ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕವಿ ಪರಿಚಯ :

೧೯೮೫ ರಲ್ಲಿ ಜನಿಸಿದ ಶೇಕ್ರಾನಾಯ್ಕ ವಿಜಯನಗರ ಜಿಲ್ಲೆ ಹರಪನಹಳ್ಳಿಯವರು. ಎಂ.ಎ ಇತಿಹಾಸ
ಮತ್ತು ಇಂಗ್ಲಿಷ್ ವಿಷಯದಲ್ಲಿ ಪದವಿ ಪಡೆದ ಇವರು ಗಂಗಾವತಿ ತಾಲೂಕು ಚಳ್ಳೂರು ಕ್ಯಾಂಪಿನಲ್ಲಿ
ಶಾಲಾ ಶಿಕ್ಷಕನಾಗಿ ೧೯ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ
ಯುವಜನ ಮಹಿಳಾ ರೈತ ಕಾರ್ಮಿಕರ ಚಳುವಳಿಗಳಲ್ಲಿ ಭಾಗಿಯಾಗುತ್ತ ಬಂದ ಶೇಕ್ರಾನಾಯ್ಕ, ಕವಿತೆ,
ಕಥೆ, ಪ್ರಬಂಧ ಹಾಗೂ ಕಾದಂಬರಿಗಳ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಶಿಕ್ಷಕರತ್ನ, ಉತ್ತಮ
ಶಿಕ್ಷಕ, ವಿಜ್ಞಾನ ಪರಿಚಾಲಕ, ಪವಾಡ ರಹಸ್ಯ ತಜ್ಞ ಹಾಗೂ ನಾಡಿನ ವಿವಿಧ ಸಂಘಟನೆಗಳು
ಕೊಡಮಾಡುವ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

ವಿಮರ್ಶಕರಾದ ಪ್ರೊ. ಕೇಶವ ಶರ್ಮಾ ಹಾಗೂಕವಿ ಪ್ರೊ. ಸುಕನ್ಯಾ ಮಾರುತಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಹೊಸ ತಲೆಮಾರಿನ ಹೊಸ ಆಲೋಚನೆಗಳು, ಹೊಸ ರೀತಿಯ ಭಾಷೆ ಶೈಲಿ ಭಾವ ಸಮೃದ್ಧಿಯನ್ನು
ಪರಿಚಯಿಸುವ ಈ ‘ಹೊಸ್ತಿಲು ಸವರಿದ ಸೆರಗು’ ನಮ್ಮ ಆಯ್ಕೆ ಎಂದು ತೀರ್ಪುಗಾರರು
ಅಭಿಪ್ರಾಯಪಟ್ಟಿದ್ದಾರೆ. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು
ಒಳಗೊಂಡಿದೆ ಎಂದು ‌ವಿಭಾಸಾಹಿತ್ಯ ಪ್ರಶಸ್ತಿಯ ಸಂಚಾಲಕಿ ಸುನಂದಾ ಕಡಮೆ‌ ತಿಳಿಸಿದ್ದಾರೆ.


About The Author

Leave a Reply

You cannot copy content of this page

Scroll to Top