ನುಡಿ- ಕಾರಣ.

ನುಡಿ- ಕಾರಣ.

“ಅನುವಾದದ ಹಿಂದೆ …….”. ಯಲ್ಲಿ ಬರುವ, ಅವರದೇ ಮಾತುಗಳಲ್ಲಿ, ” ಅವರ ಕವಿತೆಗಳಲ್ಲಿ ನವಿರಾದ ಒಲವು ಇದೆ ವಿರಹವಿದೆ , ಯುದ್ಧದ ಉನ್ಮಾದವಿದೆ, ಬಡವರ,ಬವಣೆಯಿದೆ.ದೇಶಾಭಿಮಾನ ವಿದೆ.ಕವಿತೆ ನಮ್ಮನ್ನು ಹಿಡಿದಿಡುತ್ತದೆ.ಕಾವ್ಯ ದೋಣಿಯ ಪಯಣಿಗರು”. ಎನ್ನುವ ಸಾಲುಗಳು, ಕವಿತೆಗಳನ್ನು ಓದುವ , ಓದುಗರ ಸಾಲುಗಳೂ ಆಗಿಬಿಡುತ್ತವೆ.

ರಾಕ್ಷಸ ಸಂಹಾರಕ್ಕೆ ವೀರರಾದ ಬಾಲಕರನ್ನು ಕಳಿಸಿಕೊಡೆಂದು ಕೇಳಿದಾಗ ದಶರಥ ಮಹಾರಾಜ ಹೌಹಾರಿದ್ದನೆಂದೇ ರಾಮಾಯಣ ಹೇಳುತ್ತದೆ. ‘ಮಕ್ಕಳಿನ್ನೂ ಹಾಲುಗಲ್ಲದ ಹಸುಗೂಸುಗಳು, ನಾನೇ ಬರುವೆ, ಸೈನ್ಯ ತರುವೆ..‘ ಎಂದು ಚಡಪಡಿಸಿ ಬಡಬಡಾಯಿಸಿದ್ದ ಎಂದು ತಿಳಿದಾಗ, ಎಂಥಾ ರಾಜಾಧಿರಾಜ ಆದರೂ ಅಪ್ಪನೆಂಬ ಅಂತಃಕರಣ ಮೀರಲಾದೀತೇ ಎನಿಸುತ್ತದೆ.

ಗಜ಼ಲ್

ಗಜ಼ಲ್ ರಾಹುಲ ಮರಳಿ ನಿನ್ನ ನೋಟದಿ ನಶೆಯ ಅನುಭವಿಸುತಿರಲು ಮದಿರೆ ಬೇಕಾ ಸಖಿಮಧುಬಟ್ಟಲಿನ ಸುಖವು ನಿನ್ನ‌ ಅಧರದಲಿರಲು ಮದಿರೆ ಬೇಕಾ ಸಖಿ ಹುಣ್ಣಿಮೆ ಚಂದಿರನಂತೆ ಹೊಳೆವ ನಿನ್ನ ಸುಂದರ ಮೊಗವು ಕಣ್ಮುಂದಿದೆಏಕಾಂತದ ತಂಪಾದ ಹೊತ್ತಲಿ ನಿನ್ನೊಟ್ಟಿಗಿರಲು ಮದಿರೆ ಬೇಕಾ ಸಖಿ ಎರಡು ಕಾಮನ ಬಿಲ್ಲಿನ ನಡುವಿನ ನಾಸಿಕವು ಸಂಪಿಗೆಯಂತಿದೆರತ್ನದ ಮೂಗುತಿ ನಿನ್ನತ್ತ ಆಕರ್ಷಿಸುತ್ತಿರಲು ಮದಿರೆ ಬೇಕಾ‌ ಸಖಿ ಶಂಖುವಿನಂತಹ ಸುಂದರ ಕರ್ಣಗಳಲಿ ಓಲೆ ನಲಿದಾಡುತಿದೆಮನದ ಆಲಾಪನೆ ಕೇಳುವ ಕರ್ಣಗಳಿರಲು ಮದಿರೆ‌ ಬೇಕಾ ಸಖಿ ನಕ್ಷತ್ರದ ಹೊಳಪಿನಂತೆ ಹೊಳೆಯುವ […]

ಪರಿಪೂರ್ಣತೆ

ಕಾವ್ಯಯಾನ ಪರಿಪೂರ್ಣತೆ ಪ್ರೊ ರಾಜನಂದಾ ಘಾರ್ಗಿ ಕಾಣಲಿಲ್ಲ ಮುಖದಲ್ಲಿಇಲ್ಲ ಹೆಸರಲಿ ಆಕಾರದಲ್ಲಿಪದವಿ ಪ್ರಶಸ್ತಿ ಗಳಲ್ಲಿಹುಡುಕುತ್ತಿರುವೆ ನಿನ್ನನ್ನು…ನೀ ಬರೆದ ಕವನಗಳಲ್ಲಿಓದುವ ಪುಸ್ತಕಗಳಲ್ಲಿತೊರುವ ಚಿಂತನೆಗಳಲ್ಲಿಬರೆಯುವ ಲೇಖನಗಳಲ್ಲಿನೀನಾಡುವ ಮಾತುಗಳಲ್ಲಿನೀಡುವ ವ್ಯಾಖ್ಯಾನಗಳಲ್ಲಿಬೇಟಿಮಾಡಿದ ತಾಣಗಳಲ್ಲಿನೋಡಿದ ನೋಟಗಳಲ್ಲಿಬೆಳೆಸಿದ ತೋಟಗಳಲ್ಲಿಅರಳಿದ ಹೂವು ಗಳಲ್ಲಿಹೂವು ಬೀರುವ ಸುಗಂಧದಲ್ಲಿಸ್ನೇಹಿತರ ಗುಂಪುಗಳಲ್ಲಿಅಭಿಮಾನಿಗಳ ಬಳಗದಲ್ಲಿನಿನ್ನ ಸುತ್ತುವರೆದ ಪರಿಸರದಲ್ಲಿಸಮಗ್ರತೆಯ ಪರಿಪೂರ್ಣತೆಯಲ್ಲಿ *********************

ಮತಿ ಮೀರಿದೊಡೆ

ಬಿದ್ದ ಪೂರ್ವಾಪರಕೆ ಜಗದೊಳಗೆ ಮದ್ದಿಲ್ಲ
ಸದ್ದೆಷ್ಟೇ ಆದರೂ ಹೊದ್ದವರು ಎದ್ದಿಲ್ಲ..

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—43 ಆತ್ಮಾನುಸಂಧಾನ ಜಿ.ಸಿ. ಕಾಲೇಜಿನಲ್ಲೊಂದು ‘ಅಭಿನಯ ಮಂಟಪ’ ಅಂಕೋಲೆಯಲ್ಲಿ ಮಾನ್ಯ ದಿನಕರ ದೇಸಾಯಿ ಅವರ ನಾಯಕತ್ವದಲ್ಲಿ ಸ್ಥಾಪನೆಗೊಂಡ “ಕೆನರಾ ವೆಲ್‌ಫೇರ್ ಟ್ರಸ್ಟ್” ಎಂಬ ಶಿಕ್ಷಣ ಸಂಸ್ಥೆ ಜಿಲ್ಲೆಯಾದ್ಯಂತ ಹುಟ್ಟುಹಾಕಿದ ಜನತಾ ವಿದ್ಯಾಲಯಗಳೆಂಬ ಪ್ರೌಢಶಾಲೆಗಳು ಜಿಲ್ಲೆಯಲ್ಲಿ ಅಕ್ಷರ ಜ್ಯೋತಿ ಬೆಳಗಿಸುವ ಮಹತ್ವದ ಕಾರ್ಯಾಚರಣೆಗೆ ತೊಡಗಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾದದ್ದು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಒಂದು ಸುವರ್ಣಮಯ ಕಾಲಾವಧಿ. ಇದರ ಮುಂದಿನ ಹೆಜ್ಜೆಯಾಗಿ ಸ್ಥಾಪನೆಗೊಂಡದ್ದೇ ಅಂಕೋಲೆಯ ‘ಗೋಖಲೆ ಸೆಂಟನರಿ ಕಾಲೇಜ್’ ಎಂಬ […]

ಜುಲ್ ಕಾಫಿಯಾ ಗಜಲ್

ಕಾಮನೆಯ ಕಡಲಿನ ಭೋರ್ಗರೆತ ನಿಲ್ಲಿಸಲಾಗದು ಎಂಬುದೇನೋ ಸರಿ
ಒಂಟಿಯಾಗಿ ಮನವ ಭಾವದಲೆಯಲೇ ತೇಲಾಡಿಸಿ ನೀ ತಪ್ಪುಮಾಡಿದೆ ಮಿತ್ರ

ಧಾರಾವಾಹಿ ಆವರ್ತನ ಅದ್ಯಾಯ-34                                ಆವರ್ತನ ಅಧ್ಯಾಯ: 34 ಗುರೂಜಿಯವರು ತಾವು ಮಸಣದ ಗುಡ್ಡೆಯ ನಾಗಬನವನ್ನು ಜೀರ್ಣೋದ್ಧಾರಗೊಳಿಸಲು ಇಚ್ಛಿಸಿದ ಕಾರ್ಯಕ್ಕೆ ಸಂಬಂಧ ಪಟ್ಟ ಹೊಸ ವಿಚಾರವೊಂದನ್ನು ಇತ್ಯಾರ್ಥಗೊಳಿಸಲು ಮನಸ್ಸು ಮಾಡಿ ಫೋನೆತ್ತಿಕೊಂಡವರು, ‘ಓಂ ನಾಗಾಯ ನಮಃ…!’ ಎಂದು ಭಾವಪೂರ್ಣವಾಗಿ ಅಂದು, ‘ನಮಸ್ಕಾರ ರೋಹಿತ್ ಅವರೇ… ನಾವು ಏಕನಾಥ ಗುರೂಜಿಯವರು ಮಾತಾಡ್ತಿರೋದು ಹೇಗಿದ್ದೀರೀ ತಾವು…?’ ಎಂದು ವಿಚಾರಿಸಿದರು. ರೋಹಿತ್ ಈಶ್ವರಪುರದ ಒಬ್ಬ ಪ್ರಸಿದ್ಧ ಉರಗಪ್ರೇಮಿ. ಅವನು ತನ್ನ ನಾಡಿನ ಅಪೂರ್ವ ಉರಗಸಂತತಿಯನ್ನು ಸಂರಕ್ಷಣೆ ಮಾಡುತ್ತ ಬಂದವನಲ್ಲದೇ ಆ ಸರೀಸೃಪ […]

Back To Top