ಗಜಲ್

ಗಜಲ್

ಶಾಲಿನಿ ರುದ್ರಮುನಿ

ಬೇಕು ಬೇಡಗಳಾಸೆಗಳ ತೊರೆದು ಹಿಡಿದಿರುವೆ ನೀಲಿ ಕೊಡೆ
ಬಿಸಿಲ ಮಳೆಯ ಸೋಜಿಗವ ನೆನೆದು ಹಿಡಿದಿರುವೆ
ನೀಲಿ ಕೊಡೆ,

ಬಂದಾರು ಬರುವರು ನಿಂದಾರು ಅರೆಗಳಿಗೆ ಬಾಳ
ಬಯಲಲಿ
ಬೇಕಾದವರಿಗಾಗಿ ಬೇಕೆಂದು ಹಿಡಿದು ಕಾದಿರುವೆ
ನೀಲಿ ಕೊಡೆ

ಮೌನ ಬಂಡಿಯ ತುಂಬಾ ಪ್ರೀತಿ ಬತ್ತಳಿಕೆಯ ಲಹರಿಯಲಿ
ಸಹನೆಯ ಬಯಕೆ ಬಸಿರ ಚಿಗಿದು ಅರಳಿಸಿರುವೆ
ನೀಲಿ ಕೊಡೆ

ಕದಿಯದ ಒಲವ ನಕ್ಷತ್ರ ಬಾಳ ಬಾಂದಳದ
ಹೊಳೆಯಲಿ
ಮಧುರದಾಲಾಪನೆಗೆ ಮಿಡಿದು ಚಿಮ್ಮಿಸಿರುವೆ
ನೀಲಿ ಕೊಡೆ,

ಭಗ್ನವಾಗದ ಹಗಲಿರುಳ ಮಾತು ಮೌನದೊಲವ
ಪೂಜೆಯಲಿ
ಶಾರು ಒಲವ ದನಿಪದಕೆ ಮಣಿದು ಬಿಚ್ಚಿರುವೆ
ನೀಲಿ ಕೊಡೆ…

**************************

One thought on “ಗಜಲ್

  1. ನೀಲಿಕೊಡೆ ಗಜಲ್ ಪ್ರಕಟಸಿದ ಗೌರವಾನ್ವಿತ ಸಂಗಾತಿ ಪತ್ರಿಕ ಬಳಗದ ಸಂಪಾದಕೀಯರಿಗೆ ಹೃತ್ಪೂರ್ವಕವಾದ ಧನ್ಯವಾದಗಳು…

Leave a Reply

Back To Top