ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಗುಜರಾತಿನ ವ್ಯಾಪಾರಿ ರತ್ನ ಪ್ರಭು ದಾಸ್ ಮತ್ತು ಮಲಯಾಳಂ ಉದ್ಯಮಿ ಅಮಲಾ ನಾಯರ್ ಇಬ್ಬರೂ ಮುಂಬೈನ ಒಂದು ಬಿಸಿನೆಸ್ ಸೆಮಿನಾರನಲ್ಲಿ ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡರು.  ಆಗ ಅವರಿಗೆ ಸ್ನೇಹ ಉಂಟಾಯಿತು.  ಅನಂತರ, ಅವರ ಒಳ ಮನಸ್ಸುಗಳು ತವಕದಿಂದ  ಆರ‍್ಷಿತಗೊಂಡವು.  ಅವರಲ್ಲಿ ಆ ಕ್ಷಣವೇ  ಪ್ರೇಮ ಅಂಕುರವಾಯಿತು. ಅದು ಇಷ್ಟಕ್ಕೆ ಮುಗಿಯಲಿಲ್ಲ, ಅವರಿಬ್ಬರ ಮನಸ್ಸುಗಳು ಪರಸ್ಪರ ಸಂಧಿಸಲು ತವಕ ಗೊಂಡವು.  ಈ ಪ್ರೇಮಾನುರಾಗಕ್ಕೆ ನಾಂದಿ ಹಾಡಲು ಅಮಲಾ ಮುಂದಾದಳು ಮತ್ತು ಪ್ರಭುದಾಸರಿಗೆ ಕರೆ ಮಾಡಿ, ತಾವಿಬ್ಬರೂ ಎಲ್ಲಿಯಾದರೂ ಸಂಧಿಸೋಣ ಎಂದು ಹೇಳಿದಳು.  ಆಗ ಆತ ಕೂಡ ಅದನ್ನೇ ಕಾಯುತ್ತಿದ್ದನೋ  ಏನೋ, ತಕ್ಷಣಕ್ಕೆ ಅಮಲಾಗೆ ಹೈದರಾಬಾದಿಗೆ ಬರಲು ಹೇಳಿದನು.  ಅಲ್ಲಿಯ ಶಾಹಿ ಹೋಟೆಲೊಂದರಲ್ಲಿ ಸೇರಿ, ಅವರಿಬ್ಬರೂ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡರು. ಅಲ್ಲಿ ಅವರು ಒಗ್ಗೂಡಿ, ಒಂದು ನಿರ‍್ಧಾರಕ್ಕೆ ಬಂದು, ತಮ್ಮ ಬಂಧುಗಳನ್ನು ಸಂಪರ್ಕಿಸಿ ಮತ್ತು ಅವರವರ ಸಂಬಂಧಿಕರು ಅಲ್ಲಿಗೆ ಬಂದು ಈ ಜೋಡಿಗೆ ಶುಭ ಹಾರೈಸಿದರು.  ಆಮೇಲೆ, ಅವರ ದಾಂಪತ್ಯ ಜೀವನ ಬೆಂಗಳೂರಿನಲ್ಲಿ ಸುಮಧುರದಿಂದ  ಚಾಲನೆಗೊಂಡು, ಅಲ್ಲಿಯೇ ಕೇಂದ್ರೀಕೃತವಾಯಿತು.  

ಅವರಿಬ್ಬರೂ ಬೆಂಗಳೂರಿನಲ್ಲಿಯೇ ಇದ್ದುಕೊಂಡು , ಗುಜರಾತ್ ಮತ್ತು ಕೇರಳದಲ್ಲಿಯ ತಮ್ಮ ತಮ್ಮ ವ್ಯವಹಾರ ಉದ್ಯೋಗಗಳನ್ನು ಆನ್ಲೈನನಲ್ಲಿ ನಡೆಸಿಕೊಂಡು ಹೋಗುತ್ತಾ ಇದ್ದರು. ಆನಂತರ ಅವರಿಬ್ಬರ ಒಡಂಬಡಿಕೆಯಂತೆ ಮತ್ತು ಸಮಾನ ಮನಸ್ಕತೆಯನ್ನು  ವ್ಯವಹಾರದಲ್ಲಿ ಮೂಡಿಸಿಕೊಂಡು,  ಅವರು ತಮ್ಮ ತಮ್ಮ ಯೋಜನೆಗಳನ್ನು, ಒಂದೇ ಸೂರಿನೆಡೆಗೆ ತಂದು ಕೊಂಡರು.  ಹಾಗಾಗಿ ಅವರಿಗೆ  ಬೇರೆ ಬೇರೆ ಕಡೆಗೆ ಇರುವ ಉದ್ಯಮಗಳನ್ನು  ನಡೆಸಿಕೊಂಡು ಹೋಗುವ ಪರಿಶ್ರಮ ಹೊರಟು ಹೋಗಿ, ಒಂದೆಡೆಯಲ್ಲೇ  ಉದ್ಯೋಗಗಳನ್ನು ನೋಡಿ ಕೊಳ್ಳುತ್ತಾ, ತಮ್ಮ ವೈವಾಹಿಕ ಜೀವನವನ್ನು ಸವಿಯಾಗಿ ಅನುಭವಿಸುತ್ತಿದ್ದರು. ಕಾಲ ಕ್ರಮೇಣ ಅವರಿಬ್ಬರ ಆದರದ ಪ್ರೇಮ ಜೀವನಕ್ಕೆ ಒಂದು ಮೆರುಗು ಮೂಡಿತು.  ಅದು ಏನೆಂದರೆ, ಅಮಲಾಳ ರ‍್ಭದಲ್ಲಿ ರತ್ನ ಪ್ರಭುದಾಸರ ವಂಶದ ಕುಡಿ ಸೇರಿಕೊಂಡಾಗ, ಅವರ ಆನಂದಕ್ಕೆ ಎಲ್ಲೇ  ಇಲ್ಲದ ಹಾಗಾಯಿತು.  ಅವರು ಮತ್ತು ಅವರ ಸಂಬಂಧಿಕರು ಈ ಶುಭ ಸಮಾಚಾರವನ್ನು ಕೇಳಿ ಹರುಷಗೊಂಡರು. 

ಆದರೆ, ಕಣ್ಣಿಗೆ ಗೋಚರಿಸದ ವಿಧಿಯ ಆಟವೇ ಬೇರೆ ಎಂಬುದು ಯಾರಿಗೂ ತಿಳಿಯದು. ಅದು ತನ್ನದೇ ಆದ ರೀತಿಯಲ್ಲಿ ಅಮಲಾಳ ಜೀವದಾಟವನ್ನು ಕೊಂಡೊಯ್ದಾಗ, ಅಮಲಾಳಿಗೆ ಕಠಿಣ ಪ್ರಸವವಾದರೂ, ಮುದ್ದಾದ ಹೆಣ್ಣು ಮಗು, ಹೊರ ಜಗತ್ತಿಗೆ ಬಂದಾಗ, ಅಮಲಾಳ ಪ್ರಾಣವನ್ನು ಕಸಿದುಕೊಂಡಿತು. ಈ ದುರ‍್ಘಟನೆಯಿಂದ ರತ್ನ ಪ್ರಭುದಾಸ್ ಅವರಿಗೆ ಮಾನಸಿಕವಾಗಿ ಆಘಾತವಾಯಿತು. ಅವರು ಬಹಳೇ ನೊಂದುಕೊಂಡರು. ಅಲ್ಲದೆ, ಜನಿಸಿದ ಹೆಣ್ಣು ಮಗು ತಾಯಿ ಇಲ್ಲದ ತಬ್ಬಲಿಯಾಯಿತು. ಆಗ ಅನಿವಾರ‍್ಯವಾಗಿ  ರತ್ನ ಪ್ರಭು ದಾಸ್ ಮಗುವನ್ನು ಪಾಲನೆ ಮಾಡಲು ಬಹಳೇ ಹೆಣಗಾಡತೊಡಗಿದರು.  ಅವರ ಸಂಬಂಧಿಗಳು ಅವರ ಆಪತ್ತಿನಲ್ಲಿ ಯಾರೂ ಘಾತಕವಾಗಿ  ಸುಳಿಯಲಿಲ್ಲ. ಹೀಗಾಗಿ, ಅವರು ಒಬ್ಬ ಆಯಾ ಅಹಲ್ಯಾಳನ್ನು ನೇಮಕಮಾಡಿ, ಆಕೆಗೆ ಕೈತುಂಬಾ ಸಂಬಳ ಮತ್ತು ಆಕೆಯ  ಜೀವನಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ನೀಡಿದರು.  ಆ ಮಗು ಅಹಲ್ಯಾ ಬಳಿಯೇ ಇದ್ದು, ಆಕೆಯೇ ತನ್ನ ತಾಯಿ ಎಂದುಕೊಂಡು ಹೊಂದಿಕೊಂಡಿತು.

ಅಹಲ್ಯಾ ತೀರಾ ಆಸೆ ಬುರುಕಿಯಾಗಿದ್ದಳು ಮತ್ತು ಮಗುವನ್ನು ಸರಿಯಾಗಿ ನೋಡಿ ಕೊಳ್ಳುತ್ತಿರಲಿಲ್ಲ.  ಅದು ರತ್ನ ಪ್ರಭುದಾಸರ ಗಮನಕ್ಕೆ ಬಂದಾಗ, ಮಗುವಿನ ಪಾಲನೆಗೆ ತಾತ್ಕಾಲಿಕ ಯೋಜನೆ ಸರಿ ಹೊಂದದೆಂದು, ಮರು ಮದುವೆ ಮಾಡಿಕೊಳ್ಳಲು ನರ‍್ಧರಿಸಿದರು.  ಆಗ ಅವರ ದೃಷ್ಟಿಗೆ ಅಖಿಲಾ ಶ್ರೀವಾತ್ಸವ ಕಂಡರು.  ರತ್ನಪ್ರಭುದಾಸರು ಅಖಿಲಾಗೆ ತಮಗೆ ಜೀವನ ಸಂಗಾತಿಯಾಗುವುದಕ್ಕಿಂತ ಹೆಚ್ಚಾಗಿ ತಮ್ಮ ಮಗುವಿಗೆ ತಾಯಿಯಾಗಲು ವಿನಮ್ರತೆಯಿಂದ ಕೋರಿದರು.  ಆಗ ಆಕೆ ಒಪ್ಪಿಗೆ ಕೊಟ್ಟಾಗ, ಅವರಿಬ್ಬರ ಮದುವೆ ಆಯಿತು.  ಆದರೆ, ಅಖಿಲಾಳ ಒಳ ದೃಷ್ಟಿಯೇ ಬೇರೆ ಆಗಿತ್ತು. ಆಕೆಗೆ ರತ್ನಪ್ರಭುದಾಸರ  ಧನ ಸಂಪತ್ತು ಬೇಕಿತ್ತೇ ವಿನಃ ಆ ಮಗು ಬೇಕಿರಲಿಲ್ಲ. ಒಂದು ದಿನ ಆಕೆ ತನ್ನ ಗಂಡನಿಗೆ ಹೀಗೆ ಹೇಳಿದಳು;
‘ನೋಡಿ, ಆ ಮಗು ನನ್ನ ಬಳಿ ಇರುವುದಿಲ್ಲ.  ಹಾಗಾಗಿ, ಅಷ್ಟಿಷ್ಟೋ ಹಣ ಕೊಟ್ಟು, ಅದರ ಕಾಳಜಿ ಮಾಡಲು, ಮತ್ತು ಚೆನ್ನಾಗಿ ಇರಲು ಕೆಲವು ದಿನ ಬಾಲಾಶ್ರಮದಲ್ಲಿ ಬಿಟ್ಟು ಬಿಡೋಣ’ ಎಂದಳು. ಆಗ ರತ್ನ ಪ್ರಭು ದಾಸರಿಗೆ ಬಹಳೇ ದುಃಖವಾಯಿತು. ಅವರು ಆಗ ಏನೂ ಹೇಳದೇ ಸುಮ್ಮನಾದರು. ಅಲ್ಲದೆ, ‘ತಾನು ಮರು ಮದುವೆಗೆ ಹೋಗಬಾರದಿತ್ತು’ ಎಂಬ ಅರಿವು ಆಗ ಅವರಿಗೆ ಮೂಡಿತು. 

ಅವರು ಸುಧರ‍್ಘವಾಗಿ  ಯೋಚನೆ ಮಾಡಿದಾಗ, ಅವರಿಗೆ ನೆನಪಾದದ್ದು, ಅಮಲಾಳ ಸಮೀಪದ ಸಂಭಂದಿಯಾದ ಮೀರಾ ಕೋಕಿಲನ್. ಆಗ ತಮ್ಮ ಮಗುವನ್ನು ಕರೆದುಕೊಂಡು ಅಲೆಪ್ಪಿಗೆ ಹೋದರು  ಅಲ್ಲಿ ಮೀರಾ ಕೋಕಿಲನ್. ಅವರನ್ನು ಭೇಟಿಯಾಗಿ, ತಮ್ಮ ದುಃಖ ತೋಡಿಕೊಂಡಾಗ ಆಕೆ ಅನಿವರ‍್ಯವಾಗಿ ಮೋಹನ್ ಕುಮಾರಿಯ ಜವಾಬ್ದಾರಿ ಪಡೆದಳು. ಆಕೆ ಎಷ್ಟು ಹಣ ಕೇಳಿದರೂ ಕೊಡುತ್ತೇನೆಂದು ಪ್ರಭು ದಾಸ್ ಹೇಳಿದಾಗ, ಆಕೆ ಆಸೆಗೆ ಒಳಗಾಗಲಿಲ್ಲ. ಆಕೆ ವಿಧವೆಯಾದುದ್ದರಿಂದ, ತನ್ನ ಭವಿತವ್ಯಕ್ಕೆ
ಮಗು ಆಸರೆಯಾಗಬಹುದೆಂಬ ಕಾರಣಕ್ಕಾಗಿ ಆಕೆ ಒಪ್ಪಿಕೊಂಡಿದ್ದಳಷ್ಟೇ !

ಈಗ ಪ್ರಭು ದಾಸ್ ತನ್ನ ಫರ‍್ಮಾ ವ್ಯಾಪಾರ ಉದ್ದಿಮೆಯನ್ನು ವಿಸ್ತಾರ ಮಾಡಿದರು. ಹಾಗಾಗಿ, ಅವರು ದುಬಾಯಿಗೆ ಹೋಗುವ ಪ್ರಸಂಗ ಬಂದು ಬಿಟ್ಟಿತು. ಆ ಸಮಯ ಹತ್ತಿರವಾದಾಗ ಅವರ ಎರಡನೇ ಹೆಂಡತಿ ಅಖಿಲಾಳನ್ನು ಕರೆದುಕೊಂಡೇ ದುಬಾಯಿಗೆ ಹೋಗಿಬಿಟ್ಟರು. ಯಾವಾಗಲಾದರೋ ಒಮ್ಮೆ ಮೋಹನ ಕುಮಾರಿಯ ನೆನಪಾಗಿ ದೂರವಾಣಿ ಕರೆ ಮಾಡಿ ಕ್ಷೇಮ ಸಮಾಚಾರ ತಿಳಿದುಕೊಳ್ಳುತ್ತಿದ್ದರು.  

ಇತ್ತ ಮೋಹನ ಕುಮಾರಿ ಬೆಳೆಯುತ್ತಾ  ಪ್ರಭುದ್ಧಕ್ಕೆ ಬಂದಳು. ಅವಳು ಈಗ ಎರಡನೆಯ ರ‍್ಷದ ಡಿಗ್ರಿ ಓದುತ್ತಿದ್ದಳು.  ಅವಳಿಗೆ ಯಾವುದೇ ಹಣದ ತೊಂದರೆ ಇರುತ್ತಿರಲಿಲ್ಲ. ಏಕೆಂದರೆ, ಆಕೆಗೆ ಸಾಕಾಗುವಷ್ಟು ಹಣವನ್ನು ಆಕೆಯ ಬ್ಯಾಂಕಿನ ಖಾತೆಯಲ್ಲಿ ಸದಾ 
ಜಮಾ ಇರುತ್ತಿತ್ತು. ತಾವಾದರೋ ಎರಡನೇ ಹೆಂಡತಿ ಮತ್ತು ಆಕೆಯಿಂದ ಜನಿಸಿದ ಎರಡು ಮಕ್ಕಳೊಂದಿಗೆ ಆರಾಮವಾಗಿ ಇದ್ದರು. ಅವರ ವ್ಯಾಪಾರದ ಉದ್ಯೋಗ ಕೂಡಾ ಎಗ್ಗಿಲ್ಲದೆ ಸಾಗಿತ್ತು. 

ಮೀರಾ ಕೋಕಿಲನ್ ಮಸಾಲೆ ಸಾಮಾನುಗಳನ್ನು ತಯಾರಿಸಿ ಸಗಟು ವ್ಯಾಪಾರ 
ಮಾಡುತ್ತಿದ್ದಳು. ಮೋಹನ ಕುಮಾರಿ ಮತ್ತು ಮೀರಾ ಕೋಕಿಲನ್ ಪರಸ್ಪರ ಹೊಂದಾಣಿಕೆಯಿಂದಲೇ ಇದ್ದರು. ಮೋಹನ ಕುಮಾರಿಗಾಗಿ ಅವಳ ತಂದೆ ಒಂದು ಲಾಡ್ಜಿಂಗ್ ಮತ್ತು ರೆಸ್ಟೋರೆಂಟ್ ಇರುವ ಹೋಟೆಲನ್ನು ಆಕೆಯ ಹೆಸರಿಗೆ ರ‍್ಗ ಮಾಡಿದ್ದರುಅದರ ಮ್ಯಾನೇಜರ್ ಮಧ್ಯ ವಯಸ್ಕ ಆದ್ಯನ್ ಪಣಿಕ್ಕರ್ ನೋಡಿಕೊಳ್ಳುತ್ತಿದ್ದರು. ಅವರು ಯಾವ ಮೋಸವಿಲ್ಲದೆಯೇ ವ್ಯವಹಾರ ಮಾಡಿ ಲಾಭವನ್ನು ಮೋಹನ ಕುಮಾರಿಗೆ 
ತಲುಪಿಸುತ್ತಿದ್ದರು. ಅಂದಾಜು ತಿಂಗಳೊಂದಕ್ಕೆ ಐವತ್ತು ಸಾವಿರ ಹೇಗೋ ಬರುತ್ತಿತ್ತು.  
ಹಾಗಾಗಿ, ಮೋಹನ ಕುಮಾರಿ ತನ್ನ ಅಭ್ಯಾಸದ ಕಡೆಗೆ ಲಕ್ಷ್ಯ ಕೊಟ್ಟು ಪದವಿಯನ್ನು 
ಮುಗಿಸಲು ಯತ್ನಿಸುತ್ತಿದ್ದಳು.

ಈಗ ಮೋಹನ ಕುಮಾರಿಗೆ ತನ್ನೊಬ್ಬ ಗೆಳತಿಯಿಂದ ತನಗಿಂತ ಒಂದು ರ‍್ಷ 
ಅಭ್ಯಾಸದ ಲ್ಲಿ ಮುಂದಿದ್ದ ಸದಾಶಿವ್ ತಾಂಬ್ರೆ ಎಂಬ ಯುವಕನ ಪರಿಚಯವಾಯಿತು. ಅವನು ತುಂಬಾ ಸಭ್ಯವಂತ ಮತ್ತು ಶೀಲವಂತನಾಗಿದ್ದನೆಂದು ಬಹಳೇ ಸ್ನೇಹಿತರು ಆಕೆಗೆ ಹೇಳಿದ್ದರು. ಈಕೆ ಕೂಡಾ ಆತನ ಜೊತೆಗೆ ಅಷ್ಟಕ್ಕಷ್ಟೇ ಮಾತಾಡುತ್ತಿದ್ದಳು. 
ಒಮ್ಮೆ ಆಕೆಗೆ ಆತನ ಜೊತೆಗೆ ಮುಕ್ತವಾಗಿ ಮಾತಾಡಬೇಕೆಂದೆನಿಸಿತು. ಆಗ ಸ್ನೇಹಿತೆ ಶೀಲಾಳ ಮೊರೆ ಹೋಗಿ, ಅವನನ್ನು ತಮ್ಮ ಹೋಟೆಲಿಗೆ ಬರುವಂತೆ ಹೇಳು ಎಂದಿದ್ದಳು. 
ಅವಳ ಸ್ನೇಹಿತೆ ಕೇಳಿದಳು;
‘ಏನು ಕಣೇ ಲವ್ವಾ ?’
‘ಹಾಗೇನೂ ಇಲ್ಲ.  ಆತನಿಗೆ ನಾನೂ ಕೂಡಾ ಸ್ನೇಹಿತೆಯಾಗಿ ಇರಬೇಕೆಂದನಿಸುತ್ತಿದೆ. ಇಲ್ಲಿ ಮಾತಾಡ ಬೇಕೆಂದರೆ ಮುಜುಗರ. ನಮ್ಮ ಹೋಟೆಲ್ ಆದರೆ ಮುಜುಗರಕ್ಕೆ ಅವಕಾಶ
ವಿಲ್ಲವಲ್ಲ ?; ಎಂದಳು. 
‘ಸರಿ’ ಎಂದು ಒಪ್ಪಿಕೊಂಡು ಆತನ ಮನ ಒಲಿಸಿ ಹೋಟೆಲಿಗೆ ಕಳಿಸಿದಳು. 
 
ಆ ಪ್ರಕಾರ ಮೋಹನ ಕುಮಾರಿ ತನ್ನ ಹೋಟೆಲ್ ಸಿಬ್ಬಂದಿಗೆ ಹೇಳಿ ಆ ದಿನದಂದು ಲಘು ಭೋಜನದ ವ್ಯವಸ್ಥೆ ಮಾಡಿದಳು. ಅಲ್ಲದೇ, ಒಂದು ರೂಮನ್ನು ಅಲಂಕೃತಗೊಳಿಸಿ 
ಆರ‍್ಷಣೀಯವಾಗಿ ಮಾಡಿದ್ದಳು. ಕೆಲವು ಸಮಯದ ನಂತರ,  ಸದಾಶಿವ ಆ ದಿನ ಹೋಟೆಲಿಗೆ ಆಗಮಿಸಿದ.  ಸ್ವಾಗತಕಾರರಲ್ಲಿ ಹೋಗಿ, ತಾನು ಮೋಹನಕುಮಾರಿಯವರ  ಸ್ನೇಹಿತ ಎಂದು ಹೇಳಿಕೊಂಡಾಗ, ಅವರು ಆತನನ್ನು ಮೋಹನಕುಮಾರಿಯ ಬಳಿ ಕರೆದು ಕೊಂಡು ಹೋದರು. ಅವನನ್ನು ನೋಡಿದ ಆಕೆ ತುಂಬಾ ಖುಷಿಗೊಂಡಳು. ಆತನನ್ನು 
ತಾನೇ  ಸ್ವಾಗತಿಸುತ್ತಾ ಬರಮಾಡಿಕೊಂಡಳು. 
‘ಬನ್ನಿ ಸದಾಶಿವ, ಇದೇ ನನ್ನ ಹೋಟೆಲ್.  ಇದರಲ್ಲಿ ಲಾಡ್ಜ್ ಮತ್ತು ರೆಸ್ಟೋರೆಂಟ್ 
ಎರಡೂ ಇವೆ. ಮೇಲೆಲ್ಲಾ ಹೋಗಿ ನೋಡೋಣವಾ ?’ ಎಂದು ಕೇಳಿದಳು. 
‘ಬೇಡ.. ಇಲ್ಲೇ ಎಲ್ಲಾದರೂ ಕುಳಿತು ಕೊಳ್ಳೋಣ’ ಎಂದ.  
‘ನೋ.. ನೋ.. ನಿಮಗಿಲ್ಲಿ ಸರಿ ಹೋಗುವುದಿಲ್ಲ.  ಅಲ್ಲಿ ಮೇಲೊಂದು ರೂಮು ಇದೆ. ನಿಮ್ಮ ಸಲುವಾಗಿ ಸಿದ್ಧ ಪಡಿಸಿದ್ದೇನೆ. ಅಲ್ಲಿಗೆ ಹೋಗೋಣ’ ಎಂದಳು. 
‘ಬೇಡ ಮೋಹನ ಕುಮಾರಿ, ಇಲ್ಲೇ ಎಲ್ಲಿಯಾದರೂ ಒಂದು ಹತ್ತು ಹದಿನೈದು ನಿಮಿಷ 
ಮಾತಾಡಿ ಹೊರಟು ಹೋಗುತ್ತೇನೆ’ ಎಂದ. 
‘ಅಯ್ಯೋ, ಹಾಗೆ ಹೇಳಿದರೆ ಹೇಗೆ ? ಇದು ನಮ್ಮ ಹೋಟೆಲ್. ಇಲ್ಲಿ ಎಲ್ಲಾ ತಿಂಡಿ 
ತಿನಿಸುಗಳು ಸಿಗುತ್ತವೆ. ಆರಾಮಾಗಿ ಸಂಜೆಯವರೆಗೆ ಕಾಲ ಕಳೆಯೋಣ ‘ ಎಂದಳು.
‘ಅದೆಲ್ಲಾ ಏನೂ ಬೇಡ.  ನಾನು ಬರುವಾಗ ಭೋಜನ ಮಾಡಿಕೊಂಡೇ ಬಂದಿದ್ದೇನೆ.  
ನನಗೆ ಅವ್ಯಾವುದರ ಅವಶ್ಯಕತೆ ಇಲ್ಲ’ ಎಂದ. 
‘ನೀವು ಹೀಗೆ ಹೇಳಿದರೆ ನನಗೆ ಬೇಜಾರು ಆಗುತ್ತೆ’ ಎಂದಳು. 
‘ಹೌದು, ನೀವು ಇಲ್ಲಿಗೆ ನನ್ನನ್ನು ಕರೆದದ್ದಾದರೂ ಏಕೆ ? ಏನು ವಿಷಯ ?’ ಎಂದು 
ಕಾತುರದಿಂದ ಕೇಳಿದ. 
‘ಏನಿಲ್ಲಾ ನಿಮ್ಮಂಥಹವರು ನನಗೆ ಸ್ನೇಹಿತರಾಗಬೇಕು ಎಂಬುದೇ ನನಗೆ ಇಚ್ಛೆ’ ಎಂದಳು. 
‘ಅರೆ ! ಇದೇನಿದು. ಈಗಾಗಲೇ ಅದು ಆಗಿದೆಯಲ್ವೇ ?’
‘ಅದು ಬರೀ ಹಾಯ್.. ಹಾಯ್. ಅಷ್ಟೇ’
‘ಅಷ್ಟೇ ಸಾಕಲ್ವೇ ? ಒಬ್ಬರನ್ನೊಬ್ಬರು ನೋಡಿದಾಗ ಸಂತೋಷ ಮೂಡ ಬೇಕು’.
‘ಬಹುಶಃ  ಅದು ನಿಮಗೆ ಹಾಗೆ ಅನ್ನಿಸಿರಬಹುದು. ಆದರೆ, ನನಗೆ ಮಾತ್ರ ಮನಸ್ಸುಗಳು ಹತ್ತಿರಸೇರಿದಾಗ ಮಾತ್ರ ಸ್ನೇಹತ್ವ ಹುಟ್ಟುತ್ತದೆ ಎಂದಂದು ಕೊಂಡಿದ್ದೇನೆ.’  
‘ಅಲ್ಲೇ ಕಾಲೇಜು ವಾತಾವರಣದಲ್ಲಿಅದನ್ನು ಕಂಡುಕೊಳ್ಳಬಹುದಲ್ಲವೇ ?’
‘ಅಲ್ಲಿ ಕೆಲವೊಂದು ಪ್ರತಿಬಂಧಗಳಿವೆ. ಇಲ್ಲಿಯಾದರೋ  ಮುಕ್ತ ಖಾಸಗಿ ವಾತಾವರಣ ಇದೆ.’
‘ಮೋಹನಾ..ಹಾಗೆ ಏಕೆ ಯೋಚಿಸುತ್ತೀರಿ. ಮನಸ್ಸುಗಳಿಗೆ, ಯಾವ ಸ್ಥಳಗಳೂ ಮುಖ್ಯವಲ್ಲ. 
ಒಬ್ಬರಿಗೊಬ್ಬರು ಹತ್ತಿರ ಬಂದಾಗಲೇ ಸ್ನೇಹ ಬೆಳೆಯುತ್ತದೆ’ ಎಂದ. 
ನಾನು ಇನ್ನೂ ದೂರಕ್ಕೆ ಹೋಗಿದ್ದೇನೆ, ನಿಮಗೆ ರ‍್ಥವಾಗುತ್ತಿಲ್ಲ’
‘ಅಂದರೇ ಏನು ?’
‘ಏಕೋ ನನ್ನ ಮನಸ್ಸು ನಿಮ್ಮನ್ನು ಬಯಸುತ್ತಲಿದೆ ‘ ಎಂದಳು. ಆಗ ಆತ 
ಗಲಿಬಿಲಿಗೊಂಡು;
‘ಅದೇನು ಹಾಗೆ ಹೇಳೋದು ? ಎಷ್ಟೇ ಆಗಲಿ ನಾವು ನೀವು ಹತ್ತಿರದವರಲ್ಲ ಮತ್ತು 
ಸಂಭಂದಿಗಳಲ್ಲ. ಹಾಗೆ ಒಮ್ಮೆಲೇ ಎಂಥಹದೋ ರೀತಿಯಲ್ಲಿ ಹೇಳಿದರೆ ಹೇಗೆ ?’
‘ನಾನು ಸರಿಯಾಗೇ ಹೇಳುತ್ತಿದ್ದೇನೆ. ನನ್ನ ಮನ್ನಸ್ಸು ನಿಮ್ಮನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ನೀವು ನನ್ನ ಕಡೆಗೆ ಅದೇ ರೀತಿಯಲ್ಲಿ ಲಕ್ಷ್ಯ ಕೊಡಬೇಕು’
‘ಬೇಡ ಮೋಹನ ಕುಮಾರಿ, ಏನೋ ಹೇಳಬೇಡಿ.  ಇದು ಸರಿಯಲ್ಲ. ನಾನು ಮತ್ತು ನೀವು ವಿದ್ಯರ‍್ಥಿಗಳೆ.  ನಾವು ವಿದ್ಯಾಭ್ಯಾಸದ ಕಡೆಗೆನೇ ಲಕ್ಷ್ಯ ಕೊಡಬೇಕು.  ಅದೇ, ನಮ್ಮ ತಂದೆ ತಾಯಿಗಳ ಆಸೆ ಮತ್ತು ಗುರಿ ಅಲ್ವೇ ?.  ಈ ರೀತಿ ನೀವು ಚಂಚಲತೆಯನ್ನು ಮೂಡಿಸಿ ಕೊಳ್ಳಬೇಡಿ. ನನಗಂತೂ ಇದು ಅನುಚಿತ ಎಂದನಿಸುತ್ತೆ’
‘ಇಲ್ಲ.ಇಲ್ಲ..ನೀವು ಒಪ್ಪಲೇ ಬೇಕು’ ಎಂದು ಕಣ್ಣೀರು ಹಾಕ ತೊಡಗಿದಳು. 
‘ಅಯ್ಯೋ.. ಇದಕ್ಕೇಕೆ ಕಣ್ಣೀರು ? ನೀವು ಅಷ್ಟು ಅಶಕ್ತರಾ  ?’
‘ನಿಮ್ಮನ್ನು ನೋಡಿಯಾದ ಮೇಲೆ ನನಗೆ ತುಂಬಾ ಅಶಕ್ತತೆ ಉಂಟಾಗಿದೆ’ ಎಂದು ಮತ್ತೆ
ಕಣ್ಣೀರು ಹಾಕಿದಳು. 
‘ಇದೇನಿದು.. ನೀವು ನನ್ನನ್ನು ಕರೆಯಿಸಿದ್ದು, ನೀವು ಕಣ್ಣೀರು ಹಾಕುವುದನ್ನು 
ನೋಡಲಿಕ್ಕಾ ? ಎಂದು ಲೊಚ ಗುಟ್ಟಿದ. 
ಆಕೆ ಸ್ವಲ್ಪ ಸುಧಾರಿಸಿಕೊಂಡು ಒಂದು ಗ್ಲಾಸ್ ನೀರು ಕುಡಿದು ಕೊಂಚ ಮಟ್ಟಿಗೆ 
ದುಃಖವನ್ನು ಶಮನ ಮಾಡಿಕೊಂಡಳು. 
ಆಮೇಲೆ ಸದಾಶಿವ ತನ್ನ ಮಾತನ್ನು ಮುಂದುವರೆಸಿ;
‘ಮೋಹನ ಕುಮಾರಿ, ನೀವು ನನ್ನ ಹಿನ್ನೆಲೆ ತಿಳಿಯದೆಯೇ ಅದ್ಹೇಗೆ ನರ‍್ಧಾರಕ್ಕೆ ಬಂದಿರೀ ?ನಾನು ನೂರಕ್ಕೆ ನೂರರಷ್ಟು ನಿಮಗೆ ಯೋಗ್ಯನಲ್ಲ. ನಿಮಗೆ ತಿಳಿದಿಲ್ಲ, ನಾನೊಬ್ಬ ಕೆಳ 
ರ‍್ಗದವನು. ನನಗೆ ನನ್ನ ಬದುಕೇ ಒಂದು ಪ್ರಶ್ನರ‍್ಥಕ ಚಿಹ್ನೆಯಾಗಿದೆ. ನಾನು ನಿಮ್ಮ ಬಗ್ಗೆ ಏನು ಯೋಚನೆ ಮಾಡಬಲ್ಲೆ?. ನೀವಾದರೋ ಶ್ರೀಮಂತರು ಮತ್ತು ಉಚ್ಚಕುಲದವರು ಎಂದು ಶೀಲಾ ಹೇಳಿದ್ದಾಳೆ. ಹಾಗಾಗಿ,  ನಿಮಗೆ ನೀವೇ ಮುಜುಗರ ಮಾಡಿಕೊಳ್ಳಬೇಡಿ. 
ನಿಮ್ಮ ತಂದೆಯವರನ್ನು ಸಂರ‍್ಕಿಸಿ  ಒಳ್ಳೆಯ ಮನೆತನದ ಹುಡುಗನನ್ನು ಹುಡುಕಿ 
ಮದುವೆಯಾಗಿ. ನಮ್ಮಂಥಹ ದುರಾದೃಷ್ಟ ಹೊತ್ತವನನ್ನು ತಲೆ ಎತ್ತಿ ನೋಡುವುದೂ ಕೂಡಾ ಒಳ್ಳೆಯದಲ್ಲ.’ ಎಂದ
‘ಸದಾಶಿವ, ಅದೆಂಥಹ ತೆರೆದ ಹೃದಯ ನಿಮ್ಮದು. ನೀವು ಎಲ್ಲವನ್ನೂ ಮುಕ್ತವಾಗಿ ಹೇಳಿ ಕೊಂಡಿರೀ. ಅದನ್ನೇ ನಾನು ಮೆಚ್ಚೋದು.’
‘ಸರಿ, ಈಗ ಅದರ ಬಗ್ಗೆ ಏನೂ ಮಾತು ಬೇಡ. ನಿಮ್ಮ ಆಶಯದಂತೆ ನಾನು ನಿಮ್ಮ ಜೊತೆ 
ವ್ಯವಸ್ಥಿತ ಭೋಜನ ಮಾಡುತ್ತೇನೆ.  ಅಷ್ಟು ಕಂಡಾದರೂ ಖುಷಿ ಪಡಿ’ ಎಂದು ಆತ ಎಂದಾಗ,
ಇಬ್ಬರೂ ಊಟಕ್ಕೆ ಹೋದರು.  ಅವರು ಊಟ ಮಾಡುತ್ತಾ ಮಾಡುತ್ತಾ ಕಾಲೇಜು 
ವಾತಾವರಣದ ಬಗ್ಗೆನೇ ಮಾತಾಡಿದರು. ಸುಮಾರು ಒಂದೆರಡು ಗಂಟೆಗಳ ಬಳಿಕ 
ಅವರಿಬ್ಬರೂ ಅಲ್ಲಿಂದ ತೆರಳಿದರು .  
 
ಮುಂದೊಂದು ದಿನ  ಸದಾಶಿವನ ಸಂಬಂಧಿಗೆ ಕಾಯಿಲೆ ಉಲ್ಬಣವಾದ ವಿಷಯ ತಿಳಿದಾಗ, 
ಒಂದೆರಡು ದಿನಗಳ ಮಟ್ಟಿಗೆ ತನ್ನ ಊರಿಗೆ ಹೊರಟು ಹೋದ.  ಅಲ್ಲಿ ಅವರಿಗೆ ಸಾಂತ್ವನ 
ಹೇಳಿದ.  ಆ ಸಮಯದಲ್ಲಿ ಆತ ಬಂದಿದ್ದು ಆತನ ತಂದೆ ತಾಯಿಗೆ ಖುಷಿಯಾಗಿತ್ತು. ಅಲ್ಲಿ
ಸುಮಾರು ಮೂರು ನಾಲ್ಕು ದಿನಗಳನ್ನು ಕಳೆದು,  ಮತ್ತೇ ಅಭ್ಯಾಸದ ಕಡೆಗೆ ಲಕ್ಷ್ಯಗೊಂಡ 
ಮರಳಿ ಹೊರಟು ಬಂದು ಕಾಲೇಜಿನ ಕಡೆಗೆ ನಡೆದ.  ಅಲ್ಲಿ ಅವನ ಕಣ್ಣುಗಳು ಮೋಹನ ಕುಮಾರಿಯನ್ನು ಹುಡುಕುತ್ತಿದ್ದವು. ಆದರೆ, ಆಕೆ ಎಲ್ಲಿಯೂ ಕಾಣಲೇ ಇಲ್ಲ. ಕೊನೆ ಪಕ್ಷ 
ಶೀಲಾಳಾದರೂ ಸಿಗುತ್ತಾಳೋ ಏನೋ ಎಂದು ಆಕೆಯನ್ನು ಹುಡುಕಲು ಪ್ರಯತ್ನಿಸಿದ.  ಆಮೇಲೆ ಶೀಲಾ ಕಂಡಾಗ,  ಮೋಹನ ಕುಮಾರಿಯನ್ನೇ ಕಂಡ ಹಾಗೆ ಆತನಿಗೆ ಭಾಸವಾಯಿತು. ಅದೇಕೆ ಹೀಗೆ ಅನ್ನಿಸುತ್ತಿದೆ ಎಂದು ತನಗೆ ತಾನೇ ಪ್ರಶ್ನಿಸಿಕೊಂಡ.  ಶೀಲಾಳನ್ನು ಕಂಡು ಹೀಗೆ ಹೇಳಿದ; ‘ಏನು ಶೀಲಾ,  ನಿಮ್ಮ ಸ್ನೇಹಿತೆ ಮೋಹನ ಕುಮಾರಿ ಎಲ್ಲಿ ?’ ಎಂದ. 
‘ಅಯ್ಯೋ…. ಸದಾಶಿವ ಒಂದು ದೊಡ್ಡ ದರ‍್ಘಟನೆ  ಆಗಿದೆ. ನೀನು ನಿನ್ನ ಊರಿಗೆ ಹೋದ ದಿನದಂದೇ ಮೋಹನ ಕುಮಾರಿ ಕಾರು ಅಪಘಾತಕ್ಕೆ ಈಡಾದಳು. ಆಕೆಗೆ ತೀವ್ರ ರಕ್ತ 
ಸ್ರಾವವಾಗಿ ಎರಡು ಮೂರು ದಿನಗಳವರೆಗೆ ನಿನಗಾಗಿ ಜೀವ ಹಿಡಿದಿದ್ದಳೋ ಏನೋ, ಪದೇ 
ಪದೇ  ನಿನ್ನನ್ನೇ ಧ್ಯಾನ ಮಾಡುತ್ತಲಿದ್ದಳು. ಅವಳ ತಂದೆ ತರ‍್ತಾಗಿ  ದುಬಾಯಿನಿಂದ ಬಂದರು.  ಆಕೆಗೆ ಎಲ್ಲಾ ರೀತಿಯಿಂದ ಚಿಕಿತ್ಸೆ ಕೊಟ್ಟು ಪ್ರಯತ್ನಿಸಿದರು. ಆಕೆಯ ತಲೆಗೆ 
ಮತ್ತು ಎರಡೂ ಕೈಗಳಿಗೆ ಬಲವಾದ ಪೆಟ್ಟೇನೂ ಬಿದ್ದಿಲ್ಲವಾದರೂ, ಕತ್ತರಿಸಿದ ಎರಡೂ 
ಕಾಲಿನ ರಕ್ತ ಸ್ರಾವಕ್ಕೆ ಆಕೆ ರ‍್ಧ ಜೀವ ತೆತ್ತಿದ್ದಾಳೆ.  ನಾನು ಮತ್ತು ನನ್ನ ಸ್ನೇಹಿತೆಯರೆಲ್ಲರೂ ಆಸ್ಪತ್ರೆಗೆ ಹೋಗಿದ್ದೆವು.  ನನ್ನನ್ನು ಕರೆದು ಮಾತಾಡಿ,  ನನಗೆ ಮರುದಿನ ಆಸ್ಪತ್ರೆಗೆ 
ಬರುವುದಕ್ಕೆ ಹೇಳಿದಳು. ಆಕೆಯ ಆಪೇಕ್ಷೆಯಂತೆ ಮರು ದಿನ ನಾನು ಹೋಗಿದ್ದೆ, ಆಗ ನನಗೆ ಒಂದು ಲಕೋಟೆ ಕೊಟ್ಟಳು.  ಅದು  ನನ್ನ ಬಳಿಯೇ ಇದೆ, ಕೊಡುತ್ತೇನೆ ತಾಳು’ ಎಂದು ಆ ಲಕೋಟೆ ಕೊಟ್ಟಳು.  ಆಗ ಸದಾಶಿವನಿಗೆ ಆಘಾತವಾಯಿತು.  ನಾನು ಅವಳ ಇಚ್ಛೆಯಂತೆ ಹೋಟೆಲಿಗೆ ಹೋಗಿ, ಅವಳ ಜೊತೆ  ಮುಕ್ತವಾಗಿ ಮಾತಾಡಿದಾಗ, ನಮ್ಮಿಬ್ಬರ ಮನಸ್ಸುಗಳು ಅಲ್ಲಿ ಸೇರಿದವು.  ಆದರೆ, ಒಮ್ಮಿಂದೊಮ್ಮೆಲೆ ಈ ದುಸ್ಥಿತಿ ಬಂದದ್ದು ಹೇಗೆ ?
ಎಂದು ಮನದಲ್ಲೇ ಯೋಚಿಸಿದ. ‘ಆಮೇಲೆ ಏನಾಯಿತು ?. ಇದ್ದಾಳೇಯೇ ?’ ಎಂದಾಗ;
‘ಅವಳೀಗ ಇಲ್ಲ . ದರ‍್ದೈವದಿಂದ  ನಿನ್ನೆ ರಾತ್ರಿಯೇ  ಅವಳು ತೀರಿಕೊಂಡಳು.’ ಎಂದಳು. ಆಕೆ ಹಾಗೆ  ಹೇಳಿದಾಗ ಸದಾಶಿವ ಕುಸಿದು ಬಿದ್ದ !  ಆಮೇಲೆ ಅವನು  ದುಃಖಿಸಲು 
ಪ್ರಾರಂಭಿಸಿದ. ಅವನ  ದುಃಖಕ್ಕೆ ತಡೆಯೇ ಇಲ್ಲದಾಯಿತು. ಶೀಲಾ ಅವನನ್ನು 
ಸಮಾಧಾನಿಸಲು ಪ್ರಯತ್ನಿಸಿದಳು. ಅವನು ಮಾನಸಿಕವಾಗಿ ರ‍್ಜರಿತಗೊಂಡಿದ್ದ. ಆಮೇಲೆ,ಮೆಲ್ಲಗೆ ಲಕೋಟೆ ಕಡೆ ಆತನ ದೃಷ್ಟಿ ಹೋದಾಗ, ನೋಡುತ್ತಾನೆ, ಅದು ಆತನ 
ಹೆಸರಿನಲ್ಲಿಯೇ ಇತ್ತು.  ಅದನ್ನು ತೆಗೆದು ನೋಡಿದಾಗ ಆತ ಆಶ್ರ‍್ಯಗೊಂಡ ! ಅದರಲ್ಲಿ 
ಇದ್ದುದು ಯಾವುದೇ ಪತ್ರವಲ್ಲ ಬದಲಿಗೆ ಅಲ್ಲಿದ್ದುದು  ‘ಉಯಿಲು’ ಅಂದರೆ, ಮರಣ ಶಾಸನವಿತ್ತು. ಆಕೆ ತನ್ನ ಹೆಸರಿನಲ್ಲಿ ಇದ್ದ ಹೋಟೆಲನ್ನು ಸದಾಶಿವನ ಹೆಸರಿನಲ್ಲಿ  ಬರೆದಿದ್ದಳು.  ಆದರೆ, ಅವನಿಗೆ ಅದು ಅಪಥ್ಯವಾಯಿತು.  ಹೇಗೋ ಆಕೆ ಜೀವ ಉಳಿಸಿಕೊಂಡು ಅಂಗವಿಕಲೆಯಾಗಿದ್ದರೂ  ಸರಿ, ಆಕೆ ತನ್ನ  ಜೊತೆ ಬಾಳಬಹುದಿತ್ತು
ಎಂದು ನೋವಿನಿಂದ ಅವನ ಒಳ ಮನಸ್ಸು ಹೇಳುತ್ತಿತ್ತು. ಆತನ ಒಂದು ಕ್ಷಣದ ಭೇಟಿಯಿಂದ, ಆತನಿಗೆ ಅರಿವಿಲ್ಲದಂತೆ ಆಕೆ ಅವನಿಗೆ ಅದೆಷ್ಟು ಹತ್ತಿರವಾಗಿದ್ದಳು. 
ಆದರೆ, ವಿಧಿ ಬರಹ ಎಷ್ಟು ಕಟುವೆಂದರೆ,  ಜನ್ಮ ತಳೆದಾಗ ಮೋಹನಾ ತಾಯಿ ಭಾಗ್ಯ ಕಾಣಲಿಲ್ಲ , ಜೀವಿತದ ಕೊನೆಯಲ್ಲಿ ಒಲವು  ಮೂಡಿಸಿ ಕೊಂಡು, ತಾನೇ ಇಲ್ಲವಾದಳು !


About The Author

Leave a Reply

You cannot copy content of this page

Scroll to Top