ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


 
 *ಒಂದೇ ಪ್ರೀತಿಯ ಪಯಣದ*
 *ಮೂರು ಸುಂದರ ಅಧ್ಯಾಯಗಳು*

ನನ್ನ ಅಪ್ಪ,
ನನ್ನ ಮಕ್ಕಳ ಅಪ್ಪ,
ನನ್ನ ಮೊಮ್ಮಕ್ಕಳ ಅಪ್ಪ.

ಸಂಸ್ಕಾರವಂತ ನನ್ನಪ್ಪ ಮೂಲ ಬೇರು
ಸದ್ಗುಣವಂತ ನನ್ನ ಮಕ್ಕಳ ಅಪ್ಪ ಗುರು
ಬುದ್ಧಿವಂತರು ಮೊಮ್ಮಕ್ಕಳ ಅಪ್ಪಂದಿರು
ಸೌಭಾಗ್ಯವಂತೆ ನಾ ಕಂಡ ಪುರುಷರು||

ಅಪ್ಪ ಸುಂದರ ಭವಿಷ್ಯಬೀಜ ಬಿತ್ತಿದರು
ಪತಿಯು ಕನಸುಗಳಿಗೆ ರೆಕ್ಕೆ ಕಟ್ಟಿದರು
ಮಗ ಅಳಿಯಂದಿರು ಸಾಕಾರಿಸಿದರು
ಪುಣ್ಯವಂತೆ  ನಾ ಕಂಡ ಪುರುಷರು||

ನನ್ನಪ್ಪ ನೀತಿ ತ್ಯಾಗದ ಮಹಾಸಾಗರ,
ಮಕ್ಕಳ ಅಪ್ಪ ಸತ್ಯ ಪ್ರೀತಿಯ ಆಗರ
ಮೊಮ್ಮಕ್ಕಳ ಅಪ್ಪ ಜ್ಞಾನದ ಭಂಡಾರ
ಭಾಗ್ಯವಂತೆ ಜೀವನ ಆನಂದಸಾಗರ||

ಸಂಸಾರದ ರಥ ಎಳೆಯುವ ಸಾರಥಿ
ಪತ್ನಿಯ ಪ್ರೀತಿ ವಿಶ್ವಾಸದ ಸಂಗಾತಿ
ಕುಟುಂಬ ಜವಾಬ್ದಾರಿಯ ಸತ್ಯವೃತಿ
ಅಪ್ಪನೆಂದರೆ ನಿಷ್ಕಾಮಕರ್ಮಯೋಗಿ||

ಗಂಭೀರತೆ, ಸಮಾನತೆ ಏಕತೆ ಪ್ರತೀಕ
ಮಮತೆಯ ಮಹಾಕಾವ್ಯದ ಸಂಕೇತ
ವ್ಯಕ್ತವಾಗದ ಪ್ರೀತಿಯ ಮೌನ ಆರಕ್ಷಕ
ಸೂರ್ಯನಂತೆ ಬೆಳಕನೀವ ನಾಯಕ|

ಈ ದಿನ ವಿಶ್ವ ಅಪ್ಪಂದಿರ ಶುಭದಿನ
ಮನಃಪೂರ್ವಕ ಶುಭ ಕೋರುವೆನು
ನಾ ಕಂಡ ಕಾಣುತ್ತಿರುವ ಪ್ರೀತಿ ಪಯಣ
ಸುಂದರ ಮೂರು ಅಧ್ಯಾಯಗಳನ್ನು||


About The Author

Leave a Reply

You cannot copy content of this page

Scroll to Top