ಗಜಲ್
ಸರೋಜ ಪ್ರಶಾಂತಸ್ವಾಮಿ
ಹೊಂಗೆ ಹೂವಾಗಿ ಹೂಂಕರಿಸುವುದು ನಿನ್ನ ರೂಪ.
ಭೃಂಗದೊಲವಾಗಿ ಝೇಂಕರಿಸುವುದು ನಿನ್ನರೂಪ.
ಸಾಂಗದಲ್ಲಿ ಸಂಧಿಸಿ ಅಂಗ ಅಂಗವನು ಭಂಗಿಸಿ
ಬಂಗಾರದೆರಕ ಎರೆವುದು ನಿನ್ನರೂಪ.
ಶೃಂಗಾರ ದೂರಿನಲ್ಲಿ ಮಂದಾರ ಹೂವಿಗೆ
ಶ್ರೀಕಾರ ಹಾಡುವುದು ನಿನ್ನರೂಪ.
ಸಿಂಗಾರ ಸಿರಿ ನೂರು ಎಂಗಾರ ಸೇರಿದರು
ಸರಿಸಮನಾಗಿ ತೋರುವುದೇ ನಿನ್ನರೂಪ.
ಪರವೂರ ಜನರಲ್ಲ ಪರಿಪರಿಯಲಿ ಪೇರಿಸಿ
ಪರಾಂಬರಿಸೆ ಪಸರಿಸುವುದೇ ನಿನ್ನ ರೂಪ.
ಪರಮೇಶ ಈಶನ ಕರುಣೆಯ ಕೃಪೆಯೊಂದೆ
‘ಲೋಚನಸುತೆ’ಗೆ ತೋರುವುದು ನಿನ್ನ ರೂಪ
**********************
ಚಂದ
ಚೆಂದ ಬರೆದಿದ್ದೀರಿ…
Nice artical medam.
ಧನ್ಯವಾದಗಳು