ಅಸ್ಪೃಶ್ಯರಾಗಿದ್ದೇವೆ!

ನಾವೆಲ್ಲರೂ ಈಗ ಸಮಾನರಾಗಿದ್ದೇವೆ ನಾಲ್ಕು ಗೋಡೆಗಳ ನಡುವೆ ಬಂಧಿಗಳಾಗಿದ್ದೇವೆ ನಮ್ಮ ತಪ್ಪಿಲ್ಲದೆಯೂ, ಬೇರೊಬ್ಬರ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವ ಬಲಿಪಶುಗಳಾಗಿದ್ದೇವೆ

ಕೆಸರುಂಡ ಕೈಗಳಿವು ಮೊಸರಿನ ಸಂಗವ ತೊರೆದಿವೆ ನಿಟ್ಟುಸಿರ ತಾಪ ಕೊನರುತ್ತಿದೆ ಬಿರುಕು ಬಿಟ್ಟ ಪಾದದಲಿ

ಬೆಳೆದ ಬೆಳೆಗೆ ಈಗಲಾದರೂ ಬೆಲೆ ಬರುವುದೆಂದು ಕಾದಿದ್ದೇನೆ ಕಷ್ಟ ಕೋಟಲೆ ಆಗಲಾದರೂ ಕಳೆವುದೆಂದು ನಿರೀಕ್ಷಿಸಿದ್ದೇನೆ

ರೈತ ಗಜಲ್ ಸಾವು ಸೋಯಿ ಯಾಗಿದೆ ಮನೆಯ ಹೊರಗೆ ಬಂದ ನೋಡುನಭದಿ ತೂತು ಆಗಿದೆ ನೀ ಬೀದಿಗಿಳಿದು ನೋಡು ಕೋಣೆ…

ಬಾಯ್ಬಿಟ ವಂಸುಧರೆಯ ಕಂಡ ಸೂರ್ಯ ಸಂಭ್ರಮಿಸುತಿಹನು ಒಳಗೊಳಗೆ ಬೆವರು ಬತ್ತುವ ಮುನ್ನ ಆಸೆ ಚಿಗುರೊಡೆಯಬಹುದೇನೋ ನೋಡಿ ಬರುವೆ

ನೇಸರನ ಕಿರಣ ಆಚೆ ಹೊಮ್ಮುವ ಮೊದಲು ಹೊರಡುವನು ನೇಗಿಲವ ಕಟ್ಟಿ ಹೊಲದಲಿ ಊಳುವನು ನೇಗಿಲಯೋಗಿ

ಮಣ್ಣಿನೊಳಗಡಗಿರುವ ಚಿನ್ನವದು ಸದಾ ನ್ಯೂನ ಬಣ್ಣ ಬದಲಿಸದಿರುವ ಹೊನ್ನಂತೆ ಬದುಕುವ ರೈತ

ಬರೀ ಮಾತಲ್ಲೇ ನಮ್ಮನ್ನು ಅಟ್ಟ ಹತ್ತಿಸಿ ಆಟ ನೋಡುತ್ತಿದ್ದಾರೆ ಜನ. ಇರುಳು ಶಶಿಯ ನಗು ನೋಡಿಯೇ ಸಮಾಧಾನ ಪಡುತ್ತಿರುವ ನಾ…

ಎತ್ತರದ ಹೊಸ್ತಿಲಿನಾಚೆಗಿನ ಅಂಗಳಕ್ಕೆ ಮನೆಯ ಸೊಸೆ ದಾಟಿ ಬಂದದ್ದೇ, ನಾಟಕದ ಮೊದಲ ದೃಶ್ಯಕ್ಕೆ ತೆರೆ ತೆರೆದಂತೆಯೇ, ಅಲ್ಲವೇ.

ಬರದ ಛಾಯೆಗೆ ಬುವಿ ಮೇಲೆ ಬಿರುಕಿನ ಚಿತ್ರ ಜೀವತಳೆದಿದೆ ವರುಣ ದೇವನ ಕೃಪೆಯಿಂದ ಅವತರಿಸಬೇಕಿದೆ ಹನಿ ಮುತ್ತು