ಕಾವ್ಯಯಾನ

ಪ್ರೀತಿಯೆಂದರೆ..

Roses, Flowers, Bouquet, Love, Nature

ವಿಶಾಲಾ ಆರಾಧ್ಯ

ಈ ಪ್ರೀತಿಯೆಂದರೆ ಹೀಗೇನೇ
ಒಮ್ಮೆ ಮೂಡಿತೆಂದರೆ ಮನದಿ
ಸರ್ರನೆ ಧಮನಿಯಲಿ ಹರಿದಾಡಿ
ಮನಸ ಕದವ ತೆರೆದು
ಕನಸ ತೂಗು ಬಲೆಯಲಿ
ಜಮ್ಮನೆ ಜೀಕುವ
ಜೋಕಾಲಿಯಾಗುತ್ತದೆ..!!

ಈ ಪ್ರೀತಿಯೆಂದರೆ ಹೀಗೇನೇ
ಹರಿವ ಹೊನಲಂತೆ ಕಲ್ಲೇನು
ಮುಳ್ಳೇನು ಹಳ್ಳಕೊಳ್ಳವ ದಾಟಿ
ಪರಿಧಿ ಪಹರೆಯ ಕೊತ್ತಲ ದಾಟಿ
ಸೇರಿ ಕುಣಿಯುತ್ತದೆ ಮಾನಸ
ಸರೋವರದ ಅಲೆಗಳ ಮೀಟಿ..!!

ಪ್ರೀತಿ ಎಂದರೆ ಹೀಗೇನೇ
ಕಂಗಳ ಬೆಸುಗೆಗೆ ಕಾವಾದ ಹೃದಯದೆ
ಕಾಪಿಟ್ಟು ಹೆಪ್ಪಾದ ಮುಗಿಲಿನಂತೆ
ಕಾದಲಿನ ತುಡಿತಕೆ ಒಮ್ಮೆ ಸ್ಪಂದನಿಸಿ
ಕೂಡಿತುಂಬಿದ ಮುಗಿಲು ಸುರಿವ ವರುಣಧಾರೆಯ ಮುತ್ತ ಹನಿಗಳಂತೆ..!!

*****************

3 thoughts on “ಕಾವ್ಯಯಾನ

Leave a Reply

Back To Top