ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್


ಬರಿದಾದ ನನ್ನಯ ಬಾಳಿಗೆ ಬಂಗಾರವೇ ನೀನಾದೆ ಸಖಿ
ಕಂಗಾಲಾದ ಭಾವ ಬಳ್ಳಿಗೆ ಇಂಗಾಲವೇ ನೀನಾದೆ ಸಖಿ
ನನ್ನೆಲ್ಲ ಕಷ್ಟ ಸುಖಗಳಲ್ಲೂ ಅರ್ಧ ಪಾಲು ನಿನ್ನದೇ ಬಿಡು
ಉಸಿರಿಗೆ ಹೆಸರಾಗಿರುವ ಆಮ್ಲಜಕನವೇ ನೀನಾದೆ ಸಖಿ
ನಾ ನೀ ಯಾರೊಬ್ಬರೂ ಇರದಿದ್ದರೆ ಜೀವನವೇ ನಿಸ್ಸಾರ
ಸಸಾರವಲ್ಲದ ಸಂಸಾರಕೆ ಸಾರಜನಕವೇ ನೀನಾದೆ ಸಖಿ
ಜತುನದಿ ಕಾದಿಟ್ಟ ಪೀರುತಿ ರತುನವಿದೆ ಎದೆಯಾಳದಲಿ
ಆಶ್ರು ಗ್ರಂಥಿ ಪ್ರಚೋದಿಸುವ ಗಂಧಕವೇ ನೀನಾದೆ ಸಖಿ
ನೀನಿರದೇ ಈ ಮಹಾಂತನ ಬಾಳು ಸಂಪೂರ್ಣವಾಗದು
ಎದೆ ತಳಮಳಕೆ ತುಕ್ಕು ತಂದ ಕಬ್ಬಿಣವೇ ನೀನಾದೆ ಸಖಿ
ಎಮ್ಮಾರ್ಕೆ



