲ್ಲಿ
ದೂಡುತ್ತಿದ್ದೇನೆ ದಿನಗಳ
ಬಯಕೆಗಳ ಬದಿಗೊತ್ತಿ
ಉಸಿರು ಬಿಗಿ ಹಿಡಿದು!


ನಡೆದಾಡದ ಮರ

Field maple tree isolated on white. Background royalty free stock photo

ಮಾಂಸಲದ ಮೈಯಲ್ಲಿ
ಬಯಕೆ ತೀರದ ತೊಗಲು
ಹರಿವ ರಕುತದ ಮೇಲ್ತಳಕಿನ ತುಂಬ ಅಸಹ್ಯ ಕೊಳಕು

ದೃಷ್ಟಿ ನೇರಾ ನೇರ
ತಾನು ತನ್ನದು ಪಟ್ಟಭದ್ರ
ಕನಸುಗಳ ಗೊಂದಲಪುರ

ನಡೆವ ಅಡಿಗಡಿಗೂ ಸ್ವಾರ್ಥದಡಿಗಲ್ಲಿಡುವ
ಮನುಜನಲಿ ಈಗ ಮನಸಿಲ್ಲ

ಸುಖದ ನರಳಿಕೆಯ ನಲುಗುವುಸಿರಲ್ಲಿ
ತಿಲಮಾತ್ರವೂ ಧ್ಯಾನದರಿವಿಲ್ಲ!
ನೀನು ನಡೆದಾಡೋ ಮರವಲ್ಲ!!

ಮರವೋ ನಿಸ್ವಾರ್ಥದಾಗಸ
ಹಸಿರು ಹೂ ಹೀಚು ಕಾಯಿ
ಹಣ್ಣಲ್ಲೂ ನರಳಲ್ಲೂ
ವರ ಕೊಡುವ ಧರ್ಮ
ತಂಪೆರೆವ ಕರ್ಮ
ಎಲ್ಲೋ ಬಿದ್ದ ಮಳೆಯ ಮಣ್ಣ ವಾಸನೆ
ತಂಬೆಲರ ಹಿತ ಸ್ಪರ್ಶಕೆ
ಅಲೆವ ಎಲೆ ಎಲೆಗಳಲಿ
ಸಂತೃಪ್ತ ಬಿಂಬ

ಬಯಲು ಬೆಟ್ಟಗಳಲ್ಲಿ
ಜೀವಂತಿಕೆ ಹಿಡಿದಿಟ್ಟು
ಸದಾ ಉಸಿರೂಡುವ ಮರವೇ
ನೀನು ನಡೆದಾಡದ ಮನುಷ್ಯ!!

*****************************

8 thoughts on “ಫಾಲ್ಗುಣ ಗೌಡ ಅಚವೆ

  1. ಬಿನ್ನ ಬಿನ್ನ ವಸ್ತು ನಿರೂಪಣೆ ದಾಟಿ ಎಲ್ಲವೂ
    ಚಂದ….ಶುಭವಾಗಲಿ

  2. ‘ ಅವ್ಯಕ್ತ ‘ ಕವನದ ತಲೆಬರಹದಂತೆ ಅದರ ಒಟ್ಟಾರೆ ಆಶಯ ಅಥವಾ ಭಾವನೆ ವ್ಯಕ್ತವಾಗಿದೆ ಉಳಿದುಬಿಟ್ಟಿದೆ .
    ಇನ್ನು ನದಿಯ ಎರಡು ದಂಡೆಗಳು ಯಾವ ಕಾಲಕ್ಕೂ ಒಂದಾಗಿ ಅಂದರೆ ಏಕವಾಗಿ ಸುಖಿಸದು . ಆದ್ದರಿಂದ ‘ ದಂಡೆಯಲ್ಲಿ ‘ ವಿರಹವೇ ಮೇಳವಿಸಿರುತ್ತದೆ . ಇನ್ನು ‘ ನಡೆದಾಡದ ಮರ ‘ ವನ್ನು ಕವಿ ನಡೆದಾಡದ ಮನುಷ್ಯ ಎಂದಿದ್ದಾರೆ . ಅಂದರೆ ಮನುಷ್ಯನ ಸ್ವಾರ್ಥ ಪರಂಪರೆಯನ್ನು ಮರಕ್ಕೆ ಆರೋಪಿಸುತ್ತಾರೆಯೇ ಅರಿವಾಗುತ್ತಿಲ್ಲ. ಕವನದ ಫಲವತ್ತತೆ…..?
    ಆದರೆ ಒಟ್ಟಾರೆಯಾಗಿ ಭಾಷೆ ಮತ್ತು ಶೈಲಿಯ ಕಾರಣದಿಂದ ‘ ಫಾಲ್ಗುಣ ಗೌಡರ ‘ ಕವಿತೆಗಳು ಓದುಗರನ್ನು ಒಂದು ಚಣ ಸೆಳೆದುಕೊಳ್ಳುತ್ತದೆ .

  3. ಎಲ್ಲಾ ಕವಿತೆಗಳು ತುಂಬಾ ಚೆನ್ನಾಗಿದೆ

Leave a Reply

Back To Top