ಕವಿತೆ
ಬಿಡುಗಡೆ
ಪ್ರೊ.ರಾಜನಂದಾ ಘಾರ್ಗಿ
ಭಾವಗಳ ಬಡತನವಿಲ್ಲ
ವಿಚಾರಗಳ ಕೊರತೆಯಲ್ಲ
ಬರಿ ಅಸಹಾಯಕತೆ
ಪ್ರತಿರೋಧದ ಕೊರತೆ
ಎತ್ತಿ ನೀಡುವ ಕೈಗಳಲ್ಲಿ
ಮೌಲ್ಯಗಳ ಸಂಕೋಲೆ
ಎದ್ದುಬರಲು ಕಾಲುಗಳಲ್ಲಿ
ಜವಾಬ್ದಾರಿಗಳ ಬೇಡಿ
ಸುತ್ತಲೂ ಮನುಸ್ಮೃತಿ
ಬರೆದ ಲಕ್ಮಣರೇಖೆ
ಜ್ವಾಲೆಗಳಾಗಿ ಉರಿಯುತ
ಕಾಲುಗಳ ಸುಡುತಿದೆ
ಎದುರಿನಲಿ ತುಂಡಾದ
ಮಾನವೀಯತೆ ನರಳುತಿದೆ
ಸಾಮಾಜಿಕ ಕಟ್ಟಳೆಗಳ
ಹರಿತ ಖಡ್ಗ ಪ್ರಹಾರಕ್ಕೆ
ಸಬಲೀಕರಣದ ಮಂತ್ರ
ಘೋಷಣೆಗಳ ಭಾಷಣಗಳ
ಬುರುಡೆಗಳು ಉರುಳುತ್ತಿವೆ
ಮರಿಚಿಕೆಗಳು ಕೈ ಬೀಸುತ್ತಿವೆ
ಎಟುಕಿ ಮಾಯವಾಗುತ್ತಿರುವ
ಬಿಡುಗಡೆಯನರಸುತ
ನಡೆದಿರುವೆ ಬುದ್ದ ಬಸವಣ್ಣರೆಡೆಗೆ
ಗಾಂಧಿಜಿಯ ಸ್ವಾತಂತ್ರದೆಡೆಗೆ.
Very nice thought
Very good
Super
Nice.
Great Nanda. Wonderfully presented