ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬೆಳದಿಂಗಳನೇ ನುಂಗಿ
ಆಕಾಶದ ಅಂಗಳವನ್ನೇ ತನ್ನೊಳಗಿಳಿಸಿಕೊಂಡು
 ಮೌನ ಮಾತಿನಲಿ ಮರವ ಒರಗಿದ ನೀಲಾಂಜನೆ

ಹಾಲಂತ ಹೊಳಪು ,ತುಸು ಬಿರಿದ
ಹೂಮನಸು ಏಕಾಂತವೇಕೆ ಕನಕಾಂಗಿ
ವಸಂತನಾಗಮನವೇನು ಮನದಲಿ
ಚಿಗುರೊಡೆದಂತಿದೆ ಭಾವ ಬಾರೀ ಲಹರಿಯಲಿ

ಮುದ್ದಾದ ಈ ತುಟಿಯಿಂದ
ಹೇಳ ಬಯಸಿದ್ದೇನೂ  ಹೊರ ಚೆಲ್ಲಿಲ್ಲಾ
ಮೌನ ಮಂತ್ರವಾಗಿ ಮಾತು ಅವಿತು
ಮನಸ್ಸು ಕನಸಲೇ ಅಲೆದಂತಿದೆ.

ದೂರದೇ ದೂರವಾಗಿ ನಿಲ್ಲುವವಳು
 ಬಾಡಿಹೋದ ಹಾದಿಯಲಿ, ಬಂದು
ಹೋಗುವ ಪ್ರವಾಸಿಯ ತೇರಿನ ಸಂಭ್ರಮವಾ ದಿಟ್ಟಿಸುತ್ತಾ
ಮನಸ್ಸಿಗೆ ಕಬ್ಬಿಣದ ಕವಚವಿಟ್ಟುಕೊಂಡು ಕಾಯ್ದಿದ್ದಾಳೆ.

ಮಗುವಂತೆ ಕಾಯ್ದಿರುವ ಕಣ್ಣಿನ
ಬಂಧನದ ಅನಲ ಬಲ್ಲವರಾರು
ನಿರೀಕ್ಷೆಯಲ್ಲೇ ನಿಂತು ದೇವಿಯಾದವಳ
ಕಣ್ಣ ಕಾಗುಣಿತವರಿಯದ  ತಟವಟದವಗೆ
ಕಾಯುತ್ತಲೇ  ಕನಲುತ್ತಿಹಳಾ  ನೀಲಿ ಹುಡುಗಿ.


About The Author

Leave a Reply

You cannot copy content of this page

Scroll to Top