ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜ಼ಲ್

ರಾಹುಲ ಮರಳಿ

photo of two champagner glasses on glass table with bokeh background

ನಿನ್ನ ನೋಟದಿ ನಶೆಯ ಅನುಭವಿಸುತಿರಲು ಮದಿರೆ ಬೇಕಾ ಸಖಿ
ಮಧುಬಟ್ಟಲಿನ ಸುಖವು ನಿನ್ನ‌ ಅಧರದಲಿರಲು ಮದಿರೆ ಬೇಕಾ ಸಖಿ

ಹುಣ್ಣಿಮೆ ಚಂದಿರನಂತೆ ಹೊಳೆವ ನಿನ್ನ ಸುಂದರ ಮೊಗವು ಕಣ್ಮುಂದಿದೆ
ಏಕಾಂತದ ತಂಪಾದ ಹೊತ್ತಲಿ ನಿನ್ನೊಟ್ಟಿಗಿರಲು ಮದಿರೆ ಬೇಕಾ ಸಖಿ

ಎರಡು ಕಾಮನ ಬಿಲ್ಲಿನ ನಡುವಿನ ನಾಸಿಕವು ಸಂಪಿಗೆಯಂತಿದೆ
ರತ್ನದ ಮೂಗುತಿ ನಿನ್ನತ್ತ ಆಕರ್ಷಿಸುತ್ತಿರಲು ಮದಿರೆ ಬೇಕಾ‌ ಸಖಿ

ಶಂಖುವಿನಂತಹ ಸುಂದರ ಕರ್ಣಗಳಲಿ ಓಲೆ ನಲಿದಾಡುತಿದೆ
ಮನದ ಆಲಾಪನೆ ಕೇಳುವ ಕರ್ಣಗಳಿರಲು ಮದಿರೆ‌ ಬೇಕಾ ಸಖಿ

ನಕ್ಷತ್ರದ ಹೊಳಪಿನಂತೆ ಹೊಳೆಯುವ ನಿನ್ನ ಅಕ್ಷಿಗಳ ತುಂಟಾಟ
ಹುದುಗಿದ ಮನ್ಮಥನ ಗುಣವ ಕೆರಳಿಸುತಿರಲು ಮದಿರೆ ಬೇಕಾ ಸಖಿ

ಇಬ್ಬರ ಬೆರಳುಗಳು ಬೆಸೆದು ಭಾವನೆಗಳ ಬಂಧ ಹೆಚ್ಚಿಸುತಿವೆ
ಪ್ರಿಯತಮೆಯು ಮೈಮನವ ಅರ್ಪಿಸುತಿರಲು ಮದಿರೆ ಬೇಕಾ ಸಖಿ

ಯೌವನದ ಶಾಖ ‘ಜೀವಕವಿಯ’ ರೋಮಗಳನೂ ರಂಗೇರಿಸುತಿದೆ
ಮನದ ಕಾಮನೆ ಪೂರೈಸುವ ರತಿ ಜೊತೆಗಿರಲು ಮದಿರೆ ಬೇಕಾ ಸಖಿ

*************************

About The Author

2 thoughts on “ಗಜ಼ಲ್”

  1. ಸೊಗಸಾದ ಒಲವಿನ ಚೆಲುವಿನ ಕಾವ್ಯ! ನಬೀಲಾಲ ಮಕಾನದಾರ್ ಸುರಪುರ

Leave a Reply

You cannot copy content of this page

Scroll to Top