ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬದ್ಧತೆ ಮೆರೆಯುವ..

ಪ್ರೋ ವಿಜಯಲಕ್ಷ್ಮಿ ಪುಟ್ಟಿ

Top view of decorative heart shaped confetti scattered around box on pink background for Valentines Day

ಗೆಳೆಯ
ನಮ್ಮಪ್ರೀತಿ
ಅದರ ರೀತಿ
ನಿಭಾಯಿಸುವ
ಒಲುಮೆಯಿಂದ
ಜತನದಿಂದ
ಪತನವಾಗದಂತೆ ..
ನೆನಪಿಸಿಕೋ ನನ್ನನ್ನ
ನನ್ನ ನೆನಪಿನ ಲೋಕಕ್ಕೆ
ಮೇಲು ಹೆಜ್ಜೆ ಇರಿಸು
ನನ್ನ ಎಲ್ಲ ಖುಷಿ ನಿನ್ನಿಂದಲೇ ಇರದಿದ್ದರೂ ನಾನು ಖುಷಿಯಿಂದ ನೀನು ಮಾತ್ರ ದುಖಿ ಬೇಡ
ನನ್ನ ಮುಖದ ನಗು
ನಿನ್ನ ಬಳುವಳಿ
ನನ್ನ ಸುಖದುಃಖದ
ಹರಿಕಾರ ನೀನು
ನಿನ್ನಿಂದ ಮುನಿಸಿದರೆ ಮುದುರಿಕೊಳ್ಳಬೇಡ ಮನಸು ..
ಒಮ್ಮೊಮ್ಮೆ ಪ್ರೀತಿ
ತುಸು ಹಟಮಾರಿ
ಮನಸ್ಸು..
ಮನಸ್ಸುಗಳ
ದೂರ ಬೇಡ
ಸಾಗಬೇಕಿದೆ ಬಲುದೂರ ಹಾದಿ
ನಮ್ಮ ನಮ್ಮ ವಚನ
ಪರಿಪಾಲಿಸುವ
ಬದ್ಧತೆಗೆ ಪkkaಗೋಣ
ಸುಂದರ ನಿನ್ನೊಂದಿಗೆ ಜೀವನ ಪಯಣ
ನೆನಪಿಸಿಕೋ ನನ್ನ
ನಸುನಗುವೆ ಇನ್ನ ….

******************

About The Author

Leave a Reply

You cannot copy content of this page

Scroll to Top