ಶರಣ ಸಂಗಾತಿ
ಕಾವೇರಿ ಪಾಟೀಲ
“ಶರಣರ ಕಾಯಕ ಮತ್ತು
ದಾಸೋಹದ ಪರಿಕಲ್ಪನೆ”


12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ ಮತ್ತು ದಾಸೋಹ ಪರಿಕಲ್ಪನೆಗಳು ಮಾನವ ಸಮಾಜಕ್ಕೆ ಸಮಾನತೆ, ಶ್ರಮದ ಗೌರವ ಹಾಗೂ ನಿಸ್ವಾರ್ಥ ಸೇವೆಯ ದಾರಿಯನ್ನು ತೋರುವ ಅಮೂಲ್ಯ ತತ್ವಗಳಾಗಿವೆ.ಜಗತ್ತಿಗೆ ಶ್ರಮದ ಸಂಸ್ಕೃತಿಯನ್ನು ಕಲಿಸಿ ಬಂದ ಆದಾಯದಲ್ಲಿಸಮಾಜಕ್ಕಿಯೇ ಹಂಚುವಲಿದ್ದ ಸಂಪತ್ತಿಗಿಂತ ಹೆಚ್ಚಿನ ಸಂಪತ್ತನ್ನು ಶೇಖರಿಸುವದನ್ನು ಗಾಳಿಸುವುದನ್ನುಅಸಿಂಧುಗೊಳಿಸಿಸತ್ಯ ಶುದ್ಧ ಪ್ರಾಮಾಣಿಕ ಬದುಕನ್ನು ಬದುಕಿದರು ಶರಣರು.
1. ಕಾಯಕ ಪರಿಕಲ್ಪನೆ (Kayaka – Dignity of Labor)
‘ಕಾಯಕ’ ಎಂದರೆ ಕೇವಲ ಹೊಟ್ಟೆಗಾಗಿ ಮಾಡುವ ಕೆಲಸವಲ್ಲ, ಅದೊಂದು ಸತ್ಕರ್ಮ ಮತ್ತು ಪೂಜೆ. ಪ್ರತಿಯೊಬ್ಬರೂ ತಮ್ಮ ಶಕ್ತಿe ಮತ್ತು ಇಷ್ಟಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ದೈಹಿಕ ಅಥವಾ ಬೌದ್ಧಿಕ ಶ್ರಮದಿಂದ ದುಡಿಯಬೇಕು.ಶ್ರಮದ ಗೌರವ: ಕಾಯಕದಲ್ಲಿ ಯಾವುದೇ ಜಾತಿ, ಕುಲ ಅಥವಾ ಲಿಂಗಭೇದವಿಲ್ಲ. ಎಲ್ಲ ಕಾಯಕಗಳು (ಉದಾಹರಣೆಗೆ: ಬಟ್ಟೆ ತೊಳೆಯುವುದು, ಚಮ್ಮಾರಿಕೆ, ಕೃಷಿ, ರಾಜ್ಯಭಾರ) ಸಮಾನವೇ.ಸಂಚಯ ವಿರೋಧ: ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಅತಿಯಾದ ಸಂಪತ್ತು ಅಥವಾ ಹಣವನ್ನು ಕೂಡಿಡಬಾರದು (ಸಂಚಯ ಮಾಡಬಾರದು) ಎಂಬುದು ಇದರ ಮುಖ್ಯ ಉದ್ದೇಶ.ಬಸವಣ್ಣನವರು ತಮ್ಮ ವಚನದಲ್ಲಿ “ಕಾಯಕವೇ ಕೈಲಾಸ” ಎಂದು ಹೇಳುವ ಮೂಲಕ ಕಾಯಕವೇ ಶಿವಪೂಜೆ ಎಂದು ಸಾರಿದ್ದಾರೆ.
2 ದಾಸೋಹ ಪರಿಕಲ್ಪನೆ (Dasoha – Sharing and Service)ಅರ್ಥ: ‘ದಾಸೋಹ’ ಎಂದರೆ ಕೇವಲ ದಾನ ಮಾಡುವುದಲ್ಲ. ತಮಗೆ ಬಂದ ಕಾಯಕದ ಸಂಪಾದನೆಯಲ್ಲಿ ತಮ್ಮ ಅವಶ್ಯಕತೆಗೆ ಬೇಕಾದ್ದನ್ನು ಇಟ್ಟುಕೊಂಡು, ಉಳಿದ ಹೆಚ್ಚುವರಿ ಸಂಪತ್ತು ಅಥವಾ ಆಹಾರವನ್ನು ಸಮಾಜದ ಹಿತಕ್ಕಾಗಿ, ಬಡವರಿಗೆ ಮತ್ತು ಅಸಹಾಯಕರಿಗೆ ನಿಸ್ವಾರ್ಥವಾಗಿ ಹಂಚುವುದೇ ದಾಸೋಹ.ಅಹಂಕಾರ ರಹಿತ ಸೇವೆ: “ನಾನು ದಾನಿ” ಎಂಬ ಅಹಂ ಇಲ್ಲದೆ, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ಮಡಿ(ಮರಳಿ) ಅರ್ಪಿಸುವ ಭಾವನೆ ದಾಸೋಹದಲ್ಲಿದೆ.
ಸಮಾಜಮುಖಿ ಚಿಂತನೆ: ಇದು ಸೋಮಾರಿಗಳಿಗೆ ಬೆಂಬಲ ನೀಡುವುದಲ್ಲ; ಬದಲಾಗಿ ಶ್ರಮಜೀವಿಗಳಿಗೆ, ಸಮಾಜ ಸೇವಕರಿಗೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಮತಾವಾದಿ ವ್ಯವಸ್ಥೆಯಾಗಿದೆ.ಕಾಯಕ ಮತ್ತು ದಾಸೋಹದ ಪರಸ್ಪರ ಸಂಬಂಧಕಾಯಕ ಮತ್ತು ದಾಸೋಹಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಕಾಯಕವು ಉತ್ಪಾದನೆ ಮತ್ತು ಉದ್ಯೋಗವನ್ನು ಖಚಿತಪಡಿಸಿದರೆ, ದಾಸೋಹವು ಸಂಪತ್ತಿನ ಸಮಾನ ಹಂಚಿಕೆಯನ್ನು ಖಾತ್ರಿಪಡಿಸುತ್ತದೆ.ದುಡಿದು ಉಣ್ಣುವುದು ಕಾಯಕವಾದರೆ, ಹಂಚಿ ಉಣ್ಣುವುದು ದಾಸೋಹ. ಈ ಎರಡು ತತ್ವಗಳ ಮೂಲಕ ಶರಣರು ಜಾತಿ-ವರ್ಗ ರಹಿತವಾದ, ಶೋಷಣೆಯಿಲ್ಲದ ಸುಂದರ ಸಮಸ್ಯಾಮುಕ್ತ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದರು.
ಕಾಯಕ ದಾಸೋಹದಿಂದ ಹಸಿವುಮುಕ್ತ ಸಮಾಜವನ್ನು ನಿರ್ಮಿಸುವುದು ವ್ಯಸನಮುಕ್ತ ಸಮಾಜವನ್ನುಕಟ್ಟುವುದು ನಿರುದ್ಯೋಗ ಸಮಾಜವನ್ನು ನಿರ್ಮೂಲನೆ ಮಾಡುವುದು ಸರ್ವರಿಗೂಸಮಪಾಲು ಸರ್ವರಿಗೂ ಸಮಬಾಳು ಎಂಬ ಕ್ರಾಂತಿಕಾರಕ ಚಿಂತನೆಯನ್ನುಹುಟ್ಟುಹಾಕಿದರು ಶರಣರು.
ಕಾವೇರಿ ಪಾಟೀಲ




