ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ  ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಡಾ. ಗೊರೂರು, ಡಾ.ಎಸ್.ಎಲ್. ಭೈರಪ್ಪ, ಶ್ರೀಮತಿ ಭಾನು ಮುಷ್ತಾಕ್ ಅವರ ಸಾಹಿತ್ಯ ಸಹವಾಸ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಘಟಿಸಿತ್ತು. ಈ ಮೂವರು ಸಾಹಿತಿಗಳ ಸಾಹಿತ್ಯವನ್ನು ಮೂರು ವಿಭಿನ್ನ ನೆಲೆಯಲ್ಲಿ ಪ್ರೇಕ್ಷಕ ಪ್ರಭುಗಳಿಗೆ  ತಲುಪಿಸಲು ಸಾಫಲ್ಯ ಸಾಧಿಸಿತು. ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಹಿತಿಗಳಷ್ಟೇ ಅಗಿ ಉಳಿಯಲಿಲ್ಲ. ಸ್ವಾತಂತ್ರö್ಯ ಹೋರಾಟದಲ್ಲಿ ಗಾಂಧಿ ಪ್ರಭಾವಕ್ಕೆ ಒಳಗಾದವರು. ಆ ದಿಶೆಯಲ್ಲಿ ಬದುಕು ರೂಪಿಸಿಕೊಂಡವರು. ತಾವು ಜನ್ಮ ತಳೆದ ಊರು ನದಿಯನ್ನು ಆವರಿಸಿಕೊಂಡು  ಗ್ರಾಮ್ಯ ಬದುಕನ್ನು ಪ್ರಬಂಧ ಸಾಹಿತ್ಯದಲ್ಲಿ ಹಾಸ್ಯ ಪ್ರಜ್ಞೆಯಲ್ಲಿ ಚಿತ್ರಿಸಿದವರು. ಆ ಕಾಲದ  ಬದುಕನ್ನು ಇಂದಿಗೆ ಹೋಲಿಸಿ   ಮಾತನಾಡಿದವರು ಡಾ.ರಶ್ಮಿ ಪಿ. ಅವರು. ಇವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಪು.ತಿ.ನರಸಿಂಹಾಚಾರ್ ಅವರ ಲಲಿತ ಪ್ರಬಂಧಗಳು ತೌಲನಿಕ ಅಧ್ಯಯನ ಪ್ರಬಂಧಕ್ಕೆ ಪಿಹೆಚ್‌ಡಿಯನ್ನು ಇದೇ ಆಗಸ್ಟ್ ೧೭ರಂದು ಪಡೆದಿದ್ದಾರೆ.  ಇವರು ಗೊರೂರರ ಸಾಹಿತ್ಯ ಸಮಕಾಲೀನ ದೃಷ್ಟಿಕೋನ ವಿಷಯವಾಗಿ ಪ್ರಬಂಧ ಮಂಡಿಸುವಲ್ಲಿ  ಪ್ರಚಲಿತ ಬದುಕನ್ನು ನೋಡಿದ್ದಾರೆ ನಿಜ. ಆ ಕಾಲಘಟ್ಟದ  ಬದುಕನ್ನು ಓದಿ ತಿಳಿದಿದ್ದಾರೆ ಖರೆ. ನಮ್ಮೂರ ಜನರನ್ನು ಬಂದು ಮಾತನಾಡಿಸಿ  ಮಾತನಾಡಿದ್ದರೆ ಚೆಂದಿತ್ತು ಎನಿಸಿತು.  ಶ್ರೀಮತಿ ವಾಸಂತಿಮೂರ್ತಿ  ಅವರು ಹೊಸ ತಲೆಮಾರಿಗೆ ಗೊರೂರರ ಸಾಹಿತ್ಯ ಕೆಲವು ಆಲೋಚನೆಗಳು ಮತ್ತು ಯೋಜನೆಗಳು ವಿಷಯದಲ್ಲಿ ಮಾತನಾಡಿದ ವಿಡಿಯೋವನ್ನು  ಪ್ರದರ್ಶಿಸಲಾಯಿತು. ಮೇಡಂ ಕೆನಡದಲ್ಲಿ ನೆಲೆಸಿದ್ದಾರೆ. ಮರ‍್ನಾಲ್ಕು ವರ್ಷಗಳಿಂದ ಡಾ.ಗೊರೂರರ ಜನ್ಮ ದಿನ ಜುಲೈ೪ರ ಸಂಧರ್ಭ  ಭಾರತಕ್ಕೆ ಬಂದು  ಡಾ.ಗೊರೂರು ಸಾಹಿತ್ಯ ಗೋಷ್ಟಿಗಳಲ್ಲಿ  ಭಾಗಿಯಾಗಿದ್ದಾರೆ.  ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರತಿಷ್ಠಾನ ಟ್ರಸ್ಟ್ ಇತ್ತೀಚಿಗೆ ನೋಂದಣಿ ಕೂಡ ಮಾಡಿಸಿದ್ದಾರೆ. ಇವರು ತಮ್ಮ ತಂದೆ ಜೊತೆಗಿನ ಒಡನಾಟ ನೆನಪಿಸಿಕೊಂಡರು ಜೊತೆಗೆ  ಸರ್ಕಾರಕ್ಕೆ ಹೀಗೆ ಮನವಿ ಮಾಡಿದರು. ಹಾಸನ ಹೇಮಗಂಗೋತ್ರಿಯಲ್ಲಿ  ಗೊರೂರು ಅಧ್ಯಯನ ಪೀಠ ಸ್ಥಾಪಿಸಿ, ಬೆಂಗಳೂರು ಗೊರೂರರು ವಾಸವಿದ್ದ  ರಾಜಾಜಿನಗರ ಮೆಟ್ರೊ ಸ್ಟೇಷನ್‌ಗೆ ಗೊರೂರರ ಹೆಸರು ಇಡಬೇಕೆಂದು ಮತ್ತು  ಗೊರೂರು ಮನೆಯನ್ನು ಸರ್ಕಾರ ಪಡೆದು  ಸ್ಮಾರಕ ಮಾಡಲೆಂಬುದು ಅವರ ಬೇಡಿಕೆ ಆಗಿತ್ತು.  
ಶ್ರೀಮತಿ ಭಾನುಮುಷ್ತಾಕ್ ಲಂಕೇಶ್ ಪತ್ರಿಕೆ ವರದಿಗಾರ್ತಿ ಜೊತೆಗೆ  ವಕೀಲ ವೃತ್ತಿ   ನಿರ್ವಹಿಸಿದವರು.  ಇವರ ಎದೆಯ ಹಣತೆ ಕಥಾ ಸಂಕಲನವು ಮಡಿಕೇರಿ ದೀಪಾ ಭಾಸ್ತಿ ಇವರಿಂದ ಇಂಗ್ಲೀಷ್‌ಗೆ ಹಾರ್ಟ್ ಲ್ಯಾಂಪ್ ಹೆಸರಿನಲ್ಲಿ ಅನುವಾದವಾಗಿ ಈ ಕೃತಿಗೆ ೨೦೨೫ರ ಪ್ರತಿಷ್ಠಿತ ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿ ಲಭಿಸಿದೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಸಿಕ್ಕ ದೊಡ್ಡ ಗೌರವ.   ಗೋಷ್ಠಿ ೧ರಲ್ಲಿ ಶ್ರೀಮತಿ ಬಾನು ಮುಷ್ತಾಕ್ ಅವರೊಂದಿಗೆ ಡಾ.ರೇಖಾದತ್ತ, ದಯಾನಂದ ಸಾಗರ್ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಸಂವಾದ ನಡೆಸಿದರು.  ಬಾನು ಮೇಡಂ ಬೂಕರ್ ಪ್ರಶಸ್ತಿ ಸ್ವೀಕಾರಕ್ಕೆ ಹೋದ ದಿನ ಸೂಟ್ ಕೇಸ್ ಕಳೆದುಕೊಂಡ ಫಜೀತಿ ಹೇಳುವಾಗ ಡಾ.ಗೊರೂರರ ಅಮೇರಿಕಾದಲ್ಲಿ ಗೊರೂರು ಕಾದಂಬರಿ  ನೆನಪಾಗುತ್ತದೆ. ಈ ಕೃತಿ ೧೯೮೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಇರಲಿ ಎದೆಯ ಹಣತೆ ಕೃತಿಯಲ್ಲಿ ಬಾನು ಮೇಡಂ ಹೇಳಿದ್ದಾರೆ.  ಇದು ನನ್ನ ಬದುಕಿನ ಅತ್ಯಂತ ಸಂತೋಷದ ಸಂದರ್ಭ. ನನ್ನ ಬದುಕು ಮತ್ತು ಬರಹವು ಅತ್ಯಂತ ಕ್ರಿಯಾಶೀಲವಾಗಿ ಕವಲೊಡೆದ ಸಂದರ್ಭ. ಬುಕರ್ ಅದು ಕೈಗೆಟುಕಲಾರದ ಗಗನ ಕುಸುಮ ಎಂದೇ ನನ್ನ ಎಣಿಕೆಯಾಗಿತ್ತು. ಅದರ ಆರಂಭಿಕ ಹಂತದ ಸ್ಫರ್ಧೆಯೇ ನಾನು ಕಂಡು ಕೇಳಲರಿಯದ ಅನೇಕ ಸವಾಲುಗಳಿಂದ ಕೂಡಿತ್ತು. ಯಾವುದೇ ಭಾಷೆಯಿಂದ ಇಂಗ್ಲೀಷಿಗೆ ಅನುವಾದವಾದ ಕೃತಿಯಾಗಿರಬೇಕು. ಆಯಾ ವರ್ಷ ಮೇನಿಂದ  ಸೆಪ್ಟಂಬರ್ ತಿಂಗಳಲ್ಲಿ ಪ್ರಕಟವಾಗಿರಬೇಕು. ಇಂಗ್ಲೆAಡ್ ಅಥವಾ ಐರ್ಲೆಂಡಿನ ಪ್ರಕಾಶನ ಸಂಸ್ಥೆಯಿAದ ಪ್ರಕಟವಾಗಿರಬೇಕು. ಹೀಗೆ ಅರ್ಹತೆಯ ಹಣೆಪಟ್ಟಿಯಲ್ಲಿ ಭಾಗವಹಿಸಿದ ಪುಸ್ತಕಗಳು ೧೫೪.  ಜ್ಯೂರಿಗಳ ತಂಡ ೧೩ ಪುಸ್ತಕ ಆಯ್ಕೆ ಮಾಡಿ, ಬಿಡುಗಡೆಯಾದ  ಪಟ್ಟಿ ಕಂಡು ನನಗೆ ಏನೇನೂ ಅನಿಸಲಿಲ್ಲ. ನನಗೆ ನನ್ನ ಮಕ್ಕಳ ಪೋನ್ ಕರೆ ಮರುದಿನದಿಂದ ಆರಂಭವಾಗಿ  ಪತ್ರಕರ್ತರ  ಸಂದರ್ಶನ ನಡೆದವು.

ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂಬ ಅಪವಾದ ಸುಳ್ಳು ಮಾಡುವ ದಿಕ್ಕಿನಲ್ಲಿ ನನ್ನ  ಪುಸ್ತಕಗಳು ಓದುಗರ ಕೈ ಸೇರುತ್ತಿವೆ. ಪುಸ್ತಕ ಪ್ರೀತಿಯ ನೈಜ ಅನುಭವ ನನಗೆ ಇಂಗ್ಲೆAಡ್ ನಲ್ಲಿ ದೊರಕಿತು. ಅಲ್ಲಿಯ ಜನರ ಪುಸ್ತಕ ಪ್ರೀತಿ ಲೇಖಕರ ಬಗೆಗಿನ ಅಭಿಮಾನವು ನನ್ನಲ್ಲಿ ಅಚ್ಚರಿಯನ್ನು ಮೂಡಿಸಿತು. ಪುಸ್ತಕ ಮತ್ತು ಕಲೆಯನ್ನು ಜೀವಂತ ಇರಿಸುವ ಅವರ ಪ್ರಯತ್ನ ಎಂಥಾ ಸ್ಫೂರ್ತಿದಾಯಕ..?  ಡಾ.ಎಸ್.ಎಲ್.ಬೈರಪ್ಪನವರು ಕಾದಂಬರಿಕಾರರಾಗಿ ಜನಪ್ರಿಯರು. ಇವರ ಕೃತಿಗಳು ಇಂಗ್ಲೀಷ್ ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ. ಇವರಿಗೆ ಭಾರತ ಸರ್ಕಾರದ  ಪದ್ಮಭೂಷಣ ಪ್ರಶಸ್ತಿ ೨೦೨೩ರಲ್ಲಿ ಲಭಿಸಿದೆ. ಇವರ ಗೃಹಭಂಗ, ವಂಶವೃಕ್ಷ, ನಾಯಿ ನೆರಳು, ದಾಟು ಕಾದಂಬರಿಗಳನ್ನು ನನ್ನ ಓದಿನ ದಿನಗಳಲ್ಲೇ ಓದಿದ್ದೆನು. ಇವರ ವಂಶವೃಕ್ಷ ಕಾದಂಬರಿಯ ನಾಟಕ ರೂಪಾಂತರವನ್ನು  ಮೈಸೂರಿನ  ಕಲಾಸುರುಚಿ ತಂಡದವರು ನಾಗಭೂಷಣ್ ಪಿ. ನಿರ್ದೇಶನದಲ್ಲಿ ಪ್ರದರ್ಶಿಸಿದರು. ಹಿಂದಿ ರೂಪಾಂತರ ಪ್ರತಿಭಾ ಅಗರವಾಲ್ ಅವರದು ಮತ್ತೇ  ಕನ್ನಡಕ್ಕೆ  ಶಾರದಾ ವೆಂಕಟಸುಬ್ಬಯ್ಯ ತಂದಿದ್ದಾರೆ.
 ವಂಶವೃಕ್ಷ ಒಂದು ವಂಶದ ಪರಂಪರೆಯ ಕಥೆ. ಈ ಪರಂಪರೆಯಲ್ಲಿ ಕಂಡುಬರುವ ಬಿರುಕಿನ ಕಥೆ ಇಂದಿನ ನಮ್ಮ ಬದುಕಿನಲ್ಲೂ ಪ್ರತಿಫಲಿಸುತ್ತದೆ. ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯವರದು ಆತ್ರೇಯ ಗೋತ್ರಕ್ಕೆ ಸೇರಿದ ಸಂಸ್ಕಾರ ಸಂಪ್ರದಾಯನಿಷ್ಠ ಮನೆತನ. ಈ ಪಾತ್ರದಲ್ಲಿ ಎನ್.ಧನಂಜಯ ಅವರು ತುಂಬು ಗಾಂಭೀರ್ಯ ನಡೆನುಡಿ ಅಭಿನಯದಲ್ಲಿ ಜೀವ ತುಂಬಿದರು. ಇವರ ಧರ್ಮಪತ್ನಿ ಭಾಗೀರಥಿ ಪಾತ್ರದಲ್ಲಿ ದೀಪಾ ರವಿಶಂಕರ್ ಕೂಡ ಅಷ್ಟೇ ಗಮನ ಸೆಳೆದರು. ಇವರ  ಮಗ ನಂಜುAಡ ಆಕಸ್ಮಿಕವಾಗಿ ಕಪಿಲಾ ನದಿಯಲ್ಲಿ ಜಾರಿಬಿದ್ದು ಸಾವಿಗೀಡಾಗಿದ್ದಾನೆ.  ಸೊಸೆ ಕಾತ್ಯಾಯಿನಿ ಚಿಕ್ಕ ವಯಸ್ಸಿಗೆ ವಿಧವೆ ಆಗಿದ್ದಾಳೆ. ಅವಳ ಓದಿನ ಆಕಾಂಕ್ಷೆಗೆ  ಮಾವ ಅಡ್ಡಿಯಾಗದೇ ಕಾಲೇಜಿಗೆ ಕಳಿಸುತ್ತಾನೆ. ಈ ಪಾತ್ರವನ್ನು ಅದಿತಿ ಕೂಡ ಸಮರ್ಥವಾಗಿ ನಿಭಾಯಿಸಿದರು.  ಅಲ್ಲಿ  ರಾಜಾರಾವ್ ಎಂಬ ಅಧ್ಯಾಪಕನ ಪರಿಚಯ ಪ್ರೇಮಕ್ಕೆ ತಿರುಗಿ ಗಂಡನ ಮನೆ ತೊರೆಯುತ್ತಾಳೆ. ಇತ್ತ ನಂಜುAಡ ಶ್ರೋತ್ರಿಯ ಮಗ ಚೀನಿ ತನ್ನ ತಾತ ಶ್ರೀನಿವಾಸ ಶ್ರೋತ್ರಿಗಳ ಆರೈಕೆಯಲ್ಲಿ ಬೆಳೆದು ದೊಡ್ಡವನಾಗುತ್ತಾನೆ.  ಶ್ರೀನಿವಾಸ ಶ್ರೋತ್ರಿಗಳಿಗೆ ತಮ್ಮ ಹುಟ್ಟಿನ ರಹಸ್ಯ ಮನೆಯಲ್ಲೇ ಇದ್ದ ಲಕ್ಷಿö್ಮÃಯಿಂದ ತಿಳಿಯುತ್ತದೆ. ತಾನು ಶ್ರೋತ್ರೀಯ ವಂಶದವನಲ್ಲವೆAಬ, ತನ್ನದು ಆತ್ರೇಯ ಗೋತ್ರವೂ ಅಲ್ಲ ಬದಲು ಶಾಮದಾಸನೆಂಬ ಹರಿಕಥೆದಾಸರಿಗೆ ತನ್ನ ತಾಯಿಯ ಅನೈತಿಕ ಸಂಬAಧದಿAದ ಹುಟ್ಟಿದÀವನೆಂದು ತಿಳಿದು ಹತ್ತಾನಾಗುತ್ತಾನೆ. ತಾನು ಆವರೆಗೂ  ನಂಬಿಕೊAಡು ಬಂದ ಆಚಾರ ವಿಚಾರ ಸಂಸ್ಕಾರಗಳೆಲ್ಲಾ ಎಷ್ಟು ಸುಳ್ಳು ಎಂಬ ಕಟು ಸತ್ಯ ಅರಿವಾಗಿ ಅತನ ಸ್ವಾಭಿಮಾನಿ ಕಟ್ಟಡÀ ತಳಹದಿ ಕುಸಿಯುತ್ತದೆ.  ಜಿಗುಪ್ಸೆಗೊಂಡು  ಶ್ರೋತ್ರಿಗಳು ವಾರಸುದಾರರು ಸಿಗದೆ ಎಲ್ಲವನ್ನೂ ದಾನ ಮಾಡುತ್ತಾರೆ.  ಇತ್ತ ಕಾತ್ಯಾಯಿನಿಯಾದರೂ  ಓದಿನ ನಂತರ  ಕಾಲೇಜು ಅದ್ಯಾಪಕಿಯಾಗಿದ್ದಾಳೆ. ಅದೇ ಕಾಲೇಜು ಸೇರುವ ಚೀನಿ ಅವಳನ್ನು ಗುರುತಿಸಲೂ ಇಷ್ಟಪಡದೆ ಕಾಲೇಜು ತೊರೆಯುತ್ತಾನೆ. ಮರುಮದುವೆದ ಕಾತ್ಯಾಯಿನಿಗೆ ಮಕ್ಕಳಾದೆ ಕರ್ತವ್ಯ ಧರ್ಮಗಳ ತೊಳಲಾಟದಲ್ಲಿ ಸಿಲುಕಿ ಸಾವನ್ನಪ್ಪುತ್ತಾಳೆ. ಮುಂದೆ  ಶ್ರೋತ್ರಿಗಳು ರಾಜಾರಾವ್‌ರನ್ನು ಭೇಟಿಯಾಗಿ ಆತ ತನ್ನ ಚಿಕ್ಕಪ್ಪನ ಮೊಮ್ಮಗನೇ ಎಂದು ತಿಳಿದು ಖಿನ್ನರಾಗುತ್ತಾರೆ. ಪ್ರಬುದ್ಧ ಮನಸ್ಸಿನ ಪರಿಪಕ್ವ ವ್ಯಕ್ತಿತ್ವದ ಶ್ರೀನಿವಾಸ ಶ್ರೋತ್ರಿಗಳು ಲೌಕಿಕ ಬದುಕಿನ ವ್ಯಾಮೋಹ ತೊರೆದು ಬೆಳಕಿನ ಪಥದತ್ತ ಸಾಗುತ್ತಾರೆ.

 ಪ್ರಯೋಗದಲ್ಲಿ ಕೆಲವು ಬದಲಾವಣೆಗಳನ್ನು ಸನ್ನಿವೇಶಕ್ಕೆ ಪೂರಕ ಹಾಡುಗಳನ್ನು ಸಂಯೋಜಿಸಿದ್ದು (ರಚನೆ: ಪ್ರೊ.ಡಿ.ಎ.ಶಂಕರ್) ಗಂಭೀರ ನಾಟಕಕ್ಕೆ ರಂಜನೆ ನೀಡಿದೆ.   ಹಾಡುಗಾರಿಕೆಯಲ್ಲಿ ಸುಮನಾ, ನಿಸರ್ಗಾ, ವಿಸ್ಮಯ ತಂಡ ಮತ್ತು ಇವರಿಗೆ ಸಂಗೀತ ಸಾಂಗತ್ಯದಲ್ಲಿ ವಿದ್ವಾನ್ ಪುಟ್ಟಣ್ಣಯ್ಯ ವೈ.ಎಂ. ಅವರ  ಹರ‍್ಮೋನಿಯಂ ಕೀಬೋರ್ಡ್ನ್ನು ಮೀರಿಸುತ್ತದೆ. ಮಹದೇವ್ ತಬಲ ಸಾತ್ ನೀಡಿದರು.  ನಾಟಕದಲ್ಲಿ ಬರುವ ಲಕ್ಷಿö್ಮ ಪಾತ್ರದಲ್ಲಿ ವಿಜಯಲಕ್ಷಿö್ಮ ಎಂ. ಚೀನಿಯಾಗಿ ಬಾಲಾಜಿ ಎಂ.ಎನ್. ಹಾಗೂ ಸದಾಶಿವರಾವ್ ಪಾತ್ರವನ್ನು ಮಂಜುನಾಥ್ ಎಂ.ಎನ್ ನಿಭಾಯಿಸಿದರು.   ರಾಜಾರಾವ್ ಆಗಿ  ಉಲ್ಲಾಸ್ ಎಚ್.ಎಸ್. ಹಾಗೂ ಅನಂತ ಮೇಷ್ಟುç ಪಾತ್ರವನ್ನು ಪ್ರದೀಪ್ ಎಂ. ನಿರ್ವಹಿಸಿದರು. ಬೆಳಕು: ಮಧುಸೂದನ್ ನೀನಾಸಂ,  ರಂಗಸಜ್ಜಿಕೆ ನರಸಿಂಹಕುಮಾರ್. ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶಯ ನುಡಿಯಲ್ಲಿ ಸಾಹಿತಿ ವಿಮರ್ಶಕರು ಕೆ.ಸತ್ಯನಾರಾಯಣ ಅರ್ಥಪೂರ್ಣವಾಗಿ  ಮೂವರು ಸಾಹಿತಿಗಳ ಒಟ್ಟಾರೆ ಸಾಹಿತ್ಯವನ್ನು ತಮ್ಮ ಟೈಮ್ ಲಿಮಿಟ್‌ನಲ್ಲಿ ಚೆನ್ನಾಗಿಯೇ ಕಟ್ಟಿಕೊಟ್ಟರು. ಸುಧೀಶ್ ವೆಂಕಟೇಶ್, ಮುಖ್ಯ ಸಂವಹನಾಧಿಕಾರಿಗಳು ಪ್ರಾಸ್ತಾವಿಕ ನುಡಿ, ಸಂಸ್ಥೆಯ ಮಹೇಶ್ ಕುಮಾರ್ ಸಿ.ಎಸ್. ರಾಘವೇಂದ್ರ ಹೇರ್ಳೆ, ಎಸ್.ವಿ.ಮಂಜುನಾಥ್ ಅವರ ಕಾರ್ಯ ತತ್ಪರತೆ ಮೂವರು ಸಾಹಿತಿಗಳ ಚಿತ್ರಪಟಗಳ ಸಂಗ್ರಹಣೆ ಪ್ರದರ್ಶನ ಏರ್ಪಾಡು ಮೆಚ್ಚತಕ್ಕದ್ದು. ಇದು ಅಜೀಂ ಪ್ರೇಮ್‌ಜಿ ವಿಶ್ವ ವಿದ್ಯಾಲಯ, ಬೆಂಗಳೂರು ಇವರ ೮ನೇ ಸಾಹಿತ್ಯ ಸಹವಾಸ ಕಾರ್ಯಕ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನು ವಿಶೇಷವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕ್ರಮ ರೂಪಿಸಲು ಕಾರ್ಯಕ್ರಮ ಯಶಸ್ವಿಯೇ ನಮಗೆ ಸ್ಫೂರ್ತಿ, ಪ್ರೇರಣೆಯಾಗುತ್ತದೆ ಎಂಬ ಸಂಸ್ಥೆಯ ಆಶಯಕ್ಕೆ ಕಾಲೇಜು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕಾಗಿದೆ.  


About The Author

Leave a Reply

You cannot copy content of this page

Scroll to Top