ವರ್ಧಮಾನ ಸಾಹಿತ್ಯ ಪ್ರಶಸ್ತಿ

ವರ್ಧಮಾನ ಸಾಹಿತ್ಯ ಪ್ರಶಸ್ತಿ

ಡಾಕ್ಟರ್ ಬಾಳಾ ಸಾಹೇಬ ಲೋಕಾಪುರ ಮತ್ತು ಡಾ ರಾಜಶೇಖರ ಹಳೆಮನೆ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ

ಕಳೆದ ಮೂವತ್ತೊಂಬತ್ತು ವರ್ಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಮೂಡಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ೨೦೧೯ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು ಅಥಣಿಯ ಡಾ ಬಾಳಾಸಾಹೇಬ ಲೋಕಾಪುರ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಉಜಿರೆಯ ಡಾ ರಾಜಶೇಖರ ಹಳೆಮನೆ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ .

ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ರೂ .ಇಪ್ಪತ್ತೈದು ಸಾವಿರ ಮತ್ತು ವರ್ಧಮಾನ ಉದಯೋನ್ಮುಖ ಪ್ರಶಸ್ತಿಗೆ ರೂ. ಹದಿನೈದು ಸಾವಿರಗಳ ಗೌರವ ಸಂಭಾವನೆ ಇದ್ದು ತಾಮ್ರ ಪತ್ರದ ಜೊತೆ ಸನ್ಮಾನವನ್ನು ಇವು ಒಳಗೊಂಡಿವೆ
ಈಚೆಗೆ ಮೂಡಬಿದ್ರೆಯಲ್ಲಿ ಪೀಠದ ಕಾರ್ಯಾಧ್ಯಕ್ಷರಾದ ಎಸ್.ಡಿ. ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಾದ್ಯಂತದಿಂದ ಬಂದ ಶಿಫಾರಸುಗಳನ್ನು ಆಧರಿಸಿ ಡಾಕ್ಟರ್ ಎಸ್ ಪಿ ಪದ್ಮಪ್ರಸಾದ್ ಡಾಕ್ಟರ್ ಬಿ. ಜನಾರ್ದನ ಭಟ್ ಮತ್ತು ವಿಭಾವರಿ ಭಟ್ ಅವರು ನೀಡಿದ ತೀರ್ಪಿನ ಆಧಾರದ ಮೇರೆಗೆ ಈ ಇಬ್ಬರ ಜೀವಮಾನದ ಸಾಧನೆಯ ಆಧಾರದಲ್ಲಿ ಈ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ ನಾ ಮೊಗಸಾಲೆ ತಿಳಿಸಿದ್ದಾರೆ.


ಪರಿಚಯ
ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿಯ ಶಿರಹಟ್ಟಿಯವರಾದ ಬಾಳಾ ಸಾಹೇಬರು ಭೂಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು ಮತ್ತು ಹಂಪಿ ವಿವಿಯಿಂದ ಪಿಎಚ್ ಡಿ ಪಡೆದವರು. ಬಾಗಲಕೋಟೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು. ಕನ್ನಡದ ಮಹತ್ವದ ಕತೆಗಾರ ಮತ್ತು ಕಾದಂಬರಿಕಾರರು ಮತ್ತು ವಿಮರ್ಶಕರು ಎಂದು ಮಾನ್ಯರು. ಅವರಿಗೆ ಈಗಾಗಲೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಚದುರಂಗ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ ಗಳಗನಾಥ ಕಾದಂಬರಿ ಪ್ರಶಸ್ತಿ ಮತ್ತು ಮಾಸ್ತಿ ಕಾದಂಬರಿ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ .

ಡಾ ರಾಜಶೇಖರ ಹಳೆಮನೆ

ಡಾ ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕಥೆಗಾರ. ಅಪರೂಪದ ಒಳನೋಟಗಳುಳ್ಳ ವಿಮರ್ಶಕರೆಂದು ಮಾನ್ಯರು ಅವರು ಈ ತನಕ ಪ್ರಕಟಿಸಿದ ಮೂರು ಕೃತಿಗಳಿಂದ ಭರವಸೆಯ ಲೇಖಕರೆಂದು ಗುರುತಿಸಲ್ಪಟ್ಟಿದ್ದಾರೆ. ವಿಜಯ ಕರ್ನಾಟಕ ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಅವರು ಬಹುಮಾನಿತರಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ ಕೇಂದ್ರ ಸಾಹಿತ್ಯ ಅಕಾಡೆಮಿಯು ಸಂಯೋಜಿಸಿದ ಸಮಾವೇಶದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

                                 ಡಾ ನಾ ಮೊಗಸಾಲೆ 
                                ಪ್ರಧಾನ ನಿರ್ದೇಶಕರು.

Leave a Reply

Back To Top